ನೀರಿನ ನೆರಳು: ಪ್ರಕಾಶ್ ಪೊನ್ನಾಚಿ ಬರಹ
ಅಗಲಿಕೆ ಆರಂಭದಷ್ಟೇ ನೋವನ್ನು ಅಂತ್ಯಕ್ಕೂ ಉಳಿಸಿಕೊಳ್ಳುತ್ತದೆನ್ನುವ ಸೂತ್ರ ಅವಳಿಂದ ನನಗೀಗ ನಿಧಾನಕ್ಕೆ ಅರ್ಥವಾಗತೊಡಗಿತ್ತು. ಮತ್ತೆ ಮರುಜನ್ಮವಿದ್ದರೆ ನನ್ನಾಣೆ ನೀನೆ ನನಗೆ ಸಿಗಬೇಕು. ಈ ಮಡಿಲು ಸದಾ ನನ್ನ ತಲೆಗೆ ಜೋಪಡಿಯಾಗಬೇಕು. ನಿನ್ನ ಕುರುಚಲು ಗಡ್ಡದ ಕೂದಲು ಸದಾ ನನ್ನ ಕೆನ್ನೆಗೆ ಕಚಗುಳಿ ಇಡುತ್ತಿರಬೇಕು. ನನ್ನ ಎಲ್ಲಾ ಖುಷಿಗಳಿಗೂ ನೀನೇ ಕಾರಣಬೇಕು… ಏನೆಲ್ಲಾ ಹೇಳಿದ್ದಳು ಅವಳು. ಪ್ರೀತಿಸುವುದರಲ್ಲಿ ನಾನೇ ಹುಚ್ಚ ಎಂದುಕೊಂಡ ನನ್ನನ್ನೇ ಸೋಲಿಸಿ ಹುಚ್ಚಿಯಷ್ಟೇ ಪ್ರೀತಿಸುತ್ತಿದ್ದಳು.
ಪ್ರಕಾಶ್ ಪೊನ್ನಾಚಿ ಬರಹ ನಿಮ್ಮ ಓದಿಗೆ