Advertisement
ಎಸ್. ನಾಗಶ್ರೀ ಅಜಯ್

ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.

ಕೋಮಲ ಗಾಂಧಾರ ಮತ್ತು ಪರ್ದಾ

ಕರೀಂ ಖಾನ್ ಮತ್ತು ಮಕ್ಕಳು ಬಳಸುವ ಸಿತಾರ್‌ನಲ್ಲಿ ೧೯ ಪರ್ದಾಗಳೇ ಇವೆ. ಯಾಕೆ ಇವರು ಇನ್ನೂ ಆಧುನಿಕತೆಯನ್ನು ಒಪ್ಪಿಕೊಂಡಿಲ್ಲ ಎಂದು ಎಲ್ಲರೂ ಕೇಳತೊಡಗಿದ್ದರು. ಕರೀಂ ಖಾನರಿಗೆ ಈ ಪ್ರಶ್ನೆ ಇಷ್ಟವಾಗುತ್ತಿರಲಿಲ್ಲ. ಆದರೆ ರಫೀಕ್ ಮತ್ತು ಶಫೀಕ್ ಈ ಕುರಿತು ಬಹಳಷ್ಟು ಚರ್ಚೆ, ಅಧ್ಯಯನ, ಪ್ರಯೋಗಗಳನ್ನು ಮಾಡಿದರು. ಹೊಸವಿಧಾನವನ್ನು ಒಪ್ಪಿಕೊಳ್ಳುವುದು ಸರಳವಾದ ವಿಚಾರ ಆಗಿರಲಿಲ್ಲ.
ಶೇಣಿ ಮುರಳಿ ಬರೆದ ರಫೀಕ್ ಖಾನ್ ಜೀವನ ಚರಿತ್ರೆ ‘ಖಾನ್ ಕಾಂಪೌಂಡ್’ ಕೃತಿಯ ಒಂದು ಅಧ್ಯಾಯ

Read More

ಪ್ರಯೋಗಾಲಯದಲ್ಲಿ ಕೋಳಿಮೊಟ್ಟೆ ಸ್ವಾಹಾ

ಅಂಗಡಿಯ ಭಟ್ರಿಗೆ ಮೊಟ್ಟೆಕೊಂಡು ಹೋದವರು ಯಾರೆಂದು ಗುರುತಿಸುವುದೇ ಕಷ್ಟವಾಯಿತು. ರಫೀಕ್ ನನ್ನು ತೋರಿಸಿ, ‘ಇವನೇ ಕೊಂಡುಹೋಗಿದ್ದ’ ಎಂದರು. ‘ನಾನಲ್ಲ’ ಎಂಬ ಉತ್ತರ ಬಂದ ಕೂಡಲೇ ಶಫೀಕ್ ನನ್ನು ತೋರಿಸಿ, ‘ಇವನೇ ಇವನೇ’ ಎಂದರು. ಶಫೀಕ್ ಕೂಡ ನಾನಲ್ಲ ಎನ್ನಬೇಕೇ. ಅವಳಿಜವಳಿ ಮಕ್ಕಳು ಸೇರಿ ಅಂಗಡಿ ಭಟ್ರಿಗೆ ಚಳ್ಳೇಹಣ್ಣು ತಿನ್ನಿಸಿ ಓಡಿದ್ದರು.”

Read More

ಧಾರವಾಡದಲ್ಲಿ ಅನುರಣಿಸಿದ ‘ಮಂದ್ರ ಮಧ್ಯಮ’

ರಹಿಮತ್ ಖಾನರ ಗೆಳೆಯರ ಬಳಗ ದೊಡ್ಡದಿತ್ತು. ಸವಾಯಿ ಗಂಧರ್ವ ಮತ್ತು ಕಿರಾನಾ ಘರಾನಾ ಸ್ಥಾಪಕ ಅಬ್ದುಲ್ ಕರೀಂ ಖಾನ್ ಸಾಹಬ್ ಈ ಸಾಲಿನಲ್ಲಿ ಪ್ರಮುಖರು. ಈ ಮೂವರು ಸೇರಿದ ಜಾಗದಲ್ಲಿ ಸಂಗೀತದ ವಾತಾವರಣವೇ ಸೃಷ್ಟಿಯಾಗುತ್ತಿತ್ತು. ಸವಾಯಿ ಗಂಧರ್ವರ ಕುಂದಗೋಳದ ‘ವಾಡ’ದಲ್ಲಿ ಈ ತ್ರಿಮೂರ್ತಿಗಳು ಅಪರೂಪಕ್ಕೊಮ್ಮೆ ಸೇರುತ್ತಿದ್ದರು. ಮದ್ಯಪಾನವೂ ಜೋರಾಗಿಯೇ ಇತ್ತು. ಕುಂದಗೋಳದ ಪಾನಗೋಷ್ಠಿಯಲ್ಲಿ ನಡೆಯುತ್ತಿದ್ದ ವಿಚಿತ್ರ ಘಟನೆಗಳು ಆಗಿನ ಕಲಾವಿದರ ಪ್ರತಿಭೆಗೂ ಸಾಕ್ಷಿಯಾಗಿದ್ದವು.. ಶೇಣಿ ಮುರಳಿ ಬರೆದ ಉಸ್ತಾದ್ ರಫೀಕ್ ಖಾನ್ ಜೀವನಚರಿತ್ರೆ ‘ಖಾನ್ ಕಾಂಪೌಂಡ್’ನ ಅಧ್ಯಾಯ ಕೆಂಡಸಂಪಿಗೆ ಓದುಗರಿಗಾಗಿ.

Read More

ಖಾನ್ ಕಾಂಪೌಂಡ್: ಮೈಸೂರು ಮಹಾರಾಜರು ಮೆಚ್ಚಿದ ದರ್ಬಾರಿ ಕಾನಡ

‘”ರಹಿಮತ್ ಖಾನ್ ಅವರು ಸಿತಾರ್ ನ ತಂತಿವಿನ್ಯಾಸವನ್ನು ಬದಲಿಸಿದ ಖ್ಯಾತಿಗೆ ಪಾತ್ರರಾದವರು. ಸಿತಾರ್ ನಲ್ಲಿ ರುದ್ರವೀಣೆಯ ನಾದಸುಖವನ್ನು ಅರಸುತ್ತ, ಅವರು ಪ್ರಯೋಗಶೀಲತೆಯತ್ತ ಮುಖಮಾಡಿದರು. ಜನಪದ ಸಂಗೀತ ಉಪಕರಣ ಎನಿಸಿದ್ದ ಸಿತಾರ್ ಗೆ ಶಾಸ್ತ್ರೀಯತೆಯ ಮನ್ನಣೆ ದೊರೆಯಲು ರಹಿಮತ್ ಖಾನ್ ಅವರ ಈ ಆವಿಷ್ಕಾರವೂ ಕಾರಣ.”ಶೇಣಿ ಮುರಳಿ ಬರೆದ ಉಸ್ತಾದ್ ರಫೀಕ್ ಖಾನ್ ಜೀವನಚರಿತ್ರೆ ‘ಖಾನ್ ಕಾಂಪೌಂಡ್’ನ ಅಧ್ಯಾಯವೊಂದು, ಈ ಆವಿಷ್ಕಾರದ ವಿವರ ನೀಡುತ್ತದೆ

Read More

ಖಾನ್ ಕಾಂಪೌಂಡ್ ಸರಣಿಯಲ್ಲಿ ‘ದಿಲ್ಲಿಯ ರಾಜ ದರ್ಬಾರ್’

ರಹಿಮತ್ ಖಾನ್ ಅವರ ಸಂಗೀತ ಪ್ರಸ್ತುತಿ ಆಲಿಸಿ ಸಂತೋಷಪಟ್ಟ ಮಹಾರಾಜರು ‘ಸಿತಾರ್ ರತ್ನ’ ಬಿರುದು ನೀಡಿ ಸನ್ಮಾನಿಸಿದರು. ಕಛೇರಿ ಮುಗಿಸಿ ರಹಿಮತ್ ಖಾನ್ ತಮ್ಮೂರಿಗೆ ಹೋಗುತ್ತಿದ್ದಾಗ, ಧಾರವಾಡದ ಪ್ರಶಾಂತತೆಯನ್ನು ನೋಡಿ ಅಲ್ಲಿಯೇ ನೆಲೆಸಲು ನಿರ್ಧರಿಸಿದರು. ಹಾಗೆ ಅವರು ನೆಲೆಸಿದ ಮನೆಯ ಹೆಸರೇ ಖಾನ್ ಕಾಂಪೌಂಡ್. ರಹಿಮತ್ ಖಾನ್ ಅವರ ಮೊಮ್ಮಗ ಉಸ್ತಾದ್ ರಫೀಕ್ ಖಾನ್ ಅವರ ಜೀವನಚರಿತ್ರೆಗೆ ಲೇಖಕ ಶೇಣಿ ಮುರಳಿ ಇದೇ ಶೀರ್ಷಿಕೆ ನೀಡಿದ್ದಾರೆ. ಈ ಪುಸ್ತಕದ ಒಂದು ಅಧ್ಯಾಯ ದಿಲ್ಲಿಯ ರಾಜ ದರ್ಬಾರ್ ತೊರೆದು ಗುಜರಾತ್ ನತ್ತ …”

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಜಾರಿದ ಬದುಕನ್ನು ಸ್ವವಿಮರ್ಶಿಸಿಕೊಂಡ ಆತ್ಮಕಥೆ: ನಾರಾಯಣ ಯಾಜಿ ಬರಹ

ನಂದು ದಾದಾ ಅವಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದರೆ ರಮೇಶಣ್ಣ ಅವಳಿಗೆ ಬಲೆಹಾಕಿ ಅವಳನ್ನು ದುರುಪಯೋಗಪಡಿಸಿ ಮನೆಯಿಂದ ಓಡಿಸಿಕೊಂಡುಹೋಗಿ ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗುತ್ತಾನೆ. ನಂದಣ್ಣನ ಆದರ್ಶಗಳು ಈಕೆಯೊಳಗೆ…

Read More

ಬರಹ ಭಂಡಾರ