Advertisement

Category: ದಿನದ ಅಗ್ರ ಬರಹ

ಕೃಷ್ಣಪ್ರಕಾಶ್ ಉಳಿತ್ತಾಯ ಬರೆಯುವ ಬಲಿಪ ಮಾರ್ಗ ಅಂಕಣ ಇಂದಿನಿಂದ

ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ಬಲಿಪನಾರಾಯಣ ಭಾಗವತರದ್ದು ಅಗ್ರ ಹೆಸರು. ತೆಂಕುತಿಟ್ಟಿನ ಮಾರ್ಗಪ್ರವರ್ತಕರೆಂದು ಗುರುತಿಸಿಕೊಂಡವರು. ‘ಭಾಗವತ’ನಿಗಿರಬೇಕಾದ ಜ್ಞಾನವನ್ನು ಮೈಗೂಡಿಸಿಕೊಂಡು ಮನ್ನಣೆಗೆ ಪಾತ್ರರಾದವರು. ಲೇಖಕ ಕೃಷ್ಣಪ್ರಕಾಶ ಉಳಿತ್ತಾಯ ಅವರು ಯಕ್ಷಗಾನದ ಹಿಮ್ಮೇಳ ಕಲಾವಿದರೂ ಆಗಿರುವುದರಿಂದ, ಹಿರಿಯ ಬಲಿಪನಾರಾಯಣ ಭಾಗವತರ ಜೀವನವನ್ನು ಅವರ ಭಾಗವತಿಕೆಯ ಮಾರ್ಗವನ್ನು ಹೆಚ್ಚು ಸಮರ್ಥವಾಗಿ ನಿರೂಪಿಸಬಲ್ಲರು. ಇಂದಿನಿಂದ ಅವರು ಬರೆಯುವ ಬಲಿಪ ಮಾರ್ಗ ಅಂಕಣ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗಲಿದೆ.

Read More

ಅರ್ಥಲೋಕದ ಬೆರಗುಗಳ ಅನಾವರಣ

ಈ ಕಾದಂಬರಿಯ ಕಥನ ಶೈಲಿ ಸರಳವಾಗಿಲ್ಲ; ಯಾಕೆಂದರೆ, ಇಕೋ ತಾನು ಪ್ರಸ್ತುತ ಪಡಿಸುತ್ತಿರುವುದು ಮಧ್ಯಯುಗೀಯ ಅಧಿಕೃತ ಹಸ್ತಪ್ರತಿಯೆಂಬ ಕಲ್ಪನೆ ಓದುಗರಲ್ಲಿ ಮೂಡಿಸಲಿಕ್ಕಾಗಿ ಪ್ರಯತ್ನಿಸಿದ್ದಾನೆ. ಮಧ್ಯಯುಗದ ಐತಿಹಾಸಿಕ ವಿವರಗಳು, ಅಂದಿನ ಸಮಕಾಲೀನ ಚರ್ಚೆಗಳು, ಆವಿಷ್ಕಾರಗಳು, ಚರ್ಚು ಮತ್ತದರ ಆಂತರಿಕ ವಿವಾದಗಳು, ಇತ್ಯಾದಿ ಅನೇಕ ವಿವರಗಳನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಅನೇಕ ಸಮಕಾಲೀನ ವಿದ್ವಾಂಸರು, ಅನೇಕ ಭಾಷೆಗಳಲ್ಲಿರುವ ಅವರ ಬರಹಗಳನ್ನು, ಅನೇಕ ಪುರಾತನ ಉದ್ಧರಣಗಳನ್ನು ಉಲ್ಲೇಖಿಸಲಾಗಿದೆ.
ಉಂಬರ್ಟೋ ಇಕೋ ಬರೆದ “ದ ನೇಮ್ ಆಫ್ ದ ರೋಸ್”ಕಾದಂಬರಿಯ ಕುರಿತು ಬರೆದಿದ್ದಾರೆ ಕಮಲಾಕರ ಕಡವೆ

Read More

ಪರದೇಶಿ ಕನ್ನಡಿಗರು, ಸ್ಥಳೀಯ ಕನ್ನಡ ಸಂಘಗಳ ಜುಗಲ್ ಬಂದಿ

ವಾಟ್ಸಾಪಿನ ಗುಂಪಿನಲ್ಲಿ ಒಬ್ಬರು ಬೆಂಗಳೂರಿನ ಅತ್ಯಾಧುನಿಕ ತಿಂಡಿಊಟಗಳ ಕೆಫೆ, ಹೋಟೆಲ್‌ಗಳ ಫೋಟೋಗಳನ್ನು ಹಂಚಿದ್ದರು. ಅವುಗಳಲ್ಲಿದ್ದ ಖಾದ್ಯಗಳ ಚಿತ್ರಗಳನ್ನು ನೋಡಿ ನನಗೆ ‘ಮಾಯಾ ಬಜಾರ್’ ಚಿಲನಚಿತ್ರದ ‘ವಿವಾಹ ಭೋಜನಂ’ ಹಾಡಿನ ನೆನಪು ಬಂತು. ಗುಂಪಿನ ಕೆಲ ಸದಸ್ಯರಿಗೆ ತಮ್ಮ ತವರಿನ ನೆನಪು ನುಗ್ಗಿ ಬಂದು ಅಲ್ಲಿಗೆ ಹೋಗಲಾರದ ಸ್ಥಿತಿಯಲ್ಲಿದ್ದೀವಲ್ಲಾ, ತಮ್ಮವರನ್ನು ನೋಡಿ ಮನೆಯೂಟ ಮಾಡಲಾರದ ಈ ಪರಿಸ್ಥಿತಿ ಯಾಕಾದರೂ ಬಂತೊ ಅಯ್ಯೋ, ಎನ್ನುವ ದುಃಖವಾಯ್ತು.
ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಕ್ಲಬ್ ಹೌಸ್ ಮಾತುಕಥೆಯಲ್ಲಿ ಕಂಡ ನಟರ ಎರಡು ಬಗೆ…

ಹೊಸತರಲ್ಲಿ ಎಲ್ಲ ಚೆಂದವೇ. ಒಂದು ವಾರ ಕಳೆಯುವಷ್ಟರಲ್ಲಿ ಈ ಕೇಳ್ಮೆ ಕೂಡ ಯಾಕೊ ಮನೊಟನಸ್ ಆಗುತ್ತಿದೆ ಅನಿಸಿತು. ಕೇಳ್ಮೆಯ ಮೂಲಕ ವಿಚಾರ ಕ್ರೋಢೀಕರಣ ಸರಿ. ಓದುವ ತ್ರಾಸಿಗಿಂತ ಕೇಳ್ಮೆ ಸುಲಭ. ಇದೂ ಸರಿ. ಆದರೆ ಕೇಳಿಸಿಕೊಂಡದ್ದನ್ನು ಒಂದು ಕಡೆ ಅಕ್ಷರ ಮತ್ತು ಪದಗಳಲ್ಲಿ ಕ್ರಮಬದ್ಧವಾಗಿ ದಾಖಲಿಸಬೇಕಾಗುವಾಗ ವಾಕ್ಯರಚನೆ ಬಿಗಿಬಂಧದಲ್ಲಿ ರೂಪುತಳೆಯಬೇಕಾದರೆ ಓದಿನ ಸಂಗ ಅಗತ್ಯ ಬೇಕು ಎಂಬ ಅರಿವು ಜಾಗೃತವಾಯಿತು.
ಎನ್‌.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

Read More

ಧಾರವಾಡದಲ್ಲಿ ಅನುರಣಿಸಿದ ‘ಮಂದ್ರ ಮಧ್ಯಮ’

ರಹಿಮತ್ ಖಾನರ ಗೆಳೆಯರ ಬಳಗ ದೊಡ್ಡದಿತ್ತು. ಸವಾಯಿ ಗಂಧರ್ವ ಮತ್ತು ಕಿರಾನಾ ಘರಾನಾ ಸ್ಥಾಪಕ ಅಬ್ದುಲ್ ಕರೀಂ ಖಾನ್ ಸಾಹಬ್ ಈ ಸಾಲಿನಲ್ಲಿ ಪ್ರಮುಖರು. ಈ ಮೂವರು ಸೇರಿದ ಜಾಗದಲ್ಲಿ ಸಂಗೀತದ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಸವಾಯಿ ಗಂಧರ್ವರ ಕುಂದಗೋಳದ ‘ವಾಡ’ದಲ್ಲಿ ಈ ತ್ರಿಮೂರ್ತಿಗಳು ಅಪರೂಪಕ್ಕೊಮ್ಮೆ ಸೇರುತ್ತಿದ್ದರು. ಮದ್ಯಪಾನವೂ ಜೋರಾಗಿಯೇ ಇತ್ತು. ಕುಂದಗೋಳದ ಪಾನಗೋಷ್ಠಿಯಲ್ಲಿ ನಡೆಯುತ್ತಿದ್ದ ವಿಚಿತ್ರ ಘಟನೆಗಳು ಆಗಿನ ಕಲಾವಿದರ ಪ್ರತಿಭೆಗೂ ಸಾಕ್ಷಿಯಾಗಿದ್ದವು.. ಶೇಣಿ ಮುರಳಿ ಬರೆದ ಉಸ್ತಾದ್ ರಫೀಕ್ ಖಾನ್ ಜೀವನಚರಿತ್ರೆ ‘ಖಾನ್ ಕಾಂಪೌಂಡ್’ನ ಅಧ್ಯಾಯ ಕೆಂಡಸಂಪಿಗೆ ಓದುಗರಿಗಾಗಿ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ