ದೇವರನ್ನು ಕುರಿತು ಒಂದಿಷ್ಟು….: ಬಸವನಗೌಡ ಹೆಬ್ಬಳಗೆರೆ ಸರಣಿ
ಇತ್ತೀಚೆಗಂತೂ ದೇವರ ಆರಾಧನೆಯ ಜೊತೆ ಜೊತೆಗೆ ಪುರುಷ ಪ್ರಯತ್ನಕ್ಕೂ ಹೆಚ್ಚು ಒತ್ತು ಕೊಡಬೇಕು ಎಂದು ಕಲಿತಿದ್ದೇನೆ. ದೇವರು ಒಂಥರಾ ರಾಸಾಯನಿಕ ಕ್ರಿಯೆಯ ‘ಕ್ರಿಯಾವರ್ಧಕ’ (ಕ್ಯಾಟಲಿಸ್ಟ್) ಇದ್ದ ಹಾಗೆ ಎಂದು ನಂಬಿದ್ದೇನೆ. ವ್ಯಕ್ತಿ ತಾನು ಮಾಡುವ ಕಾರ್ಯಗಳಿಂದ ದೇವರ ಸ್ಥಾನಕ್ಕೆ ಏರಬಹುದು ಎಂದು ಹಲವು ಮಹಾನುಭಾವರ ಜೀವನದಿಂದ ತಿಳಿದುಕೊಂಡಿದ್ದೇನೆ. ಆದರೂ ಹಲವರು ದೇವರ ಹೆಸರಲ್ಲಿ ಜಗಳವಾಡುವುದನ್ನು ನೋಡಿ ವಿಚಿತ್ರ ಎನಿಸುತ್ತದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತನೆಯ ಕಂತು ನಿಮ್ಮ ಓದಿಗೆ
