ಬದುಕಿನ ನರಕದ ಗೋಡೆಗಳನ್ನು ಸಂತಸದ ಕ್ಷಣಗಳಿಂದ ಒಡೆಯುತ್ತಾ ಖುಷಿಯಾಗಿ….
”ಈಗ ನಾನೂ ಮಗುವೂ ಸಂಜೆಯ ಇಳಿಬೆಳಕಲ್ಲಿ ವಾಕಿಂಗು ನಡೆದು ಹೋಗುವ ಅಭ್ಯಾಸ ಮಾಡಿಕೊಂಡಿದ್ದೆವು. ಮನೆಯ ಹಿಂದಿನ ಪೊದರುಗಳಲ್ಲಿ ಜೊಂಪೆ ಜೊಂಪೆ ಸಿಗುತ್ತಿದ್ದ ‘ಮುಟ್ಟಿದರೆ ಮುನಿ’ಯನ್ನು ನಾಚಿಸುವುದು ಅವಳ ಇಷ್ಟದ ಆಟವಾಗಿತ್ತು. ಹಾಗೇ ಬಣ್ಣಬಣ್ಣದ ಸಂಜೆಮಲ್ಲಿಗೆಯ ರಾಶಿಯನ್ನೇ ಕಿತ್ತು ತಂದು ರಂಗೋಲೆಯ ಮೇಲೆ ಸಿಂಗರಿಸುವುದು ಅವಳ ಹವ್ಯಾಸ.’
Read More