ಪ್ರವೀಣ್ ಕುಮಾರ್ ಜಿ. ಬರೆದ ಈ ಭಾನುವಾರದ ಕತೆ
ರಾಜಣ್ಣನ ಕೊನೆಯ ಮಾತುಗಳನ್ನು ಕೇಳಿಸಿಕೊಂಡು ಕವಿತಾಳ ಕಣ್ಣುಗಳು ಗಾಬರಿಯಲ್ಲಿ ಅಗಲವಾದವಾ? ಅವನಿಗದು ಗೊತ್ತಾಗಲಿಲ್ಲವಾದರೂ ಉಸಿರು ಎಳೆಯುತ್ತಿದ್ದ ಕವಿತಾ “ನೀನಾದ್ಮ್ಯಾಲೆ ನನ್ನ ಯಾರೂ ಮುಟ್ಟಿಲ್ಲ.” ಎಂದು ಗೊಗ್ಗರು ದನಿಯಲ್ಲಿ ಹೇಳಿದ ಮಾತಿಗೆ ಬೇಕಾದ ಉಸಿರು ಪೂರ್ತಿ ಗಂಟಲಿನಿಂದಲೇ ಹೊರಗೆ ಹೋಗುತ್ತಿತ್ತು. “ನೀನಾದ್ಮ್ಯಾಲೆ ನನ್ನ…” ಎಂಬ ಶಬ್ದವೊಂದೇ ಅವನಿಗೆ ಅರ್ಧಂಬರ್ಧ ಕೇಳಿಸಿದ್ದು, ಅದೂ ಬರೀ ಗೊರಗೊರ. ಅವಳನ್ನೇ ದಿಟ್ಟಿಸುತ್ತಿದ್ದ ರಾಜಣ್ಣ ಕೆಲವೇ ಕ್ಷಣಗಳಲ್ಲಿ ಅವಳ ಉಸಿರು ನಿಂತಿದ್ದನ್ನು ಗೊತ್ತುಮಾಡಿಕೊಂಡು ತನ್ನ ಕುತ್ತಿಗೆಗೂ ಚಾಕು ಹಾಕಿಕೊಂಡ.
ಪ್ರವೀಣ್ ಕುಮಾರ್ ಜಿ. ಕಥಾ ಸಂಕಲನ “ಬಯಲು” ಕೃತಿಯ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
