Advertisement

Category: ಅಂಕಣ

ನ್ಯಾಯದ ವಿವಿಧ ಮುಖಗಳ ಕತೆಗಳು

ಇದ್ಯಾಕೆ ಹೀಗೆ ಎಂದು ಪ್ರಶ್ನಿಸಿಕೊಂಡರೆ ಆಸ್ಟ್ರೇಲಿಯಾದ ಪಾಳೆಗಾರಿಕೆ ಮತ್ತು ವಸಾಹತುಶಾಹಿ ಚರಿತ್ರೆ ಬಿಚ್ಚಿಕೊಳ್ಳುತ್ತದೆ. ನಡೆದು ಹೋದ ಕರಾಳ ಚಾರಿತ್ರಿಕ ಘಟನೆಗಳು, ಅಬೊರಿಜಿನಲ್ ಜನರ ಮಾರಣಹೋಮ, ಅವರನ್ನು ಗುಲಾಮಗಿರಿಗೆ ಒಳಪಡಿಸಿದ್ದು, ಅವರ ಮಕ್ಕಳನ್ನು ಕದ್ದು ಬಲವಂತವಾಗಿ ಅವರಿಗೆ ‘ಸಂಸ್ಕೃತಿ ಪಾಠ’ ಕಲಿಸಿದ್ದು, ಬಿಳಿಯರ ಆಳ್ವಿಕೆ, ಆಡಳಿತ, ‘ವೈಟ್ ಆಸ್ಟ್ರೇಲಿಯಾ’ ಕಾಯಿದೆ/ಕಾನೂನು ಪಾಲನೆ, ಸಮಾಜದಲ್ಲಿ ಆಳವಾಗಿ…

Read More

ಬರವಣಿಗೆ ಎಂಬ ಅಫೀಮು

ಎಲ್ಲರಿಗೂ ಸಮನಾಗಿ ಸಿಗುವ ಇಪ್ಪತ್ನಾಲ್ಕೇ ಘಂಟೆಗಳನ್ನು ಇವರೆಲ್ಲ ತಡೆದು ನಿಲ್ಲಿಸಿದರು ಹೇಗೆ? ಜೀವನಕ್ಕೆ ಬೇಕಾದ ಹಣ ಸಂಪಾದಿಸಿದರು ಹೇಗೆ? ಮನೆಯನ್ನು ತೂಗಿಸಿದರು ಹೇಗೆ? ಅರೆ ಹೊಟ್ಟೆ ಉಂಡೇ ಎಷ್ಟು ರಾತ್ರಿ ಕಳೆದರು? ಅಷ್ಟಾಗಿಯೂ ಒಂದೊಳ್ಳೆಯ ಪುಟ ಬರೆದ ಮೇಲೆ ಅವರ ತುಟಿಯ ಮೇಲೆ ಮೂಡಿದ ಮುಗುಳೆಂಥದು? ಅಪಹಾಸ್ಯಕ್ಕೊಳಗಾದರೇ? ಪ್ರೀತಿಸುವವರಿಂದ ದೂರವಾದರೇ? ಅವರು ತಮ್ಮ ಬರವಣಿಗೆಗಾಗಿ ತೆತ್ತ ಬೆಲೆಯೆಂಥದು? ಕಲೆಯಿಂದ ಸಿಗುವ ಸುಖ ಈ ಎಲ್ಲವನ್ನೂ ಮೀರಿದ್ದೇ?

Read More

ಮಹಿಳಾ ಯುದ್ಧಸ್ಮಾರಕಗಳ ಹುಡುಕುತ್ತಾ ಕಂಡ ಸತ್ಯಗಳು

ಯುದ್ಧಗಳೇಕೆ ನಡೆಯುತ್ತವೆ ಎಂದು ಯೋಚಿಸುತ್ತಾ, ಸ್ಕಾಟ್‍ ಲ್ಯಾಂಡ್‍ನಲ್ಲಿ  ಯಾಂತ್ರಿಕವಾಗಿ ಆ ವಸ್ತು ಸಂಗ್ರಹಾಲಯವನ್ನು ನೋಡುತ್ತಿದ್ದಾಗ ‘ಹಾಲ್ ಆಫ್ ಆನರ್’ ಎನ್ನುವ ಇಪ್ಪತ್ತು ಅಡಿ ಉದ್ದ ಅಗಲವಿದ್ದ ಕೋಣೆಯಲ್ಲಿ ಕೆಂಪು ಬಣ್ನದ ಲೆದರ್ ಬೈಂಡಿಂಗ್ ಹೊಂದಿದ್ದ ವಿಪರೀತ ದಪ್ಪವಾದ ಒಂದು ಪುಸ್ತಕ ಕಂಡಿತು. ಅದರ ಹಿಂದೆಯೇ ಅದಕ್ಕೇ ಆತುಕೊಂಡಿದ್ದಂತೆ ನಿಂತಿದ್ದ ಗಾಜಿನ ಗೋಡೆ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ನೋಡಿದರೆ ಅದರಲ್ಲಿದ್ದ ಅಕ್ಷರಗಳನ್ನು ಓದಿ ಒಂದು ಕ್ಷಣ ದಂಗುಬಿಡಿದೆ.

Read More

ಸಾಸಿವೆ ತಂದವಳ ಅಕ್ಷರಗಳಲ್ಲಿ ಕಂಡ ಜೀವಚೈತನ್ಯ

ನೋವಿನಲ್ಲೂ ನಗುವನ್ನು ಹುಡುಕುವ, ಅಷ್ಟು ಯಾತನಾಮಯವಾದ ಬರಹಗಳನ್ನು ಬರೆಯುವಾಗಲೂ ನಮ್ಮನ್ನು ನಗಿಸಲು ಪ್ರಯತ್ನಿಸುವ ಅವರ ಬರಹಗಳ ಮೆಚ್ಚಲೇಬೇಕು. ಇದು ಅವರ ಯಾತನಾಮಯವಾದ ಒಂದು ವರ್ಷದ ವಿವರಣೆ ಮಾತ್ರವಲ್ಲ. ಹೇಗೆ ಅವರು ಅದನ್ನು ಎದುರಿಸಿ ಎದ್ದು‌ನಿಂತರು, ಹೇಗೆ ಮನೋಬಲ ಬೆಳೆಸಿಕೊಂಡರು, ನಂತರ ಹೆದರಿ ಮನೆಯಲ್ಲಿ ಕೂರದೇ, ತಮ್ಮ ವೃತ್ತಿಗೆ ತೆರೆದುಕೊಂಡರು, ಬರೆಯಲಾರದಷ್ಟು ನಿಶ್ಯಕ್ತಿಯಿದ್ದರೂ ಕತೆ ಕವನಗಳ ಬರೆದರು, ತಮ್ಮ ಹವ್ಯಾಸಗಳನ್ನು ಕೂಡಾ…

Read More

ಆತ್ಮಾವಲೋಕನ ಎಂಬುದೊಂದು ಯುದ್ಧ

ಪ್ರಸಿದ್ಧ ರಂಗಶಾಲೆಗಳಲ್ಲಿ ಕಲಿತು ಹೊರಬರುವವರು ಮಿಕ್ಕವರಿಗಿಂತ ಒಂದು ಸ್ತರದ ಮೇಲೆ ಇರುತ್ತಾರೆ. ಯಾಕೆಂದರೆ ಅವರನ್ನು ಹಾಗೆ ತರಬೇತುಗೊಳಿಸಿರಲಾಗುತ್ತದೆ. ಅವರಿಗೆ ರಂಗಪಠ್ಯವನ್ನು ಅಭ್ಯಾಸ ಮಾಡಿಸುವ ಕ್ರಮವೇ ಬೇರೆ. ನಟನೆ ಮತ್ತು ನಟರ ಆಯ್ಕೆ ನಂತರದ ಕೆಲಸ. ಮೊದಲು ರಂಗಪಠ್ಯದ ಸಾರಸರ್ವದ ಬಗ್ಗೆ ಚರ್ಚೆಗಳು ಆರಂಭವಾಗುತ್ತವೆ. ಆ ರಂಗನಾಟಕ ರೂಪಕವಾಗಿ ಅರಳಿಕೊಂಡಿರುವ ಬಗೆಯನ್ನು ಬೆರಗಿನಲ್ಲಿ ಅರ್ಥೈಸಲಾಗುತ್ತದೆ. ನಂತರ ಪ್ರತಿಯೊಂದು ಪಾತ್ರ, ಅದರ ಅನನ್ಯತೆಯನ್ನು ವಿವರಿಸಲಾಗುತ್ತದೆ. ಚಿಕ್ಕ ಪಾತ್ರ ದೊಡ್ಡ ಪಾತ್ರದ ವರ್ಗೀಕರಣವನ್ನು ಮೊದಲು ಇಲ್ಲವಾಗಿಸುತ್ತಾರೆ.
ಎನ್.ಸಿ. ಮಹೇಶ್‌ ಬರೆಯುವ ರಂಗ ವಠಾರ ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ