ಕೈ ಜೋಡಿಸಿದರೆ ಹಬ್ಬವೂ ಹಗುರ: ಎಸ್. ನಾಗಶ್ರೀ ಅಜಯ್ ಅಂಕಣ
ಸಂಸ್ಕೃತಿಯ ರಕ್ಷಣೆ, ಆಚರಣೆಗಳ ಹೊಣೆಯನ್ನು ಹೆಣ್ಣಿನ ಕುತ್ತಿಗೆಗೆ ನೇತುಹಾಕಿ, ತಾವು ಮಾತ್ರ ಹಾಯಾಗಿ ಮೊಬೈಲ್, ಲ್ಯಾಪ್ ಟಾಪ್ಗಳಲ್ಲಿ ಕಾಡುಹರಟೆ, ಕಛೇರಿ ಕೆಲಸದಲ್ಲಿ ಕಳೆದುಹೋದರೆ, ಚಿಕ್ಕವರು ಮಾಡುವ ಕೆಲಸದಲ್ಲಿನ ಲೋಪ ಹುಡುಕುವುದರಲ್ಲೇ ಹಿರಿಯರು ನಿರತರಾದರೆ, ಓದು ಮಾತ್ರ ಸಾಕೆಂದು ಮಕ್ಕಳನ್ನು ಕೆಲಸಕ್ಕೆ ಹಚ್ಚದಿದ್ದರೆ, ಹಬ್ಬದ ಸೊಗಸು ಅರಿವಿಗೆ ಬರುವುದೇ ಇಲ್ಲ. ಒಂದು ಕಾಲಕ್ಕೆ ಮನೆಯ ಸುತ್ತಮುತ್ತ ಅನಾಯಾಸವಾಗಿ ದೊರೆಯುತ್ತಿದ್ದ ಪತ್ರೆ, ಪುಷ್ಪ, ಮಾವು, ಬೇವು, ಬಾಳೆಕಂದು, ಹೊಂಬಾಳೆ ಇವತ್ತಿಗೆ ಚಿನ್ನದ ಬೆಲೆ ಹೊತ್ತುಕೊಂಡು, ಮಾರ್ಕೆಟ್ ಸೇರಿವೆ. ಹೊಸಕಾಲದ ತಿನಿಸಿನ ರುಚಿಕಂಡ ಮಕ್ಕಳಿಗೆ ಪಾರಂಪರಿಕ ಆಹಾರ ತಮಾಷೆಯಾಗಿ ಕಾಣುತ್ತಿದೆ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ