ಸುಲಭವಾಗಿಯೇ ಬಿದ್ದ ಸೀಲು!: ಗುರುಪ್ರಸಾದ ಕುರ್ತಕೋಟಿ ಸರಣಿ
ಚೆನ್ನೈನಲ್ಲಿ ತಮಿಳು ಬರದಿದ್ದರೆ ತುಂಬಾ ಕಷ್ಟ ಅಂತ ಗೊತ್ತಿತ್ತು. ಕಾರಿನಲ್ಲಿಯೇ ಅಲ್ಲಿಗೆ ಹೊಗಿದ್ದ ನಾವು ಅಲ್ಲೊಬ್ಬರಿಗೆ ಹೊಟೇಲ್‌ಗೆ ಹೇಗೆ ಹೋಗೋದು ಅಂತ ಮಾರ್ಗದರ್ಶನ ಕೇಳಿದ್ದಕ್ಕೆ ತಮಿಳಿನಲ್ಲೇ ವಿವರಣೆ ನೀಡಿದರು. ತಮಿಳು ಬರೋದಿಲ್ಲ ಅಂತ ಹೇಳುವಷ್ಟು ಮಾತ್ರ ತಮಿಳು ಕಲಿತಿದ್ದ ನಾನು ಹಾಗೆ ಹೇಳಿ ಅವರ ಬಳಿ ಹಿಗ್ಗಾಮುಗ್ಗ ಬೈಸಿಕೊಂಡೆ. ಚೆನ್ನೈಗೆ ಬಂದವರು ಯಾಕೆ ಬೇಗನೆ ತಮಿಳು ಕಲಿಯುತ್ತಾರೆ ಅಂತ ಆಗ ನನಗೆ ತಿಳಿಯಿತು! ಬೆಂಗಳೂರಿನಲ್ಲೂ ಕನ್ನಡ ಮಾತಾಡದ ನಮ್ಮ ಕನ್ನಡಿಗರಿಗೆ ಹೀಗೆಯೇ ಬೈಯಬೇಕು ಅಂತ ಅಂದುಕೊಂಡೆ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ನಾಲ್ಕನೆಯ ಬರಹ