Advertisement

Category: ದಿನದ ಪುಸ್ತಕ

ಕೇಶವ ಮಳಗಿ ಬರೆದ ‘ಗುಂಡಿಗೆಯ ಬಿಸಿರಕ್ತʼ ಪುಸ್ತಕದ ಪ್ರವೇಶಿಕೆ…

“ದೇಶಭ್ರಷ್ಟತೆಯನ್ನು ಆಯ್ದುಕೊಂಡ ಲೇಖಕರು ದಕ್ಷಿಣ ಆಫ್ರಿಕದ ಕುರಿತು ವಿಫುಲವಾಗಿ ಬರೆಯತೊಡಗಿದರು. ಅದಕ್ಕಾಗಿ ವಿವಿಧ ಪ್ರಕಾರಗಳನ್ನುಆಯ್ದುಕೊಂಡರು. ಅವುಗಳಲ್ಲಿ ಆತ್ಮಚರಿತ್ರೆ ಅತ್ಯಂತ ಪ್ರಿಯವಾದ ಪ್ರಕಾರವಾಯಿತು. ಅನುಭವ ಕಥನವು ಆತ್ಮಚರಿತ್ರೆಯ ರೂಪದಲ್ಲಿ, ಹೊಸ ಪದವಿನ್ಯಾಸದಲ್ಲಿ ಗೋಚರಿಸತೊಡಗಿತು. ಪರದೇಸಿಗರಾದ ದಕ್ಷಿಣ ಆಫ್ರಿಕನ್ ಬುದ್ಧಿಜೀವಿಗಳಿಗೆ ಆತ್ಮಕಥೆ ಹೊಸ ಅಸ್ತಿತ್ವವನ್ನು ನೀಡಿದ ಪ್ರಕಾರವಾಯಿತು. ಇತ್ತ, ತಾಯ್ನೆಲದಲ್ಲಿ ಭಾವಗೀತೆ ಅರಳತೊಡಗಿತ್ತು. ಕಾವ್ಯಾಭಿವ್ಯಕ್ತಿಗೆ ಹೊಸಬರು ಸೇರಿಕೊಂಡಂತೆಲ್ಲ ಅಭಿವ್ಯಕ್ತಿ ರೂಕ್ಷವಾಗತೊಡಗಿತು.”
ಕೇಶವ ಮಳಗಿ ಬರೆದ ‘ಗುಂಡಿಗೆಯ ಬಿಸಿರಕ್ತ: ಆಫ್ರಿಕನ್‌ ಸಂಕಥನ’ ಪುಸ್ತಕದ ಪ್ರವೇಶಿಕೆ ನಿಮ್ಮ ಓದಿಗೆ

Read More

ಡಾ. ಗಜಾನನ ಶರ್ಮ ಬರೆದ ‘ಚೆನ್ನಭೈರಾದೇವಿʼ ಕಾದಂಬರಿಗೆ ಜೋಗಿ ಬರೆದ ಮಾತುಗಳು

“ಇದು ಕೇವಲ ಚೆನ್ನಭೈರಾದೇವಿಯ ಕಥೆಯಷ್ಟೇ ಅಲ್ಲ, ನೂರು ವರುಷಗಳ ಶರಾವತಿ ದಂಡೆಯ ಚರಿತ್ರೆ. ಕರಾವಳಿ-ಪಶ್ಚಿಮ ಮಲೆನಾಡಿನ ವೈವಿಧ್ಯಮಯ ಜೀವನ ಶೈಲಿಯ ಕಷ್ಟಕತೆ, ಜೈನಧರ್ಮೀಯರ ಸಾಹಸ ತ್ಯಾಗದ ಚಿತ್ರ, ಬಿಜಾಪುರದ ಸುಲ್ತಾನರು ಹಾಗೂ ವಿಜಯನಗರದ ಅರಸರೊಂದಿಗಿನ ಸಂಬಂಧ ಕಡಿದುಕೊಳ್ಳದೇ ಒತ್ತೊತ್ತಿ ಬಂದ ಪೋರ್ಚುಗೀಸರಿಂದ ಒಂದಿಡೀ ತಲೆಮಾರನ್ನು ಕಾಪಾಡಿದ ರಾಣಿಯ ಸಾಹಸ, ಪ್ರೇಮ, ತ್ಯಾಗ ಮತ್ತು ಧೀಮಂತ ವ್ಯಕ್ತಿತ್ವದ ಸಮಗ್ರ ಚಿತ್ರ.”
ಡಾ. ಗಜಾನನ ಶರ್ಮ ಬರೆದ ‘ಚೆನ್ನಭೈರಾದೇವಿʼ ಕಾದಂಬರಿಗೆ ಜೋಗಿ ಬರೆದ ಮಾತುಗಳು

Read More

ಅಕ್ಷಯ ಪಂಡಿತ್ ಕಥಾಸಂಕಲನಕ್ಕೆ ಡಾ. ನಾ. ಡಿಸೋಜ ಬರೆದ ಮಾತುಗಳು

“ಈ ಹುಡುಗನಿಗೆ ಈ ತೊಟ್ಟಿಲಿನದೇ ಆಕರ್ಷಣೆ. ಜಾತ್ರೆಯನ್ನು ನೋಡಲು ಅಲ್ಲಿ ವ್ಯಾಪಾರ ಮಾಡಲು ಬಂದ ಮಗ ಜಾತ್ರೆಯಲ್ಲಿಯ ಎಲ್ಲವನ್ನ ನೋಡಿ ಸಂತಸ ಪಡುತ್ತಾನೆ. ತಂದೆಯನ್ನ ಕೂಡ ತೊಟ್ಟಿಲಲ್ಲಿ ಕೂರಿಸಿ ಒಂದು ರೈಡ್ ಮಾಡಿಸುತ್ತಾನೆ. ಒಂದು ಹಂತದಲ್ಲಿ ತನ್ನ ಜೇಬಿನಲ್ಲಿ ಇರಿಸಿ ಕೊಂಡ ರೆಕ್ಕೆಯನ್ನ ಹಾರಿಸಿ ಬಿಡುತ್ತಾನೆ. ಆ ರೆಕ್ಕೆ ತಾನು ಕುಳಿತ ತೊಟ್ಟಿಲಿನಷ್ಟು ಎತ್ತರಕ್ಕೆ ಹಾರಿದಾಗ ಮಗ ‘ಅಪ್ಪ ಅಷ್ಟು ಎತ್ರ ಹೋಗೋದು ಹೇಗೆ ?ʼ ಎಂದು ಕೇಳುತ್ತಾನೆ.”
ಅಕ್ಷಯ ಪಂಡಿತ್ ಬರೆದ ‘ಬಯಲಲಿ ತೇಲುತ ತಾನುʼ ಕಥಾಸಂಕಲನಕ್ಕೆ ಡಾ. ನಾ. ಡಿಸೋಜ ಬರೆದ ಮಾತುಗಳು

Read More

ಏ.ಕೆ. ಕುಕ್ಕಿಲ ಪುಸ್ತಕಕ್ಕೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿ

“ಇಂಥ ತೀವ್ರತರವಾದ ಕಷ್ಟದ ದಿನಗಳಲ್ಲಿ ಕೆಲವರು ತಮ್ಮ ಗುಪ್ತ ಕಾರ್ಯಸೂಚಿಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದ ಘಟನೆಗಳೂ ನಡೆದುವು. ಕೊರೋನಾ ಓಡಿಸಲು ಶಂಖ ಜಾಗಟೆಗಳನ್ನು ಬಳಸಲು ಸೂಚಿಸಿದಲ್ಲಿಂದ ಆರಂಭವಾದ ಅದು ದೆಹಲಿಯ ತಬ್ಲೀಗ್ ಜಮಾಅತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಂದ ಕೊರೋನಾ ಹರಡಿದೆ ಎಂದು ಹೇಳುತ್ತಾ ಮಹಾಮಾರಿಗೂ ಕೋಮುವಾದದ ಸೋಂಕು ತಗಲಿಸುವವರೆಗೆ ಮುಂದುವರೆಯಿತು. ಆದರೆ ಕೊರೋನಾಕ್ಕೆ ಹಿಂದು ಮುಸ್ಲಿಂ ವ್ಯತ್ಯಾಸ ಗೊತ್ತಾಗದೆ, ಎಲ್ಲರನ್ನೂ ಬಲಿ ತೆಗೆದುಕೊಳ್ಳಲಾರಂಭಿಸಿದ ಮೇಲೆ ಚಿತ್ರ ಸ್ವಲ್ಪ ಬದಲಾಯಿತು.”
ಏ.ಕೆ. ಕುಕ್ಕಿಲ ಬರೆದ ‘ವೈರಸ್‌ʼ ಕಾದಂಬರಿಗೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿ

Read More

ಶಿವಶಂಕರ ಸೀಗೆಹಟ್ಟಿ ಕವನ ಸಂಕಲನಕ್ಕೆ ಡಾ. ಬಂಜಗೆರೆ ಜಯಪ್ರಕಾಶ ಬರೆದ ಮುನ್ನುಡಿ

“ಸಮಾಜವನ್ನು ಪ್ರಗತಿಪರ ಆಶಯಗಳ ಅನುಸಾರ, ಎಲ್ಲರ ಸಹಬಾಳ್ವೆ ಮತ್ತು ಸಾಮರಸ್ಯದ ದಿಕ್ಕಿನಲ್ಲಿ ಕಟ್ಟಬೇಕೆಂಬ ಕನಸು ಹೊತ್ತ ಕವಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ವ್ಯವಸ್ಥೆಯ ಪರವಾಗಿ ಮಾತನಾಡುವವರು ಇಲ್ಲವೆಂದಲ್ಲ. ಅವರು ದುಃಸ್ಥಿತಿಯನ್ನು ಸುಸ್ಥಿತಿಯೆಂದು ಬಿಂಬಿಸಲು ಹರಸಾಹಸಪಡುತ್ತಾರೆ. ಆದರೆ ಅಂತಹ ಮಾತುಗಳಿಗೆ ಆತ್ಮಸಾಕ್ಷಿಯ ಕೊರತೆ ಇರುತ್ತದೆ. ಅದರಲ್ಲಿ ಸತ್ಯದ ಶೋಧ ಇರುವುದಿಲ್ಲವಾದ್ದರಿಂದ ಅಂತಹ ಮಾತುಗಳು ಟೊಳ್ಳಾಗಿಹೋಗುತ್ತವೆ.”
ಶಿವಶಂಕರ ಸೀಗೆಹಟ್ಟಿ ಕವನ ಸಂಕಲನಕ್ಕೆ ಡಾ. ಬಂಜಗೆರೆ ಜಯಪ್ರಕಾಶ ಬರೆದ ಮುನ್ನುಡಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ