ಕಣ್ಮರೆಯಾಗುತ್ತಿರುವ ದೇಸೀ ಕಥನ, ಕಸುಬು ಹಾಗೂ ಅವುಗಳು ಪೊರೆದ ನುಡಿಸಂಪತ್ತು
ಒಂದು ದಿನ ಸಂಜೆ ಬುಡುಗೊಚ್ಚ ಕೊಪ್ಪಲಿನ ಮೆದೆಯಲ್ಲಿ ಹುಲ್ಲು ಹಿರಿಯುತ್ತಿದ್ದನಂತೆ. ಆಗ ಆಕಾಶದ ಕಡೆಯಿಂದ ಬೆಳ್ಳನೆಯ ಬೆಳಕೊಂದು ಇಳುಕಂಡು ಬಂದು ಅವನೆದುರಿನ ಬೇಲಿಯನ್ನು ಹೊಕ್ಕಿತ್ತಂತೆ. ಕಣ್ಮುಚ್ಚಿ ಬಿಡುವುದರೊಳಗೆ ಆ ಬೆಳಕು ಬೇಲಿಯನ್ನೆಲ್ಲಾ ಆವರಿಸಿಕೊಂಡು ಆ ಇಡೀ ಬೇಲಿಯನ್ನು ಬೆಳಗಿಸತೊಡಗಿತ್ತಂತೆ. ಗಾಬರಿಗೊಂಡ ಬುಡುಗೊಚ್ಚ ಹುಲ್ಲು ಹಿರಿಯುವುದನ್ನು ಬಿಟ್ಟು ಬೇಲಿಯನ್ನೇ ದಿಟ್ಟಿಸತೊಡಗಿದ್ದನಂತೆ.
ಎಸ್. ಗಂಗಾಧರಯ್ಯ ಬರೆದ ‘ಮಣ್ಣಿನ ಮುಚ್ಚಳ’ ಹೊಸ ಕಥಾ ಸಂಕಲನಕ್ಕೆ ಬರೆದುಕೊಂಡಿರುವ ಮಾತುಗಳು