Advertisement

Category: ಸಂಪಿಗೆ ಸ್ಪೆಷಲ್

ತೂಗುವ ಕನಸೇ ಕಣ್ಣಲಿ ನಿಲ್ಲು ನಾಳೆಗೂ ಮಿಗಲಿ ಸವಿಬಾಳು

“ನೀರು, ಗಾಳಿ, ಬೆಳಕಿನಂತೆಯೇ ಎಷ್ಟೋ ವಿಧದ ಸಂಪತ್ತುಗಳು ನಮ್ಮಲ್ಲಿದ್ದರೂ, ಅವುಗಳ ಮಹತ್ವವನ್ನು ನಾವು ಅರಿತಿರುವುದಿಲ್ಲ. ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ಹೇಗೋ ಜಾಗ ಮಾಡಿಕೊಂಡು ಕಚೇರಿ ತಲುಪುವ, ಜಾತ್ರೆಯಲ್ಲಿ ಸೇರಿದ ಜನಜಂಗುಳಿಯಲ್ಲಿ ತೇರಿನ ಕಳಸವನ್ನೇ ನೋಡುತ್ತಾ, ಜೈಕಾರ ಹಾಕುತ್ತ ಮುಂದೆ ಮುಂದೆ ಸಾಗುವ, ಮನೆಗೆ ಬರುವ ನೆಂಟರೊಡನೆ ಬಾಯಿತುಂಬಾ ಮಾತನಾಡುತ್ತಾ ಚಹಾಕುಡಿವ, ಆಪ್ತರನ್ನು…”

Read More

2020 ರಲ್ಲಿ ಓದಿದ ಪುಸ್ತಕ ಲೋಕ: ಶ್ವೇತಾ ಹೊಸಬಾಳೆ ಬರೆದ ಲೇಖನ

“ಪುಸ್ತಕಗಳ ಓದು ಎಕನಾಮಿಕ್ಸ್ ನಲ್ಲಿ ಬರುವ ಉಪಭೋಗ ಸಿದ್ಧಾಂತಕ್ಕೆ ವಿರುದ್ಧ! ಒಂದು ಪುಸ್ತಕವನ್ನೋದಿದರೆ ಇನ್ನಷ್ಟು ಓದಬೇಕು, ಅದು ಕಟ್ಟಿಕೊಡುವ ಅದರದೇ ಪ್ರಪಂಚದಲ್ಲಿ ಸ್ವಲ್ಪ ಹೊತ್ತಾದರೂ ಕಳೆದುಹೋಗಬೇಕು ಎನ್ನುವ ಪಾಸಿಟಿವ್ ಹಪಾಹಪಿ ಹೆಚ್ಚಾಗುತ್ತದೆಯೇ ವಿನಃ ಸಾಕು ಎನಿಸುವುದಿಲ್ಲ. ಹಾಗಾಗಿ ಖೋ ಕೊಟ್ಟಂತೆ ಒಂದು ಪುಸ್ತಕ ಮುಗಿಯುತ್ತಿದ್ದಂತೆ ಮತ್ತೊಂದು ಕೈಗೆ ಬಂದು ಓದಿನ ಸರಣಿ ಮುಂದುವರೆಯಿತು..”

Read More

ಸಾಯುವ ಕಾಲಕ್ಕೆ ದೇವರ ಸಮಾನ ಆಗುವ ಮನುಷ್ಯ

“ಮನುಷ್ಯನ ಸಹಜವಾದ ಮಾನಸಿಕ ವ್ಯಾಪಾರದಲ್ಲಿ ಸ್ಮೃತಿ ವಿಸ್ಮೃತಿಗಳು, ಭೂತ ವರ್ತಮಾನ ಭವಿಷ್ಯಗಳು ಒಂದಾಗುತ್ತವೆ. ರಿಯಾಲಿಟಿ ಮತ್ತು ಕನಸುಗಳು ಮಿಶ್ರಗೊಳ್ಳುತ್ತವೆ. ಕಾಲಕ್ರಮವನ್ನು ಧಿಕ್ಕರಿಸಿ ನೆನಪುಗಳು ಧಾವಿಸಿ ಬರುತ್ತವೆ. ಯಾವ ನೆನಪೂ ಸ್ಪಷ್ಟವಾಗಿರುವುದಿಲ್ಲ. ಪಶ್ಚಾತ್ತಾಪ, ಪಾಪಪ್ರಜ್ಞೆ, ಎಲ್ಲವನ್ನೂ ತಿದ್ದಿ ಬರೆಯುವ, ಇನ್ನೊಮ್ಮೆ ಇದಕ್ಕಿಂತ ಉತ್ತಮವಾಗಿ ಬದುಕುವ ಅವಕಾಶ ಸಿಕ್ಕಿದ್ದರೆ ಎನ್ನುವ ಹಂಬಲ. ನನಗೋ ಕೆಲವೊಂದು ದುಸ್ವಪ್ನಗಳು ಮರುಕಳಿಸುತ್ತ ಇರುತ್ತವೆ. ಎಲ್ಲಿಗೋ ಹೊರಟಿದ್ದೇನೆ…”

Read More

ಹುಣ್ಣಮೀಗೊಂಥರಾ ಹೋಳಗಿ, ಅಮ್ವಾಸಿಗೊಂಥರಾ ಹೋಳಗಿ…

“ಸಣ್ಣಸಣ್ಣ ಸಂಭ್ರಮಕ್ಕೂ, ಹಬ್ಬಕ್ಕೂ ಹುಣ್ಣಮೀಗೂ ಕಡ್ಲಿಬ್ಯಾಳೀ ಹೋಳಿಗಿ, ತೊಗರಿ ಬ್ಯಾಳಿ ಹೋಳಿ, ಆ ಕಡಬು ಈ ಕಡುಬು, ಮತ್‌ ಆ ಥರದ್‌ ಹುಗ್ಗಿ, ಇಂಥಾ ಹುಗ್ಗಿ ಅಂತೆಲ್ಲ ಮಾಡೂದ ಮಾಡೂದು. ಸೀ ಇಷ್ಟಾ ಅಂತ ಒಬ್ಬಾಕೇ ಮಾಡಿ ಕುತ್ಕೊಂಡ್‌ ತಿನ್ನೂವಂಥ ಹೆಣಮಗಳು ಅಲ್ಲ ಬಿಡ್ರಿ. ತಾ ಜಗ್ಗ ಕೆಲಸಾ ಮಾಡಿ ಮಂದೀಗೆ ತಿನ್ನಸೂದಂದ್ರ ಸಂಭ್ರಮ ಅಕೀಗೆ. ಹಂಗಂತನ, ನಮ್‌ ಹಳೇಮನ್ಯಾಗಿದ್ದ ನನ್‌ ಕ್ಲಾಸ್‌ ಮೇಟು ಡುಮ್ಮನ ದಿನೇಶಾ, “ಏ, ನಿಮ್‌ ಮಮ್ಮೀನ ನಮ್‌ ಮಮ್ಮೀನ ಎಕ್ಸ್ಚೇಂಜ್‌ ಮಾಡ್ಕೊಳ್ಳೂಣಣ… ಪ್ಲೀಸ್‌..”

Read More

ನಾನು ನಾನೇ ಆಗಿದ್ದ ಆ ಒಂದು ದಿನ: ಶ್ವೇತಾ ಹೊಸಬಾಳೆ ಲಹರಿ

“ಗಂಡಸರು ಹೀಗೆ ಹೋಗುವುದು ಯಾರಿಗೂ ಅಸಹಜ ಎನ್ನಿಸುವುದೂ ಇಲ್ಲ; ಜವಾಬ್ದಾರಿಗಳಿಂದ ಕಳಚಿಕೊಂಡಂತೆ ಎಂದೂ ಅನ್ನಿಸುವುದಿಲ್ಲ. ದುಡಿಯುವ ಗಂಡಸಿಗೆ ವಿರಾಮ-ವಿಶ್ರಾಂತಿ ಬೇಕು ಎನ್ನುವ ಅನುಕಂಪ. ಅದೇ ಮಗುವನ್ನೂ ನೋಡಿಕೊಂಡು ಮನೆಕೆಲಸಗಳನ್ನು ನಿಭಾಯಿಸುವ, ಅಮ್ಮನಾದ ನಂತರ ವೈಯಕ್ತಿಕ ಜೀವನವೇ ಮರೀಚಿಕೆಯಾಗಿ, ಹವ್ಯಾಸ, ಸಿನೆಮಾ, ನಾಟಕ..”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ