Advertisement

Category: ಸರಣಿ

ಅಣಶಿ ಘಟ್ಟದ ಮೇಲಿನ ಹಾದಿ

ಈ ಘಟ್ಟದ ಮಾರ್ಗದಲ್ಲಿ ಸಾಗುತ್ತಿದ್ದರೆ ಯಾರೋ ಹಿಂಬದಿಯಿಂದ ನಮ್ಮನ್ನು ಗಮನಿಸುತ್ತ ಅನುಸರಿಸುತ್ತ ಬಂದ ಹಾಗೆ ಅನಿಸುತ್ತದೆ. ಪಡ್ಡೆ ಹುಡುಗರ ಹಾಗೆ ಸೀಟಿ ಹಾಕುತ್ತ ನಮ್ಮ ಬೆನ್ನ ಹಿಂದೆಯೇ ಯಾರೋ ಬಂದಂತೆ ಅನಿಸಿ, ತಿರುಗಿ ನೋಡಿದರೆ ಯಾರೂ ಕಾಣುವುದಿಲ್ಲ.  ಇದ್ದಕ್ಕಿದ್ದಂತೆ ಸೀಟಿಯ ಸದ್ದು ನಿಲ್ಲುತ್ತದೆ. ಹೀಗೆ ಕಾಡುವ ಪಡ್ಡೆ ಹುಡುಗನ ಹೆಸರು ‘ನೀಲಿ ಸಿಳ್ಳಾರ’.  ಈ ವಿಶಿಷ್ಟ ಹಕ್ಕಿರಾಯ ಕಾಡಿನ ಸೊಬಗು ಹೆಚ್ಚಿಸುವವ. -ಅಕ್ಷತಾ ಕೃಷ್ಣಮೂರ್ತಿ ಬರೆಯುವ ‘ಕಾಳಿಯಿಂದ ಕಡಲಿನವರೆಗೆ’ ಸರಣಿಯಲ್ಲಿ ಕಾಡಿನ ವಿಸ್ಮಯಗಳ ವಿವರ. 

Read More

ʻಲೋಕ ಸಿನೆಮಾ ಟಾಕೀಸ್ʼ ನಲ್ಲಿ ಪೋಲೆಂಡ್ ನ ʻಇಡಾʼ ಸಿನಿಮಾ

ಆನ್ನಾ ಕ್ರಿಸ್ತನ ವಿಗ್ರಹವನ್ನು ಪೂರ್ಣಗೊಳಿಸುವ ಆನ್ನಾಳ ಪರಿಚಯವಾಗುತ್ತದೆ. ಹದಿನೆಂಟರ ಅವಳಿಗೆ ಮದರ್ ಸುಪೀರಿಯರ್ ಪ್ರಮಾಣ ವಚನ ಸ್ವೀಕರಿಸುವ ಮುಂಚೆ ‘ನಿನ್ನೂರಿಗೆ ಹೋಗಿ ದೂರದ ಸಂಬಂಧಿ ವಾಂಡಾ ಕ್ರುಜ್‌ಳನ್ನು ಭೇಟಿ ಮಾಡಿ ಬಾ’ ಎನ್ನುತ್ತಾಳೆ.
ಅವಳನ್ನು ಭೇಟಿಯಾಗುವ ಸಂದರ್ಭವು ಅವಳ ಮೇಲೆ ಬೀರಿದ ಪ್ರಭಾವಗಳನ್ನು  ಇಡಾ ಸಿನಿಮಾ ಕಟ್ಟಿಕೊಡುವ ರೀತಿ ವಿಭಿನ್ನವಾದುದು. ʻಲೋಕ ಸಿನೆಮಾ ಟಾಕೀಸ್ʼ ನಲ್ಲಿ ಪೋಲೆಂಡ್ ನ ʻಇಡಾʼ ಸಿನಿಮಾ ಕುರಿತು ಬರೆದಿದ್ದಾರೆ ಎ.ಎನ್. ಪ್ರಸನ್ನ.

Read More

‘ದೇವರು ಹೆಚ್ಚಿಗೆ ಕೊಟ್ಟದ್ದು ನನ್ನದಲ್ಲ’

ಹೊಸಬರು ಹಳ್ಳಿಗೆ ಬಂದರೆ ಕಟ್ಟೆಯ ಮೇಲೆ ಕುಳಿತ ಹಿರಿಯರು ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಎಲ್ಲಿಂದ ಬಂದಿದ್ದಾರೆ, ಯಾರ ಮನೆಗೆ ಹೋಗುತ್ತಿದ್ದಾರೆ. ಬಂದ ಕಾರಣವೇನು, ಅವರ ಕುಲಗೋತ್ರ ಯಾವುದು, ಆ ಆಗಂತುಕರ ಊರಿನಲ್ಲಿ ತಮಗೆ ಪರಿಚಯವಿದ್ದವರ ಕುರಿತು ತಿಳಿದುಕೊಳ್ಳುವುದು, ಆ ಊರಿನ ಜೊತೆಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಳ್ಳುವುದು ಮುಂತಾದವು ನಡೆದೇ ಇರುತ್ತಿದ್ದವು.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಏಳನೆಯ ಕಂತು.

Read More

ನೀಲಕಡಲನು ಸೀಳಿ ತೇಲುತ ಸಾಗಿದ ಪಯಣ

ಹಡಗು ಮುಂದೆ ಹೋದಂತೆ ದೋಣಿಯ ಹಾಗೆ ಓಲಾಡಲು ಶುರುವಿಟ್ಟುಕೊಂಡಿತು. ಕಡಲಿನ ಅಲೆಗಳಿಗೆ ಲಯಬದ್ಧವಾಗಿ ಚಲಿಸಿದರೂ ಒಮ್ಮೊಮ್ಮೆ ಮುಗ್ಗರಿಸಿದಂತೆ ಅನಿಸುತ್ತಿತ್ತು. ಯಾರೋ ಒಂದಿಬ್ಬರು ಅಚ್ಚರಿಯಾಗಿ ಆ ದೃಶ್ಯ ನೋಡುತ್ತಿದ್ದರೂ ಅವರೊಂದಿಗೆ ಚರ್ಚಿಸಲು ಭಾಷೆ ಅರಿಯದೆ ಇದಿನಬ್ಬ ತನ್ನ ಗತ ಬದುಕನ್ನು ಮೆಲುಕು ಹಾಕತೊಡಗಿದ. ತಾನು ಬದುಕಿನ ಯಾವ ಹಂತದಲ್ಲಿ ಇದ್ದೇನೆ ಎಂದು ಅರಿವಾಗುತ್ತಲೇ ದುಃಖ ಉಮ್ಮಳಿಸಿ ಬಂತು. ದುಃಖದಲ್ಲಿ ಅವನು ತಲೆಯಲ್ಲಿ ಹಾದು ಹೋದ ಯೋಚನೆಗಳೇನು?”

Read More

ಕ್ಲಾಸ್ಮೇಟ್..! ಗೋವಿಂದ ಗೋವಿಂದಾ..!!

ಬಾಲ್ಯದಲ್ಲಿ ನಮ್ಮ ಜೊತೆ ಆಟವಾಡುತ್ತಿದ್ದ ಅನೇಕರ ಹೆಸರು ಈಗಲೂ ನೆನಪಿಗೆ ಬಂದಾಗ, ಪ್ರತಿಯೊಬ್ಬರು ಆಗ ಮಾಡಿದ ಕೆಲವು ವಿಶೇಷ ಕಾರ್ಯಗಳನ್ನು ನೆನೆಸಿಕೊಂಡರೆ ನಗು ಕೂಡ ಬರುತ್ತಾ ಇರುತ್ತದೆ.. ಹೆಸರು ಮನಸ್ಸಿನ ಮೇಲೆ ಅಚ್ಚಾಗಿ ನಿಂತಿದ್ದರೂ, ಅವರು ಈಗ ಹೇಗಿರುತ್ತಾರೆ ಎಂದು ಗೊತ್ತಿರುವುದಿಲ್ಲ. ಹಾಗಾಗಿ ಕೆಲವೊಮ್ಮೆ ಅವರು ಬಂದು ನಮ್ಮ ಮುಂದೆ ನಿಂತರೂ ಅವರು ಯಾರು ಎಂಬುದು ತಿಳಿಯುವುದು ಅನೇಕ ಸರ್ತಿ ಕಷ್ಟಸಾಧ್ಯ.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ