Advertisement

Category: ಅಂಕಣ

ದಾಂಪತ್ಯ ವ್ಯವಸ್ಥೆಯ ಕಟು ವಿಮರ್ಶೆ

ಹಾಗೆ ನೋಡಿದರೆ ಸ್ವಾತಂತ್ರ್ಯ ಚಳವಳಿ- ಮುಖ್ಯವಾಗಿ ರಾಷ್ಟ್ರೀಯತೆಯ ಉಚ್ಛ್ರಾಯದ ಸಂದರ್ಭದಲ್ಲಿ ಹೆಣ್ಣಿನ ಸ್ಥಾನಮಾನ, ಶಿಕ್ಷಣ ಮೊದಲಾದವುಗಳ ಬಗ್ಗೆ ಬಹಳ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯಿತು. ಕನ್ನಡದ ಮೊದಲ ಕಾದಂಬರಿಗಳಲ್ಲಿ ಮತ್ತು ಭಾರತದ ಇತರ ಭಾಷೆಗಳ ಆರಂಭದ ಕಾದಂಬರಿಗಳಲ್ಲೂ ಹೆಣ್ಣಿನ ಪ್ರಶ್ನೆ ಬಹಳ ಮುಖ್ಯವಾಗಿ ಚರ್ಚಿತವಾಯಿತು. ಹಾಗಿದ್ದರೂ ಹೆಣ್ಣಿನ ಸ್ಥಿತಿಯಲ್ಲಿ ನಿರ್ಣಾಯಕವಾದ ಬದಲಾವಾಣೆ ಯಾಕೆ ಸಾಧ್ಯವಾಗಲಿಲ್ಲ? ಸ್ವಾತಂತ್ರ್ಯ ಚಳವಳಿ ತನ್ನ ತೀವ್ರತೆಯನ್ನು ಮುಟ್ಟಿದರೂ, ರಾಷ್ಟ್ರೀಯವಾದಿ ಭಾವನೆಗಳು ಪರಾಕಾಷ್ಠೆಗೆ ತಲುಪುತ್ತಿದ್ದರೂ ಸ್ತ್ರೀ ಸ್ವಾತಂತ್ರ್ಯದ ಪ್ರಶ್ನೆ ಯಾಕೆ ಇದ್ದಕ್ಕಿದ್ದಂತೆ ಗೌಣವಾಯಿತು ಎಂಬ ಬಗ್ಗೆ ಪಾರ್ಥಾ ಚಟರ್ಜಿಯಂಥ ಚಿಂತಕರು ಆಳವಾದ ಚಿಂತನೆ ನಡೆಸಿದ್ದಾರೆ.

Read More

ಹೀಗೊಂದು ‘ಭಿನ್ನ ಸಾಮಾನ್ಯ’ರ ಪ್ರೇಮಚರಿತೆ

‘ಜೀವನದಲ್ಲೊಂದು ಘಳಿಗೆ ಬಂದಿತು. ನಾನೊಬ್ಬ ಗೇ ಎನ್ನುವುದೇ ನನ್ನ ಟ್ರು ಐಡೆಂಟಿಟಿ ಎಂದು ಅನಿಸೋಕೆ ಶುರುವಾಯಿತು. ಆಗ ನಾನು ನನ್ನ ತಂದೆ ತಾಯಿಗೆ ಹೇಳಲೇಬೇಕಾಯಿತು. ಅಪ್ಪ ಮೊದಲಿಗೆ ನೀನು ಮನೆಗೆ ವಾಪಸ್ ಬರಬೇಕೆಂದರೆ ಅದೆಲ್ಲ ಬಿಡಬೇಕು ಎಂದರು. ಬಿಡುವುದಕ್ಕೆ ಅದೇನದು? ನನ್ನನ್ನ ನಾನಿರುವ ಹಾಗೆ ಒಪ್ಪಿಕೊಳ್ಳದಿದ್ದರೆ ನಾನು ಬರುವುದಿಲ್ಲ ಎಂದಿದ್ದೆ. ಕೂಡಲೇ ಫೋನ್ ಕಟ್ ಮಾಡಿದ್ದರು. ಆಮೇಲೇನಾಯಿತೋ ಏನೋ ಮತ್ತೆ ಅವರಿಂದ ಫೋನ್ ಬಂದಿತು… ನಾವಿಬ್ಬರು ಬೆಂಗಳೂರಿನಲ್ಲಿ ಜೊತೆಗಿರಲು ಶುರುಮಾಡಿದಾಗ ನಿನಗೊಬ್ಬಳು ಹೆಂಗಸು ಬೇಕೇ ಬೇಕು ಅಂದ್ರು.’

Read More

ಇಂತೀ, ನಿನ್ನ ಪ್ರೀತಿಸುವ…

ನನ್ನನ್ನು ಅನುಕೂಲಕ್ಕೆ ಬಳಸಿಕೊಂಡರೂ, ಅದು ನಾನೆ ಮನಸಾರೆಯಾಗಿ ಕೊಟ್ಟ ಅವಕಾಶ. ನನ್ನ ಮೇಲೆ ಪ್ರೀತಿ ಹೆಚ್ಚಲಿ ಎಂದಿದ್ದ ಸ್ವಾರ್ಥ. ಹಾಗೇನಾದರೂ ಯಾವತ್ತಾದರೂ ಮತ್ತೆ ನನ್ನನ್ನು ನಿನ್ನ ಅನುಕೂಲಕ್ಕೆ ಉಪಯೋಗಿಸಿಕೊಳ್ಳಬೇಕೆನಿಸಿದರೆ ನೆನಪಿಸಿಕೊ. ನನ್ನ ಮನಸ್ಸು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಪ್ರೀತಿ ಎಂದರೆ ಕೊಟ್ಟು ಕೊಳ್ಳುವ ವ್ಯಾಪಾರವಲ್ಲ, ಎಲ್ಲವನ್ನೂ ನೀಡುವ ತ್ಯಾಗವಲ್ಲ, ಕಸಿದುಕೊಳ್ಳುವ ದುರ್ಬುದ್ಧಿಯಲ್ಲ, ನಮಗಾಗಿಯೆ ಕೊಡುವ ಸ್ವಾರ್ಥ. ನೋಡುಗರಿಗೆ ಪ್ರೀತಿಯಲ್ಲಿ ಮೋಸ ಕಾಣಿಸಬಹುದು ಆದರೆ ಪ್ರೀತಿಸುವವರಲ್ಲಿ ಕಾಣಿಸಿದರೆ ಅದು ಪ್ರೀತಿಯೆ ಅಲ್ಲ.
ಪ್ರಶಾಂತ್‌ ಬೀಚಿ ಅಂಕಣ

Read More

ಆಸ್ಟ್ರೇಲಿಯ-ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಡುಪಾಡು

ಕೋವಿಡ್-೧೯ ವರ್ಷದಲ್ಲಿ ಓದುತ್ತಿದ್ದ ಕೆಲ ವಿದ್ಯಾರ್ಥಿಗಳು ರಜೆಗೆಂದು ತಮ್ಮೂರಿಗೆ (ದೇಶಕ್ಕೆ) ಹಿಂದಿರುಗಿ, ಇತ್ತ ವೈರಸ್ ಹಾವಳಿ ಹೆಚ್ಚಾಗಿ, ಅವರು ವಾಪಸ್ ಬರಲು ಆಗದೆ ತಮ್ಮ ಓದನ್ನು ಆನ್ಲೈನ್ ಮುಖಾಂತರ ಮುಂದುವರೆಸುವ ಫಜೀತಿಯಾಗಿತ್ತು. ಕೆಲವರು ಆಸ್ಟ್ರೇಲಿಯಾದಲ್ಲಿ ಇನ್ನೂ ಮನೆ ಬಾಡಿಗೆ ಕಟ್ಟುತ್ತಿದ್ದರು; ಸಾಮಾನು, ಸರಂಜಾಮುಗಳನ್ನು ಇಲ್ಲೇ ಇಟ್ಟಿದ್ದರು. ಪಾರ್ಟ್‌ ಟೈಮ್ ಕೆಲಸವಿದ್ದವರಿಗೆ ಕೆಲಸ ಹೋಯ್ತು. ವೀಸಾ ಮುಂದುವರೆಸಲು ಸರಕಾರ ಕೊಕ್ಕೆ ಹಾಕಿತು. ಡಿಗ್ರಿ ಮುಗಿಸಲೇ ಬೇಕು ಎನ್ನುವುದು ವಿದ್ಯಾರ್ಥಿ ವೀಸಾದ ಷರತ್ತು. ಡಾ.ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

Read More

ನಕ್ಷತ್ರ ಮಂಡಲ ಇರುವುದು ಎಲ್ಲಿ?

ಬಸವಣ್ಣ ಹೇಳಿದ “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂಬ ನುಡಿಯೇ ಈ ಕಾದಂಬರಿಯ ಧ್ಯೇಯವಾಕ್ಯ. ಪ್ರತೀ ಅಧ್ಯಾಯದಲ್ಲೂ ಇರುವ ಸರ್ವನಿಯಾಮಕ ಎಳೆಯೆಂದರೆ ಅದು ಸಂಚಾರ, ಚಲನೆ. “ಜಗತ್ತಿಗೆ ಒಂದು ಸ್ಥಳದಲ್ಲಿ ನೆಲೆ ನಿಲ್ಲದವರ ಮೇಲೆ ಏನು ದ್ವೇಷವೋ ಕಾಣೆ. ಅದಕ್ಕೇ ಸಂಚಾರವನ್ನು ಆಯ್ದುಕೊಂಡವರನ್ನೆಲ್ಲ ತಡವಿಲ್ಲದೇ ಹೊಡೆದುರುಳಿಸಿದೆ ಚರಿತ್ರೆ” ಎನ್ನುತ್ತಾಳೆ ಕಾದಂಬರಿಯ ನಿರೂಪಕಿ ಒಂದು ಕಡೆ. ಅವಳು ನಿರಂತರವಾಗಿ ಚಲನೆಯಲ್ಲೇ ಇರುವವಳು. ಅಂದರೆ ಪ್ರಪಂಚದ ಬೇರೆ ಬೇರೆ ಊರುಗಳಿಗೆ ಸೈಟ್ ಸೀಯಿಂಗಿಗೆಂದು ಹೋಗಿ ಬರುವವಳಲ್ಲ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ