Advertisement

Category: ಸಂಪಿಗೆ ಸ್ಪೆಷಲ್

ಪೊಟ್ಟಣದ ಮೆಲುಕಿನಲ್ಲಿ..

ಅಶ್ವತ್ಥ ಕಟ್ಟೆಯ ದೊಡ್ಡ ಮರದ ಕೊಂಬೆಗಳಲ್ಲಿ, ಬೀದಿಯ ಸುತ್ತಮುತ್ತಲ ಮನೆಗಳು, ಕಾಂಪೌಂಡ್ ಗೋಡೆಗಳ ಮೇಲೆ, ರಾಮಮಂದಿರದೊಳಗೆ ಹಾಗೂ ದಾರಿಯುದ್ದಕ್ಕೂ ಇರುತ್ತಿದ್ದ ಕೋತಿಗಳ ಗುಂಪಿನ ದಾಳಿಯ ಭೀತಿಯಲ್ಲೇ ದಿನಸಿ ಬ್ಯಾಗನ್ನು ಉದ್ದನೆಯ ಲಂಗದ ನೆರಿಗೆಗಳಲ್ಲಿ ಮುಚ್ಚಿಟ್ಟುಕೊಂಡು ಅವುಗಳಿಂದ ತಪ್ಪಿಸಿಕೊಂಡು ಮನೆಗೆ ಹೋಗುವಷ್ಟರಲ್ಲಿ ಹೈರಾಣಾಗುತ್ತಿದ್ದೆ.
ಎಂ.ಜಿ. ಶುಭಮಂಗಳ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಮುಸ್ಸಂಜೆಯ ಮಧುರವಾಗಿಸುವ ಪರಿ

ಅವರು ಅಪ್ಪನ ಚಡ್ಡಿ ದೋಸ್ತ್. ಅದೊಂದು ಕಾಲ್ ಇಡೀ ವಾತಾವರಣವನ್ನು ತಿಳಿಯಾಗಿಸಿತು. ಹೋದವರು ಹೋಗೇ ಬಿಟ್ಟರು. ಎಲ್ಲಿ ಹುಡುಕಿದರೂ ಸಿಗುವುದೂ ಇಲ್ಲ, ಹಿಂದಿರುಗಿ ಬರುವುದೂ ಇಲ್ಲ. ಆದರೆ ಇದ್ದವರು ಇನ್ನೂ ಇರಲೇ ಬೇಕಾದ ಅನಿವಾರ್ಯ. ತಮ್ಮ ಸಮಯ ಬರುವವರೆಗೆ… ಅದೂ ಇದ್ದಷ್ಟು ಕಾಲ ನೆಮ್ಮದಿಯಿಂದ ದಿನಗಳೆಯಬೇಕು ಎನಿಸಿ ಈ ರೀತಿ ಮಾಡಿದೆ. ಆದರೂ ಅಪ್ಪನ ಜೀವನೋತ್ಸಾಹ ಎಲ್ಲರಿಗೂ ಮಾದರಿಯಾಗುವಂತಿದೆ.
ಕಾವ್ಯಶ್ರೀ ಮಹಾಗಾಂವಕರ ಬರಹ ನಿಮ್ಮ ಓದಿಗೆ

Read More

ವೀರಭುಜಬಲದ ದುಂಡಿಯೋ… ಸುಕೋಮಲ ಸುಂದರಿಯೋ…

ಎರಡೂ ಕೈಗಳಿಗೂ ಅಮ್ರದ ದುಂಡಿಯನ್ನು ಪಟ್ಟಗಣಿಯಿಂದ ಸುತ್ತಿ ಬಿಗಿಯಾಗಿ ಹಿಡಿದುಕೊಂಡು ಮೊಣಕಾಲಿನವರೆಗೂ ತಿರಿವಿಕೊಂಡ. ಮೊಣಕಾಲಿನ ಮೇಲೆ ಜಪ್ಪಯ್ಯ ಎಂದರೂ ದುಂಡಿ ಒಂದಿಂಚೂ ಮೇಲೇಳಲಿಲ್ಲ. ಸ್ವಲ್ಪ ಸಾವರಿಸಿಕೊಂಡು ನರನಾಡಿಗಳಲ್ಲಿನ ಸಮಸ್ತ ಶಕ್ತಿಯನ್ನು ಒಟ್ಟು ಮಾಡಿ ಉಡ ಕೂಡಾ ನಾಚುವಂತೆ ಬಿಗಿಯಿಡಿದು ಬಿಲ್ಲಿನಂತೆ ಹಿಂದಕ್ಕೆ ಬಾಗಿ ದುಂಡಿಯನ್ನು ಮೇಲೆಳೆದುಕೊಂಡ.
ಮಂಜಯ್ಯ ದೇವರಮನಿ, ಸಂಗಾಪುರ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಊರು ಬಿಟ್ಟವರ ಹಾಡುಪಾಡು

ಜೀವದಿಂದಿಡಿದು ಜೀವನದೊಟ್ಟಿಗೆ ಬೆರೆತುಹೋಗಬೇಕಿದ್ದ ಭಾಷೆಯನ್ನು ನಿಧಾನಕ್ಕೆ ಮರೆಯಲಾರಂಭಿಸಿ, ಸಾಂಸ್ಕೃತಿಕ ಕೇಂದ್ರಗಳಾಗಿದ್ದ ಹಳ್ಳಿಗಳನ್ನ ತೊರೆದು ಎಲ್ಲವೂ ವ್ಯಾಪಾರವಾಗಿರುವ ಪಟ್ಟಣದ ಮೋಹಕ್ಕೆ ಒಂದು ತಲೆ ಮಾರನ್ನೇ ವರ್ಗಾಯಿಸಿದ್ದು ದುರಂತವಲ್ಲದೇ ಮತ್ತೇನು? ಪಟ್ಟಣದಲ್ಲಿ ಸೈಟು ಮಾಡಿ, ದೊಡ್ಡ ದೊಡ್ಡ ಬಂಗಲೆ ಕಟ್ಟುವುದನ್ನೇ ಜೀವನದ ಅತಿದೊಡ್ಡ ಯಶಸ್ಸು ಎಂಬ ಹುಸಿ ಸುಳ್ಳನ್ನು ಮುಗ್ಧ ಮನಸ್ಸುಗಳಲ್ಲಿ ಬಿತ್ತಲಾರಂಭಿಸಿದ ಪರಿಣಾಮ ಬಾಗಿಲು ಹಾಕಿದ ದೊಡ್ಡ ದೊಡ್ಡ ಬಂಗಲೆಗಳಲ್ಲಿ ವೈಚಾರಿಕತೆ ಹಳ್ಳಿಯ ಹೆಂಚಿನ ಮನೆಗಳಲ್ಲೇ ಉಳಿದುಬಿಟ್ಟವು.
ಪ್ರಕಾಶ್‌ ಪೊನ್ನಾಚಿ ಬರಹ

Read More

ನಂದೂ ಮಾಮನ ಕಥೆಯ ಕೇಳಿ…

“ಅವಳು ಮಲಗಬೇಕಿದ್ದರೆ ಆಕಾಶವಾಣಿಯವರು ನಮಸ್ಕಾರ ಹೇಳಿ… ಕೇಂದ್ರದ ಬಾಗಿಲು ಹಾಕಿ ಹೋಗಬೇಕು” ಎಂದು ನನ್ನ ಅಪ್ಪ ನನ್ನನ್ನು ಪ್ರೀತಿಯಿಂದ ಬೈಯುತ್ತಿದ್ದ ದಿನಗಳು ನೆನಪಾದರೆ… ನಗು ಉಕ್ಕಿ ಬರುತ್ತದೆ. ಈಗಲೂ ಟಿ.ವಿ ಯಲ್ಲಿ ಕ್ರಿಕೆಟ್ ನೇರ ಪ್ರಸಾರವಿದ್ದರೂ… ರೇಡಿಯೋದಲ್ಲಿ ಸ್ವಲ್ಪ ಹೊತ್ತಾದರೂ.. ವೀಕ್ಷಕ ವಿವರಣೆ ಕೇಳಿದರಷ್ಟೇ ಸಮಾಧಾನ. ಮೆಚ್ಚಿನ ಚಿತ್ರಗೀತೆಗೆ ಸಂದೇಶದ ಮೂಲಕ ಕೋರಿಕೆ ಸಲ್ಲಿಸಿ… ನನ್ನಿಷ್ಟದ ಹಾಡುಗಳನ್ನು ಆಲಿಸುತ್ತೇನೆ..
ಅರುಣಾ.ಜಿ. ಭಟ್. ಬದಿಕೋಡಿ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ