Advertisement

Category: ಸಂಪಿಗೆ ಸ್ಪೆಷಲ್

ಮುಗ್ಧತೆಯನ್ನೂ ತಾತ್ವಿಕತೆಯನ್ನೂ ಪೋಣಿಸಿಕೊಂಡ ರಶೀದ್‍ರ ಕತೆಗಳು

ಹೆಚ್ಚು ಪ್ರಯಾಸವಿಲ್ಲದೆ ಬರೆಯುವ ಶೈಲಿ  ಕತೆಗಾರ ಅಬ್ದುಲ್ ರಶೀದ್ ಅವರಿಗೆ ಒಲಿದಿದೆ. ಅವರು ಹಾಗೆ ಬರೆದಂತಹ ಬರಹವು ತಿಳಿಹಾಸ್ಯದಿಂದ ಓದುಗರಿಗೆ ಕಚಗುಳಿ ಇಡುವುದು, ತನ್ನ ವಿಶಿಷ್ಟ ಕಾಣ್ಕೆಗಳಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವುದು, ಕೆಲವು ಪಾತ್ರಗಳು ಹಾಗೂ ಪ್ರಸಂಗಗಳು ಮನಸ್ಸಿನ ಮೂಲೆಯಲ್ಲಿ ಮನೆ ಮಾಡುವುದು. ಎಂತಹ ಸಂದರ್ಭದಲ್ಲೂ ರಶೀದ್ ಅವರಲ್ಲಿನ ಕಥೆಗಾರ ಜಾಗೃತನಾಗಿರುತ್ತಾನೆ. ಸುಮತಿ ಮುದ್ದೇನಹಳ್ಳಿ ಬರಹ.

Read More

ಹೊಸತನದ ಹಾಡಿಗೆ ಕಾದಿರುವ ಹೊಸ ಸಂವತ್ಸರ

ಶಿಶಿರ ಋತುವಿನ ಚಳಿಗಾಲದಲ್ಲಿ ಒಣಗಿದ ಮರ-ಗಿಡಗಳು ವಸಂತ ಋತುವಿನಲ್ಲಿ ಮತ್ತೆ ಚಿಗುರುವಂತೆ `ಯುಗಾದಿ’ ಯ ಹೊಸತನ ಮನುಷ್ಯನ ಬದುಕಲ್ಲಿಯೂ ಹೊಸ ಜೀವ ತುಂಬಬಲ್ಲ ಹಬ್ಬವಾಗಿದೆ. ಈ ಹಬ್ಬದ ಆಚರಣೆ ಇಡೀ ದೇಶದಲ್ಲಿಯೇ ವಿಭಿನ್ನವಾಗಿ ನಡೆಯುತ್ತದೆ. ಮುಖ್ಯವಾಗಿ ಕೃಷಿ ಆಧಾರಿತ ದೇಶದಲ್ಲಿ, ಬೇಸಿಗೆಯ  ಈ  ಹಬ್ಬದಲ್ಲಿ ಸಂಭ್ರಮವು ಒಂದು ತೂಕ ಹೆಚ್ಚೇ. ಬೈಸಾಕಿ, ಗುಡಿಪಾಡ್ವಾ, ಯುಗಾದಿ ಎಂಬೆಲ್ಲ ಹತ್ತಾರು ಹೆಸರುಗಳಲ್ಲಿ ಬರುವ  ಈ ಹಬ್ಬವನ್ನು ಕನ್ನಡದ ಕವಿಗಳು ತಮ್ಮದೇ ದೃಷ್ಟಿಕೋನದಲ್ಲಿ ಬಣ್ಣಿಸಿದ್ದಾರೆ. ಮಂಡಲಗಿರಿ ಪ್ರಸನ್ನ ಬರಹ 

Read More

ಸುಳ್ಳು ನಮ್ಮ ಮನೆದೇವರಾಗಿ..

ಸುಳ್ಳು ಸುದ್ದಿಯನ್ನುತಡೆಯುವ ಪ್ರಯತ್ನ ಹಿಂದೆಯೂ ನಡೆಯುತ್ತಿತ್ತು. ಇಂದೂ ನಡೆಯುತ್ತಿದೆ.  ನಮ್ಮ ಉದ್ದೇಶಕ್ಕೆ ಪೂರಕವಾಗಿ ತಂತ್ರಜ್ಞಾನ, ಉಪಕರಣಗಳು ಎಷ್ಟೇ ಸಹಕಾರಿ ಆಗಿದ್ದರೂ ಅವುಗಳನ್ನು ಬಳಸುವ ಮನಸ್ಸುಗಳಲ್ಲಿ ಸುದುದ್ದೇಶವಿಲ್ಲದೇ ಇದ್ದಾಗ, ನಾವು ರೂಪಿಸಿಕೊಂಡ ಅತ್ಯಾಧುನಿಕ ವ್ಯವಸ್ಥೆಗಳು ಪ್ರಯೋಜನವಿಲ್ಲದ್ದಾಗಿಬಿಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಪತ್ತೆಮಾಡುವುದೇ ಒಂದು ಸಾಹಸ.

Read More

ಸಂಘರ್ಷವನ್ನು ಗುಡಿಸಿ ಹಾಕುವ ಕಾಲ: ಪ್ರೊ.ಕೀರ್ತಿನಾಥ ಕುರ್ತಕೋಟಿ ಬರಹ

ಕತೆಯ ವರ್ಣನೆಯಲ್ಲಿಯ ಎಲ್ಲ ವಿವರಗಳೂ ಸಂಜ್ಞೆಗಳಾಗುವದಿಲ್ಲ. ಸಂಜ್ಞೆಗಳು ಪ್ರತೀಕಗಳಾಗುವದಿಲ್ಲ. ವಿವರಗಳಿಗಿಂತ ಸಂಜ್ಞೆಗಳು ಹೆಚ್ಚು ಕಾಲ ಮನಸ್ಸಿನಲ್ಲಿ ಉಳಿಯುತ್ತವೆ. ಭಾವಸಂಜ್ಞೆಗಳಾಗಿದ್ದರೆ ಮನಸ್ಸನ್ನು ಕಲಕುತ್ತವೆ. ಆದರೆ ಪ್ರತೀಕಗಳು ಹೆಚ್ಚು ಲಕ್ಷ್ಯವನ್ನು ಅಪೇಕ್ಷಿಸುತ್ತವೆ. ಉದಾಹರಣೆಗೆ ದುರ್ಗಿ ಸಾಯುವ ರಾತ್ರಿ ಕಿಟಕಿಯಲ್ಲಿ ಕಾಣುವ ಸೇವಂತಿಗೆ ಹೂವಿನ ಟ್ರಕ್ಕು ಒಂದು ಪ್ರತೀಕವಾಗಿರುವದರಿಂದ ಅದು ತನ್ನ ಅರ್ಥವನ್ನು ಬೇಗ ಬಿಟ್ಟುಕೊಡುವದಿಲ್ಲ. ಅದು ಕೂಡ ಕತೆಯ ವಾಸ್ತವ ವಿವರಗಳಲ್ಲಿ ಒಂದಾಗಿದೆ, ಆದರೂ ವಿಸಂಗತವಾಗಿದೆ.

Read More

ಮುಡಿಯೇರಿ ಮೆರೆದ ಮೇಲೂ ಬಾಡದ ಹೂಗಳು

ಇತ್ತೀಚೆಗೆ ಸೀರಿಗೆ ಹೊಂದೊ ಬಣ್ಣದ ಹೂ ಇಟ್ಕೊಳೊದು ಒಂದ್ ಫ್ಯಾಷನ್ ಆಗ್ಯದ. ನಾನು ಕಾರ್ಯಕ್ರಮಗಳಿಗೆ ಹೋಗೋದೆ ಕಮ್ಮಿ ಆದ್ರಿಂದ ಹೋದಾಗ ಒಂದ್ ಸ್ವಲ್ಪ ನೋಡಿದ್ದೆ, ಏನೊ ವಿಶೇಷ ಹೊತ್ನಾಗ ಇಟ್ಕೊತಾರ ಬಿಡು ಅನ್ಕೊಂಡು ಸುಮ್ನಾಗಿದ್ದೆ. ಆದ್ರ ಇಲ್ಲಿ ನೋಡಿದ್ರೆ ಊರಿಗೆ ಊರೆ ಅಂಥಾ ಹೂ ಇಟ್ಕೊಂಡು ಮೆರಿಲಿಕತ್ತದ. ಅವುಗಳಲ್ಲಿ ಅನೇಕವು ಖರೆ ಹೂವೆನೊ ಅನ್ನೊ ಹಂಗೆ ಇದ್ದವು. ಆದ್ರ ಇಲ್ಲಿ ವಿಷಯ ಬರೀ ಹೂವಿಂದಲ್ಲ. ನಮ್ಮ ಜನ ಎಷ್ಟು ಬೇಗ ಕೃತಕತೆ ಅನ್ನೊದಕ್ಕೆ ಆಕರ್ಷಿತರಾಗ್ತರ ಅನ್ನೋದು.
ಪರಿಸರ ಕಾಳಜಿಯ ಕುರಿತ ಶಾಲಿನಿ ನೂತನ್‌ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ