Advertisement

Category: ಅಂಕಣ

ಮಾನವೀಯತೆಯ ಹಾದಿಯನ್ನು ಆರಿಸಿಕೊಂಡವರು..

ಭಾರತವೂ ಸೇರಿದಂತೆ ನಾಲ್ಕು ಖಂಡಗಳಲ್ಲಿ ಅಲ್ಪ ಸ್ವಲ್ಪ ದಿನ ಜೀವಿಸಿ, ಮನುಷ್ಯರಲ್ಲಿ ಎಷ್ಟೊಂದು ಸಹಾಯ ಜೀವಿಗಳು ಇದ್ದಾರೆ ಎಂದು ಸಂತಸವಾಗುತ್ತದೆ. ಕೆನಡಾಗೆ ಬಂದು ಮೂರು ವರ್ಷಗಳಲ್ಲಿ ಮೂರು ಊರುಗಳನ್ನು ಸುತ್ತಾಡಿ ಈಗ ಬಂದಿರುವುದು ಬ್ರಾಂಪ್ಟನ್ ಎನ್ನುವ ಸುಂದರ ನಗರಕ್ಕೆ. ಈ ಊರನ್ನು ಹೂವುಗಳ ಊರು ಎಂದು ಕರೆಯುತ್ತಾರೆ, ಭಾರತೀಯರೇ ಹೆಚ್ಚಾಗಿರುವ ಈ ಊರಿನಲ್ಲಿ, ಕನ್ನಡಿಗರೂ ಹೆಚ್ಚಾಗಿದ್ದಾರೆ. ಕನ್ನಡದ ಜನ ಕೆನಡಾಗೆ ಬಂದಾಗ ಮೊದಲು ಹುಡುಕುವುದೆ ‘ಕನ್ನಡ ಸಂಘ’.

Read More

ಭೋಳೇತನದ ನಡುವೆಯೂ ಅರಳುವ ರಿಫ್ರೆಶಿಂಗ್ ಚಿಂತನೆಗಳು

ಈ ಜಗದ ಆಟವನ್ನು ನಿಚ್ಚಳವಾಗಿ ಮತ್ತು ಕಲಾತ್ಮಕವಾಗಿ ಕಾಣಿಸುವ ಹೊಣೆಹೊತ್ತ ರಂಗಭೂಮಿಯವರು ಕೊರೋನ ಕೊಟ್ಟ ವಿರಾಮದಲ್ಲಿ ಕೊಂಚ ನಿರಾಳವಾಗಿದ್ದರು. ನಿಧಾನಕ್ಕೆ ರಂಗಚಟುವಟಿಕೆಗಳು ಗರಿಗೆದರಿಕೊಳ್ಳುತ್ತಿವೆ ಅನಿಸುವ ಹೊತ್ತಿಗೇ ಒಮೈಕ್ರಾನ್ ನಮ್ಮನ್ನು ಬೆರಳೆಣಿಸುತ್ತ ಕೂರುವಂತೆ ಮಾಡುತ್ತಿದೆ. ಇದು ಏರಿಕೆ ಕಂಡು ರಂಗಮಂದಿರಗಳು ಮತ್ತೆ ಮುಚ್ಚಲ್ಪಟ್ಟರೆ ಅಥವಾ ಕೇವಲ ಅರ್ಧದಷ್ಟು ಭರ್ತಿಗೆ ಅವಕಾಶ ಅಂತಾದರೆ ಮುಂದಿನ ಕಥೆ ಏನು ಎಂದು ಕೇಳಿಕೊಳ್ಳುವಂತಾಗಿದೆ. ಆದರೆ ಈ ಎರಡೂ ಎರಡೂವರೆ ವರ್ಷಗಳ ಪರ್ವ ಸಮಯದಲ್ಲಿ…

Read More

ದಾದಾಪೀರ್ ಜೈಮನ್ ಹೊಸ ಅಂಕಣ “ಜಂಕ್ಷನ್ ಪಾಯಿಂಟ್” ಇಂದು ಆರಂಭ

‘ನಾವು ಯಾವಾಗಲೂ ಹಾಗೆಯೇ ಅಲ್ಲವಾ? ನಮಗೆ ಗೊತ್ತಿರುವ ಯಾವುದೋ ಎಳೆ, ಬೇರೆಯವರ ಮಾತುಗಳಲ್ಲಿ ಬಂದಾಗ ಮಾತ್ರ ಅವರ ಮೇಲಿನ ವಿಶ್ವಾಸಾರ್ಹತೆ ಮತ್ತು ನಂಬಿಕೆ ಹೆಚ್ಚುತ್ತದೆ. ಅಲ್ಲೂ ಹೀಗೆ ಆಯಿತು’ ಎನ್ನುತ್ತ ಪೀಜಿ ಹಾಸ್ಟೆಲ್ ರೂಮ್ ನಲ್ಲಿ ನಡೆದ ಭೇಟಿಯೊಂದರ ಕುರಿತು ಬರೆದಿದ್ದಾರೆ ಹೊಸ ತಲೆಮಾರಿನ ಕಥೆಗಾರ ದಾದಾಪೀರ್ ಜೈಮನ್. ತಮ್ಮ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಯ ಸಂದರ್ಭದಲ್ಲಿ ಹೀಗೆ ಭೇಟಿಯಾದ ವ್ಯಕ್ತಿಗಳ ಕುರಿತು, ಸನ್ನಿವೇಶಗಳ ಕುರಿತು ಅವರು ತಮ್ಮ ಹೊಸ ಅಂಕಣ…

Read More

ತಮಿಳಿನ ಮೂರು ಆ್ಯಂಥಾಲಾಜಿ ಸಿನೆಮಾಗಳು

ಈ ಸಿನೆಮಾದ ಎಲ್ಲ ಕತೆಗಳೂ ನಗರದ ಕತೆಗಳು. ಇತ್ತೀಚೆಗೆ ಬರುತ್ತಿರುವ ಭಾರತದ ವಿವಿಧ ಭಾಷೆಗಳ ಹೊಸ ಅಲೆಯ ಸಿನೆಮಾಗಳು ಹಳ್ಳಿಗಳಲ್ಲಿ ನಡೆಯದೇ ನಗರಗಳಲ್ಲಿ ನಡೆಯುತ್ತಿರುವುದನ್ನು ಗಮನಿಸಿ. ಇದು ನಿರ್ದೇಶಕರು ನಗರಗಳಲ್ಲಿ ಹುಟ್ಟಿ ಬೆಳೆದುದರ ಪರಿಣಾಮವೂ ಹೌದು ಮತ್ತು ಭಾರತ ನಗರೀಕರಣವಾಗುತ್ತಿರುವ ಪರಿಣಾಮವೂ ಎಂದು ಅನಿಸುತ್ತದೆ. ಕತೆಗಳು ಮೇಲ್ಮಧ್ಯಮ ಅಥವಾ ಶ್ರೀಮಂತ ವರ್ಗಗಳ ಮನೆಗಳಲ್ಲಿ ನಡೆಯುತ್ತವೆ, ಓಟಿಟಿಯಲ್ಲಿ ನೋಡಿದ ತಮಿಳಿನ ಮೂರು ಆ್ಯಂಥಾಲಾಜಿ ಸಿನೆಮಾಗಳ ಬಗ್ಗೆ ‘ಇಂಗ್ಲೆಂಡ್‌ ಪತ್ರ’ ಬರೆದಿದ್ದಾರೆ ಕೇಶವ ಕುಲಕರ್ಣಿ

Read More

‘ಆಲ್ ಈಸ್ ಕಾಮ್’ ಎನ್ನುವ ಕ್ರಿಸ್ಮಸ್ ಹಬ್ಬ

ಅದು ಚಳಿಗಾಲದಲ್ಲಿ ಬರುವ ಒಂದು ಸಂಕ್ರಮಣದ ದಿನ. ಆ ದಿನದಿಂದ ಸೂರ್ಯನ ಬೆಳಕು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ‘ಆಲ್ ಈಸ್ ಬ್ರೈಟ್’ ಎನ್ನುವ ಪದಗಳಿಗೆ ಹೊಸ ಅರ್ಥ ಹೊಳೆಯುತ್ತದೆ. ಹೊಸ ಬೆಳಕನ್ನ, ಸೂರ್ಯ ರಶ್ಮಿಯನ್ನ ತರುವ ಚೇತನವೊಂದು ಪ್ರಕೃತಿಯಲ್ಲಿ ಮೂಡಿತೇನೊ ಎನ್ನುವ ನಂಬಿಕೆ ಹುಟ್ಟುತ್ತದೆ. ರೋಮನ್ನರು ಆ ದಿನವನ್ನೇ ಪ್ರಶಸ್ತವೆಂದು ಆರಿಸಿಕೊಂಡರು. ಅವರು ‘ಧರ್ಮಬಾಹಿರ’ವೆಂದು ತಿಳಿದಿದ್ದ ಪೇಗನ್ ಸಂಸ್ಕೃತಿಯ ಹಬ್ಬಗಳ ಹುಟ್ಟಡಗಿಸಲು ಕೂಡ ಡಿಸೆಂಬರ್ ತಿಂಗಳನ್ನ….

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ