Advertisement

Category: ಸರಣಿ

ಇಂಚಿಂಚು ಸಂಚು ರೂಪಿಸುತ್ತಾ…: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಆರನೆಯ ಅಧ್ಯಾಯ

“ರಾಸ್ಕೋಲ್ನಿಕೋವ್‌ ನ ಮನಸ್ಸು ಕದಡಿತ್ತು. ಅದು ಎಲ್ಲ ಯುವಕರೂ ಸಾಮಾನ್ಯವಾಗಿ ಆಡುವಂಥ ಮಾತು, ಮಾಡುವಂಥ ಯೋಚನೆ. ಅವನೇ ಅಂಥ ಮಾತನ್ನ ಎಷ್ಟೋ ಸಾರಿ, ಎಷ್ಟೋ ಸಂದರ್ಭದಲ್ಲಿ, ಎಷ್ಟೋ ವಿಷಯಗಳ ಬಗ್ಗೆ ಕೇಳಿಸಿಕೊಂಡಿದ್ದ. ಆದರೆ, ಸರಿಯಾಗಿ ಇಂಥವೇ ಮಾತು, ಸರಿಯಾಗಿ ಇಂಥದೇ ಹೊತ್ತಲ್ಲಿ, ಅವನ ತಲೆಯಲ್ಲೂ ಸುಮಾರಾಗಿ ಅಂಥದೇ ವಿಚಾರ ಇರುವಾಗ ಯಾಕೆ ಕಿವಿಗೆ ಬೀಳಬೇಕಾಗಿತ್ತು?”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ..”

Read More

ಸತ್ತ ಕುದುರೆಯ ಎದೆಗೆ ಮತ್ತೆಮತ್ತೆ ಬಡಿಯುತ: ʼಅಪರಾಧ ಮತ್ತು ಶಿಕ್ಷೆʼ ಐದನೆಯ ಅಧ್ಯಾಯ

“ರಾಸ್ಕೋಲ್ನಿಕೋವ್ ಭಯಂಕರವಾದ ಕನಸು ಕಂಡ. ಪುಟ್ಟ ಊರಿನಲ್ಲಿ ಮಗುವಾಗಿದ್ದಾಗಿನ ಕನಸು. ಈಗ ಅವನಿಗೆ ಏಳು ವರ್ಷ. ಯಾವುದೋ ಹಬ್ಬದ ದಿನ ಅಪ್ಪನ ಜೊತೆಯಲ್ಲಿ ಸಾಯಂಕಾಲದ ಹೊತ್ತು ಉರಾಚೆ ನಡೆದುಕೊಂಡು ಹೋಗುತ್ತಿದ್ದಾನೆ. ಧಗೆಯ ದಿನದ ಮಂಕು ಸಂಜೆ. ಹಳ್ಳಿ ಅವನ ನೆನಪಿನಲ್ಲಿ ಹೇಗೆ ಉಳಿದಿತ್ತೋ ಕನಸಿನಲ್ಲೂ ತದ್ವತ್ ಹಾಗೇ ಕಾಣುತ್ತಿತ್ತು. ನೆನಪಿನಲ್ಲಿ ಮಸುಕಾಗಿದ್ದ ಊರು ಕನಸಿನಲ್ಲಿ ಸ್ಪಷ್ಟವಾಗಿತ್ತು.”

Read More

ಫ್ಯದೊರ್ ದಾಸ್ತಯೇವ್ಸ್ಕಿಬರೆದ ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ನಾಲ್ಕನೆಯ ಅಧ್ಯಾಯ

“ಹೀಗೆ ಪ್ರಶ್ನೆ ಹಾಕಿಕೊಂಡು ಹಿಂಸೆಮಾಡಿಕೊಳ್ಳುತ್ತಾ ಇದ್ದ. ಆಗುವ ಹಿಂಸೆಯಲ್ಲಿ ಒಂದು ಥರ ಸಂತೋಷವನ್ನೂ ಪಡುತ್ತಿದ್ದ. ಈ ಯಾವ ಪ್ರಶ್ನೆಗಳೂ ಹೊಸವಲ್ಲ. ಆ ತಕ್ಷಣಕ್ಕೆ ಹುಟ್ಟಿದವೂ ಅಲ್ಲ. ಈ ಪ್ರಶ್ನೆಗಳೆಲ್ಲ ಹಳೆಯ ನೋವಿನ ಹಾಗೆ ಹಿಂಸೆ ಕೊಟ್ಟು ಕೊಟ್ಟು ಮನಸ್ಸನ್ನು ನವೆಸಿಬಿಟ್ಟಿದ್ದವು. ಈ ನೋವು ಬಹಳ ಬಹಳ ಹಿಂದೆಯೇ ಹುಟ್ಟಿತ್ತು, ಬೆಳೆದಿತ್ತು, ಇತ್ತಿಚೆಗಷ್ಟೇ ಮಾಗಿತ್ತು, ದಟ್ಟೈಸಿತ್ತು..”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ

Read More

ಸಿಂಹದ ಮೂಗ ತುದಿಯ ಸವರಿದ ತೆಂಗಿನ ತೋಪಿನವನ ಕಥೆ

“ಕಣ್ಣಿಂದ ಕೆಲವೇ ಕಾಲದಲ್ಲಿ ಮರೆಯಾಗಲಿರುವ ಬಹಳಷ್ಟು ಸಂಗತಿಗಳು ಅಪರಿಮಿತ ಸೌಂದರ್ಯದಿಂದ ಕೂಡಿರುತ್ತವೆ ಎನ್ನುವುದು ಬಲ್ಲವರು ಹೇಳುವ ಮಾತು. ಕಳೆದ ಹದಿನೈದು ಮಾಸಗಳಿಂದ ವಾಸಿಸುತ್ತಿರುವ ಈ ಲಕ್ಷದ್ವೀಪ ಸಮೂಹದ ಕಡಲು ಮತ್ತು ಆಕಾಶದ ಅನೂಹ್ಯ ನೀಲ ನಿಚ್ಛಳ ಬಣ್ಣವನ್ನು ನೋಡುತ್ತಾ ಇದ್ದರೆ ನನಗೂ ಹಾಗೇ ಅನಿಸುತ್ತದೆ. ಹಾಗಾಗಿ ಇಲ್ಲಿ ಇರುವ ತನಕ ಒಂದು ನಿಮಿಷವನ್ನೂ ವ್ಯರ್ಥ…”

Read More

ಫ್ಯದೊರ್ ದಾಸ್ತಯೇವ್ಸ್ಕಿಬರೆದ ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಅಧ್ಯಾಯ

“ಅವತ್ತು ಮಾರ್ಫಾ ಅವರಿಬ್ಬರನ್ನೂ ತೋಟದಲ್ಲಿ ನೋಡುವ ಬಹಳ ಮೊದಲೇ ದುನ್ಯಾ ಅವನಿಗೆ ಬರೆಯಬೇಕಾಗಿ ಬಂದಿದ್ದ ಪತ್ರ ತೋರಿಸಿದ. ಅವನ ವಾಗ್ದಾನಗಳನ್ನೆಲ್ಲ ನಿರಾಕರಿಸಿ ಅವನು ಹೇಳಿದ ಹಾಗೆ ಗುಟ್ಟಾಗಿ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ಬರೆದಿದ್ದಳು. ಅಲ್ಲದೆ ಅವನು ಮಾರ್ಫಾಗೆ ಅನ್ಯಾಯ ಮಾಡುತ್ತಿದ್ದಾನೆ, ಮಕ್ಕಳ ತಂದೆಯಾಗಿ…”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ