Advertisement

Category: ಅಂಕಣ

ನಂಬಿ ಬದುಕಿದವರ ಕಥೆ

ಝುಹೆಬಾನ್ ಎಂಬ ಮಧ್ಯವಯಸ್ಕನೊಬ್ಬರನ್ನು ಮಾತಿಗೆಳೆದಾಗ ಅವರು ದರ್ಗಾಹದ ಇತಿಹಾಸವನ್ನು ಬಿಚ್ಚಿಡುತ್ತಾ ಹೋದರು. ಸುಮಾರು ಎರಡುನೂರ ಎಪ್ಪತ್ತೈದು ವರ್ಷಗಳ ಹಿಂದೆ ಟಿಪ್ಪು ಮಸ್ತಾನ್, ಮಾಣಿಕ್ ಮಸ್ತಾನ್ ಮತ್ತು ತವಕ್ಕಲ್ ಮಸ್ತಾನ್ ಎಂಬ ಮೂವರು, ನವಾಬ್ ಹೈದರ್ ಆಲಿ ಕಟ್ಟಿಸುತ್ತಿದ್ದ ಕಲ್ಲಿನರಮನೆಯ ಕೆಲಸಕ್ಕೆಂದು ಬಂದರು. ಧರ್ಮನಿಷ್ಠರಿದ್ದ ಆ ಮೂವರೂ ಕೆಲಸವೇ ದೇವರೆಂದು ದುಡಿಯುತ್ತಿದ್ದರೂ ಪಗಾರದ ದಿನ ಮಾತ್ರ ಕಾಣೆಯಾಗಿಬಿಡುತ್ತಿದ್ದರಂತೆ!
ದಾದಾಪೀರ್‌ ಜೈಮನ್‌ ಬರೆಯುವ ‘ಜಂಕ್ಷನ್‌ ಪಾಯಿಂಟ್‌’ ಅಂಕಣ

Read More

‘ಊಲುರು ಮಾತು’ ಎಂಬ ಹೊಸ ಭಾಷ್ಯ

ದೇಶೀಯ ಮಟ್ಟದಲ್ಲಿ ಆಡಳಿತ ನಡೆಸುವ ಪಾರ್ಲಿಮೆಂಟಿಗೆ ಅಬೊರಿಜಿನಲ್ ಜನರ ಸಮಿತಿಯನ್ನು ನೇಮಿಸಿ ಅವರ ದನಿಗೆ ಪುನಃಶ್ಚೇತನ ಕೊಡುವ ಭರವಸೆಯನ್ನು ಆಸ್ಟ್ರೇಲಿಯಾದ ಹೊಸ ಸರ್ಕಾರ ನೀಡಿದೆ.  ಅಷ್ಟೇ ಅಲ್ಲ, ದೇಶದ ಸಂವಿಧಾನದಲ್ಲಿ ಅವರ ದನಿಯನ್ನು ಸೇರ್ಪಡಿಸುವ ಮಾತನ್ನು ಕೊಟ್ಟಾಗಿದೆ. ಹೊಸ ಪ್ರಧಾನಮಂತ್ರಿಗಳ ಮಾತಿನಿಂದ ಅಬೊರಿಜಿನಲ್ ಜನಸಮುದಾಯಗಳ ನಾಯಕರಲ್ಲಿ, ಹಿರಿಯರಲ್ಲಿ ಸಂಚಲನೆ ಮೂಡಿದೆ. ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮಾ ಅವರು ಆಸ್ಟ್ರೇಲಿಯಾದ ವರ್ತಮಾನಗಳನ್ನು ಬರೆದಿದ್ದಾರೆ. 

Read More

ರಾಜಕೀಯ ಹಾದಿಯಲ್ಲಿ ಕಂಡ ಪ್ರಾಮಾಣಿಕ ನುಡಿಗಳು

ಬಿ.ಎ. ಮೊಹಿದೀನ್ ಅವರು ಜೀವನದಲ್ಲಿ ಇಟ್ಟುಕೊಂಡ ಮೌಲ್ಯಗಳು ಅನುಕರಣೀಯವಾದುದು. ತಾನು ಚುನಾವಣೆಗೆ ನಿಂತಾಗ ಮಸೀದಿ ದೇವಾಲಯ ಚರ್ಚುಗಳಿಗೆ ಮತಕೇಳಲು ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅದನ್ನು ಹಟಬಿಡದೇ ಪಾಲಿಸಿದವರು ಅವರು. ತಾವು ಹುಟ್ಟಿಬಂದ ಸಮುದಾಯದ ಏಳಿಗೆಗಾಗಿ ಮೊಹಿದೀನ್ ಅವರಿಗಿದ್ದ ಕಾಳಜಿ ಪ್ರಶ್ನಾತೀತವಾದುದು.
ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ

Read More

ವಿದಾಯದಲ್ಲೂ ಬೆಳೆವ ಪ್ರೀತಿ

‘ಎಲ್ಲಾ ಕ್ಯಾಲ್ಕುಲೆಟ್ ಮಾಡಿ ಪ್ರೀತ್ಸಕೆ ಇದು ಅರೆಂಜ್ ಮ್ಯಾರೇಜ್ ಅಲ್ಲ. ಅವನನ್ನು ನೋಡಿದ್ರೆ ನನ್ನ ಎದೆಬಡಿತ ಹೆಚ್ಚಾಗತ್ತೆ. ಅವನ ಸಮುದ್ರದಂತಹ ಕಣ್ಣುಗಳ ಸೆಳೆತದಿಂದ ಪಾರಾಗೋದಿಕ್ಕೆ ಆಗದೆ ಇಲ್ಲ…’ ಎಂದು ಹೇಳುತ್ತಿದ್ದವನನ್ನು ತಡೆದು ‘ಇವೆಲ್ಲಾ ಮೊದಲ ನೋಟದಲ್ಲೇ ಆಯ್ತೆನೋ ಸಾಹೇಬ್ರಿಗೆ?!’ ಎಂದು ಕೇಳಿದಾಗ ಅವನು ಕೊಟ್ಟ ಉತ್ತರ ಅದೆಷ್ಟು ಸಮಂಜಸ ಅನಿಸುತ್ತದೆ… ಅವನು ಹೇಳಿದ; ‘ನೀ ಏನೇ ಅನ್ನು, ಮೊದಲ ನೋಟ, ಮೊದಲ ಗುರುತುಗಳೇ ನಮ್ಮನ್ನು ಸಾಹಸಿಗಳನ್ನಾಗಿ ಮಾಡದು.
ದಾದಾಪೀರ್‌ ಜೈಮನ್‌ ಬರೆಯುವ ‘ಜಂಕ್ಷನ್‌ ಪಾಯಿಂಟ್‌’ ಅಂಕಣ

Read More

ನಗರ-ಬೆಟ್ಟಗಳ ಕಿರು ಕತೆಗಳು

ಬೆಟ್ಟ ಹತ್ತೋದು ಎಂದರೆ ರಾಷ್ಟ್ರೀಯ ರಕ್ಷಿತ ವನಗಳಲ್ಲಿ ಅರಣ್ಯ ಇಲಾಖೆಯ ರೇಂಜರುಗಳು ಸೊಗಸಾದ ದಾರಿ ಮಾಡಿರುತ್ತಾರೆ. ಅದೇ ದಾರಿಯಲ್ಲೆ ನಾವು ನಡೆದು, ಬೆಟ್ಟದ ಮೇಲಿರುವ ವ್ಯೂ ಪಾಯಿಂಟ್ ತಲುಪಿ ಸುತ್ತಮುತ್ತಲಿನ ಪ್ರದೇಶಗಳನ್ನು ಪಕ್ಷಿನೋಟದಲ್ಲಿ ನೋಡುವುದು. ದಾರಿ ಬಿಟ್ಟು ಅಕ್ಕಪಕ್ಕ ಇರುವ ಕಾಡಿನಲ್ಲಿ ತಿರುಗಾಡುವಂತಿಲ್ಲ. ರಕ್ಷಿತ ವನ ಅಥವಾ ಕಾಡು ಎನ್ನುವ ಎಚ್ಚರಿಕೆಯನ್ನು ಪಾಲಿಸಿಯೇ ಮುಂದುವರೆಯಬೇಕು. ಇದರಿಂದ ಪರಿಸರಕ್ಕೆ ಒಳ್ಳೆಯದು. ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ