Advertisement

Category: ಸಂಪಿಗೆ ಸ್ಪೆಷಲ್

ಶರಣಪ್ಪ ಮೇಷ್ಟ್ರು ಸೈಕಲ್ ಮತ್ತು ನಾನು

ಸೈಕಲ್‌ನ ಯಾವ ಭಾಗವೂ ಹೊಳಪು ಕಾಣದ… ಬಿಸಿಲು ಮಳೆಗೆ ನೆಂದು ಕಪ್ಪಾದ ಕೃಷ್ಣಸುಂದರಿ ನನ್ನ ಸೈಕಲ್… ವಿಧಿಯಿಲ್ಲದೆ ಅದನ್ನೇ ಚೆನ್ನಾಗಿ ತೊಳೆದು ಸಿಂಗಾರ ಮಾಡಿದ್ದಾಯಿತು. ನನಗೋ ಅದನ್ನು ತುಳಿಯುವ ಕಾತರ. ಪೂಜೆ ಮಾಡಿ ಊರೆಲ್ಲಾ ಸುತ್ತಿಕೊಂಡು ಬರೋಣ ಎಂದು ಸವಾರಿ ಹೊರಟೇ ಬಿಟ್ಟೆ. ಊರ ಮಂದಿಯೆಲ್ಲಾ ನನ್ನನ್ನೆ ನೋಡುತ್ತಿದ್ದಾರೆ. ಶರಣಪ್ಪ ಮೇಷ್ಟ್ರು ಸೈಕಲ್ ಇವ ಹೇಗೆ ತುಳಿದಾನು ಎಂಬ ಕುತೂಹಲ ಅವರದು.
ಮಾರುತಿ ಗೋಪಿಕುಂಟೆ ಬರೆದ ಲಲಿತ ಪ್ರಬಂಧ ನಿಮ್ಮ ಈ ದಿನದ ಓದಿಗೆ

Read More

ಒಲವಿನ ಬೆಳಕು ಬೆಳಗುವ ದೀಪದ ಹಬ್ಬ…

ಹಿಂದೆಲ್ಲಾ ದೀಪಾವಳಿಯೆಂದರೆ ಹೊಸ ಬಟ್ಟೆಯ ಹಬ್ಬ. ವರುಷಕ್ಕೊಮ್ಮೆ ಹೊಸ ಬಟ್ಟೆ. ಅದು ದೀಕುಂಕುಮ ಅವಿಭಕ್ತ ಕುಟುಂಬ ಪರಂಪರೆಯ ಮನೆಗಳು. ದೂರದೂರಿನಲ್ಲಿರುವ ಬಂಧುಗಳು ದೀಪಾವಳಿ ಬರುತ್ತಿದ್ದಂತೆ ಮನೆಗೆ ಬರುತ್ತಿದ್ದರು. ಜೊತೆಗೆ ಮನೆ ಮಕ್ಕಳಿಗೆ ಹೊಸ ಬಟ್ಟೆ, ಅಂಗಿ… ಹೊಸತನದ ಘಮ…. ಮನೆಯ ತುಂಬೆಲ್ಲ ಪಸರಿಸುತ್ತಿತ್ತು. ತ್ರಯೋದಶಿ ಸಂಜೆ ಗಂಗಾ ಪೂಜೆ… ನೀರು ತುಂಬುವ ಹಬ್ಬ. ಬಚ್ಚಲುಮನೆ ಶುಚಿಗೊಳಿಸಿ, ಹಂಡೆ ತಿಕ್ಕಿ ತೊಳೆದು ಫಳಫಳ ಹೊಳೆದು ಬಳಪದಿಂದ ಗೆರೆ ಎಳೆದು ಹಂಡೆಯ ಕೊರಳಿಗೆ ಗೊಂಡೆ ಹೂ(ಚೆಂಡು ಹೂ)ಗಳ ಮಾಲೆ ಹಾಕಿ….
ಬಾಲ್ಯಕಾಲದಲ್ಲಿ ದೀಪದ ಹಬ್ಬದ ಆಚರಣೆಗಳು ಹೇಗಿದ್ದವು.. ಅದರ ಮಹತ್ವವೇನು ಎಂಬುದರ ಕುರಿತು ಬರೆದಿದ್ದಾರೆ ಪೂರ್ಣಿಮಾ ಸುರೇಶ್

Read More

ಕಲಿಸುವಷ್ಟೇ, ಕಲಿಯುವುದೂ ಇದೆ…

ಈ ಪುಟ್ಟ ವೀಡಿಯೋ ಎತ್ತುವ ಪ್ರಶ್ನೆಗಳು ಅಸೀಮ. ನಾವು ಎಂಥ ವ್ಯವಸ್ಥೆ ಮತ್ತು ಪರಿಸ್ಥಿತಿಯಲ್ಲಿ ಇದ್ದೇವೆ ಎಂದು ನೋವಾಗುತ್ತದೆ. ಆದರೆ ನೋಯುವುದಕ್ಕಿಂತ ಸಧ್ಯದ ಜರೂರತ್ತೆಂದರೆ ನಾವು ನಮ್ಮ ಹೆಣ್ಣುಮಕ್ಕಳ ಬ್ಯಾಗಿನಲ್ಲಿ ಕಸ್ಮೆಟಿಕ್ಸ್ ಗಳಿಗಿಂತಲೂ ಮುಖ್ಯವಾಗಿ ಒಂದು ಬ್ಲೇಡನ್ನೋ ಅಥವಾ ಪೆಪ್ಪರ್‌ ಸ್ಪ್ರೇಯನ್ನೋ ಇಟ್ಟುಕೊಳ್ಳುವ ಅಭ್ಯಾಸ ಮಾಡಿಸಬೇಕಿದೆ. ಮತ್ತದನ್ನು ಸರಿಯಾದ ಸಂದರ್ಭದಲ್ಲಿ ಸರಿಯಾಗಿ ಬಳಸುವುದನ್ನೂ ಕಲಿಸಬೇಕಿದೆ. ಯಾರೋ ಬಂದು ನಮ್ಮನ್ನು ಕಾಪಾಡುತ್ತಾರೆ ಎಂದು ಕಾಯುವ ಬದಲು, ನಮ್ಮನ್ನು ನಾವೇ ಕಾಪಾಡಿಕೊಳ್ಳುವುದು ಒಳಿತಲ್ಲವೇ…
ಆಶಾ ಜಗದೀಶ್‌ ಬರಹ ನಿಮ್ಮ ಓದಿಗೆ

Read More

ಕೈ ಹಿಡಿದು ಮುನ್ನಡೆಸುವ ಕತೆಗಳೆಂಬ ದೋಣಿಗಳು

ಸೂರ್ಯೋದಯದಲ್ಲೋ, ಸೂರ್ಯಾಸ್ತದಲ್ಲೋ ಆಗಸದಲ್ಲಿ ಚೆಲ್ಲಿ ಹೋದ ಬಣ್ಣಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಹೋದಂತೆ, ಗ್ರಹಿಕೆಗಳು ಒಬ್ಬರಿಂದ ಮತ್ತೊಬ್ಬರಿಗೆ ಬದಲಾಗುತ್ತಲೇ ಇರುತ್ತವೆ. ಒಬ್ಬನೇ ವ್ಯಕ್ತಿಯು ಒಂದೊಂದು ಕಾಲದಲ್ಲಿ ಬದುಕನ್ನು ಗ್ರಹಿಸುವ ರೀತಿಯೂ ಬದಲಾಗಿರುತ್ತದೆಯಲ್ಲವೇ. ಹಾಗೆಯೇ ಈ ಕತೆಗಳು ಕೂಡ ಎಂದೆನಿಸುತ್ತದೆ. ಹಾಗೆ ನೋಡಿದರೆ ಎಷ್ಟೊಂದು ಕಲಾತ್ಮಕವಾದ ಕತೆಗಳನ್ನು ಬರೆದರೂ ʻಕತೆಗಾರರುʼ ರೂಪುಗೊಳ್ಳುವುದು ಓದುಗರ ಮನಸ್ಸಿನಲ್ಲಿ ಅಲ್ಲವೇ.
ಕತೆಗಳ ಜಾಡು ಹಿಡಿದ ಬರಹವೊಂದನ್ನು ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

Read More

ರಂಗಸ್ಥಳದಲ್ಲೀಗ ಸಮಯಮಿತಿಯ ವಾಗ್ವಿಲಾಸ

1985 ಕ್ಕಿಂತ ಮುಂಚೆಯೇ  ಇಡಗುಂಜಿ ಮೇಳ ವಿವಿಧ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಕಾಲಮಿತಿಯ ಯಕ್ಷಗಾನ  ಪ್ರದರ್ಶನವನ್ನು ಆರಂಭಿಸಿತ್ತು. 1968 ರಲ್ಲಿ ಮತ್ತು 1971ರಲ್ಲಿ ದೆಹಲಿಯಲ್ಲಿ ಜರಾಸಂಧವಧೆ, ಕರ್ಣಪರ್ವ ಮುಂತಾದ ಪ್ರಸಂಗಗಳನ್ನು ಕಾಲಮಿತಿಯಲ್ಲಿ ಪ್ರದರ್ಶಿಸಿತ್ತು. ಆ ಸಂದರ್ಭದಲ್ಲಿ ಜನರ ಮನಸ್ಸು ಇನ್ನು ಸಮಯಮಿತಿಗೆ ಒಗ್ಗಿಕೊಳ್ಳದ ಸಂದರ್ಭವಾದರೂ, ಸುಮಾರು 75ಕ್ಕೂ ಮಿಕ್ಕಿ ಪ್ರದರ್ಶನ ನಡೆಯಿತು. ಹಾಗೆ ನೋಡಿದರೆ ಜಗತ್ತಿನ ಯಾವ ರಂಗಭೂಮಿಗೊ, ನಾಟ್ಯಪ್ರಕಾರಕ್ಕೋ ʻಕಾಲಮಿತಿʼ ಎಂಬುದು ಒಂದು ಚರ್ಚಿಸಬೇಕಾದ ವಿಷಯವೇ ಅಲ್ಲ ಎನ್ನುವ  ಹಿರಿಯ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅವರು ಮೇಳವನ್ನು ನಡೆಸುವವರೂ ಹೌದು. ಹಿರಿಯ ಕಲಾವಿದರೂ ಹೌದು. ಅವರು ಬರೆದ ಲೇಖನ ಇಂದಿನ ಓದಿಗಾಗಿ. 

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ