Advertisement

Category: ಸರಣಿ

ಗಂಟಿಚೋರರ ತುಡುಗಿನ ಲೋಕ

ಇದೊಂದು ಭಿನ್ನವಾದ ಕಳವು. ಮೊದಲೇ ಇಂತಹ ಊರಲ್ಲಿ ನಾಟಕ, ಬಯಲಾಟ ಅಥವಾ ಪಾರಿಜಾತ ನಡೆಯುವ ಸುದ್ದಿ ತಿಳಿದು, ಆ ನಾಟಕದ ರಾತ್ರಿ ಕಳ್ಳತನ ಮಾಡುವುದಕ್ಕೆ ಆಯಾ ಊರುಗಳಲ್ಲಿ ಮೊದಲೇ ಸುತ್ತಿ ಶ್ರೀಮಂತರ ಮನೆಗಳನ್ನು ಗುರುತು ಮಾಡಿ ತುಡುಗು ಮಾಡುತ್ತಿದ್ದರು. ಮುಖ್ಯವಾಗಿ ಹಿಂದೆ ಉತ್ತರ ಕರ್ನಾಟಕದಲ್ಲಿ ನಿರಂತರವಾಗಿ ನಾಟಕಗಳು ನಡೆಯುತ್ತಿದ್ದುದರಿಂದ ಇದರ ಲಾಭವನ್ನು ಗಂಟಿಚೋರರು ತುಡುಗು ಮಾಡಲು ಬಳಸುತ್ತಿದ್ದರು. ಅರುಣ್ ಜೋಳದ ಕೂಡ್ಲಿಗಿ ಬರೆಯುವ ಗಂಟಿಚೋರರ ಕಥನದ ಐದನೆಯ ಕಂತು ಇಲ್ಲಿದೆ.

Read More

ವಡ್ಡಾರಾಧನೆಯ ವಿದ್ಯುತ್ ಚೋರನೆಂಬ ರಿಸಿಯು ಗಂಟಿಚೋರನಿರಬಹುದೇ?

ಜೈನಧರ್ಮದ ಪಾರಮ್ಯವನ್ನು ಸಾರುವ ಕೃತಿಗಳು ಕಳ್ಳತನವನ್ನು ಪಾಪವೆಂದು ಹೇಳುತ್ತವೆ. ಈ ಹಿನ್ನೆಲೆಯನ್ನು ಗಮನಿಸುತ್ತಾ ಗಂಟಿಚೋರ್ ಸಮುದಾಯದ ಜತೆ ಇದನ್ನು ತಳಕುಹಾಕಿದರೆ ಕೆಲವು ಸಂಗತಿಗಳು ಹೊಳೆಯುತ್ತವೆ. ಜಿನಧರ್ಮ ಕಳ್ಳತನವನ್ನು ‘ಪಾಪ’ ಎನ್ನುವುದಕ್ಕೆ ಪೂರಕವಾಗಿ ಎಂಬಂತೆ ಗಂಟಿಚೋರ್ ಸಮುದಾಯದಲ್ಲಿ ‘ಪಾಪನೋರು’ ಎನ್ನುವ ಬೆಡಗೊಂದು ಇರುವುದನ್ನು ಗಮನಿಸಬಹುದು. ಈ ಬೆಡಗು ತಮ್ಮನ್ನು ‘ಪಾಪದವರು’ ಅಥವಾ ಜಿನಧರ್ಮದ ಪ್ರಕಾರ ‘ಪಾಪ ಕಾರ್ಯದಲ್ಲಿ’ ತೊಡಗಿದವರು ಎನ್ನುವುದರ ಸಾಂಕೇತಿಕವಾಗಿ ಬಂದಿರಬಹುದೇ…

Read More

ಚಳಿಗಾಳಿ, ಸಿಹಿಗಾಳಿಯ ಕಂಪೆಲ್ಲ ಸೊಗಸಾಗಿ..

ಚಳಿಗಾಲಕ್ಕೆಂದೆ ಅರಳುವ ಕೆಲವು ಕಾಡ ಹೂಗಳಿಗೆ ಹೆಸರಿಲ್ಲದಿದ್ದರೂ ಬಣ್ಣಗಳಿವೆ. ಈ ಬಣ್ಣದ ಹೂಗಳಿಗೆ ಹೆಸರಿಡುವ ಕೆಲಸವೂ ಅಣಶಿ ಮಕ್ಕಳಿಂದ ಸದ್ದಿಲ್ಲದೆ ನಡೆಯುತ್ತದೆ. ಕೊರೆವ ಚಳಿಯಲ್ಲೂ ಮಕ್ಕಳೆಲ್ಲ ಹಳ್ಳದ ಅಂಚಿರುವ ಕಾಡ ಮರದ ತುದಿಯನ್ನೇರಿ ಹಳ್ಳದ ನೀರಿಗೆ ಧುಮುಕಿ ಈಜುವ ಸಾಹಸದ ಕ್ರೀಡೆಯಲ್ಲಿ ತಲ್ಲೀನರಾಗಿದ್ದಾರೆ. ಶಿಶಿರನ ಹೆಸರು ಕೇಳತ್ತಿದ್ದಂತೆಯೆ ನದಿಯೂ ಕೂಡ ನಲುಮೆಯ ಮಾತಾಡಿದೆ. ಪ್ರತಿ ಚಳಿಗಾಲಕ್ಕೆ ಕಾಂದಾಬಜ್ಜಿ ಬಿಸಿ ಬಿಸಿ ತಯಾರಿಸಿ ಮಾರುವ…

Read More

ಪ್ರತಿರೋಧ ಮಾರ್ಗಗಳ ಕತೆ ಹೇಳುವ ಸಿನಿಮಾ ʻಕೈರೋ 678’

ಫೈಜಾ಼ಳ ಗಂಡನಿಗೆ ಸರಿಯಾದ ಕೆಲಸವಿಲ್ಲ. ವರಮಾನದ ಅಭಾವವಿರುವ ಗಂಡ ಮತ್ತು ಸ್ಕೂಲಿಗೆ ಹೋಗುವ  ಇಬ್ಬರು ಮಕ್ಕಳನ್ನು ಆಕೆ ನಿಭಾಯಿಸಬೇಕು. ಆದಾಯದ ಕೊರತೆ. ಅದಕ್ಕಾಗಿ ಸಂಬಳ ವಿತರಿಸುವವನೊಂದಿಗೆ ಮಾಡುವ ಚರ್ಚೆ ವ್ಯರ್ಥ. ಜೊತೆಗೆ ಪ್ರತಿದಿನದ ಲೈಂಗಿಕ ಹಿಂಸೆಯಿಂದ ರಾತ್ರಿ ಕಾಡಿ, ಬೇಡಿ ಬರುವ ಗಂಡನನ್ನು ಹತ್ತಿರ ಬಿಟ್ಟುಕೊಳ್ಳಲು ಮನಸ್ಸಿರುವುದಿಲ್ಲ. ಗಂಡಸು ಎಂದರೆ ಸಾಕು ಉರಿದುಕ್ಕುವ ಹಿಂಸೆ ಆವರಿಸಿ ಗಂಡನನ್ನು ದೂರವಿಡಲು ಪ್ರತಿ ರಾತ್ರಿಯೂ ಈರುಳ್ಳಿ ತಿನ್ನುತ್ತಾಳೆ. ಗಂಡನಿಗೋ ಉಕ್ಕೇರಿ ಬರುವ ಅಭಿಲಾಷೆಯನ್ನು ಹತ್ತಿಕ್ಕುವ ಒದ್ದಾಟ.

Read More

ಅಪರಾಧ ಮತ್ತು ಶಿಕ್ಷೆ: ಸ್ಥಿಮಿತವಿಲ್ಲದ ಮನಸ್ಸು

ಈ ಎಲ್ಲ ಮಾತು ರಾಸ್ಕೋಲ್ನಿಕೋವ್‌ನನ್ನು ತಡೆದು ನಿಲ್ಲಿಸಿದವು. ಅವನ ನಾಲಗೆ ತುದಿಗೆ ಬಂದಿದ್ದ, ‘ನಾನು ಕೊಲೆಮಾಡಿದೆ,’ ಅನ್ನುವ ಮಾತು ಅಲ್ಲೇ ಹೆಪ್ಪುಗಟ್ಟಿತು. ಈ ಎಲ್ಲ ಉದ್ಗಾರ ಶಾಂತವಾಗಿ ಕೇಳಿಸಿಕೊಂಡ. ಹಿಂದೆ ತಿರುಗಿ ನೋಡದೆ ಪೋಲೀಸು ಸ್ಟೇಷನ್ನಿನ ರಸ್ತೆಯಲ್ಲಿ ನಡೆದ. ದಾರಿಯಲ್ಲಿ ಅವನ ಮುಂದೆಯೇ ಯಾವುದೋ ನೆರಳು ಹಾದು ಹೋದ ಹಾಗೆ ಅನ್ನಿಸಿತು. ಅವನಿಗೆ ಆಶ್ಚರ್ಯವಾಗಲಿಲ್ಲ. ಇದು ಹೀಗೇ ಆಗುತ್ತದೆ ಎಂದು ಮೊದಲೇ ಅವನು ಊಹಿಸಿದಂತಿತ್ತು. ಹೇಮಾರ್ಕೆಟ್ಟಿನಲ್ಲಿ ಎರಡನೆಯ ಬಾರಿ ಇಡೀ ಲೋಕಕ್ಕೆ….

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ