Advertisement

Category: ಸಾಹಿತ್ಯ

ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ

ಇಲ್ಲಿಯವರೆಗೂ ನಿತ್ಯ ದೀಪ ಬೆಳಗುತ್ತಿದ್ದೆ.. ಅವನು ನನ್ನದೇ ಮನೆಯ ದಾರಿಯಲಿರುವನೆಂದು.. ದಿನವೂ ಬಾಗಿಲ ತುದಿಗೆ ನಿಂತು ಕಾಯುತ್ತಿದ್ದೆ, ಇನ್ನೇನು ಅವನು ಬಂದೇ ಬಿಡುವನೆಂದು.. ಆದರೇನು ಮಾಡುವುದು.. ಅಗಲಿಕೆಯ ನೋವುಗಳು ಎದೆಗೆ ಚೂರಿಯಾಗಿ ಇರಿದವು.. ಈ ಅಧೂರಿ ಪ್ರೇಮ್ ಕಹಾನಿ ಇದೇ ಜನುಮಕೆ ಮುಗಿದುಬಿಡಲಿ.. ಬೇರೇನೂ ಬಯಸಿರಲಿಲ್ಲ ನಾನು .. ನಮ್ಮದಾದ ಈ ಮುಹೊಬ್ಬತ್ತ್ ಹಾಗೆಯೇ ಇರಲೆಂದು ಹರಕೆ ಹೊತ್ತಿದ್ದೆ.. ಆ ಫಕೀರ ಜೋಡಿ ಸಲಾಮತ್ ರಹೇ ಎಂದು ಕೂಡ ಹರಸಿದ್ದನಲ್ಲ ಅವತ್ತು.. ಹಾಗೆ ಹರಸಿ ತಾಯತ ಕಟ್ಟಿದ್ದನಲ್ಲ ನಿನಗೆ..
ಲಕ್ಷ್ಮಣ ಶರೆಗಾರ ಬರೆದ ಈ ಭಾನುವಾರದ ಕತೆ “ಖುಧಾ ಹಾಫೀಸ್”

Read More

ಗುರುಪ್ರಸಾದ ಕಾಗಿನೆಲೆ ಬರೆದ ಈ ವಾರದ ಕತೆ “ವಿಲ್ಲಾ ವೈದ್ಯ”

ಒಂದು ಸಣ್ಣ ಕಂದು ಗುಬ್ಬಿ, ಹೌದು ಗುಬ್ಬಿ, ‘ಚಿಂವ್ ಚಿಂವ್’ ಎನ್ನುತ್ತಾ ವಿಲ್ಲಾ ವೈದ್ಯದ ತೆಗೆದಿದ್ದ ಬಾಗಿಲಿನಿಂದ ಕುಪ್ಪಳಿಸುತ್ತಾ ಹಾರಿ ಹೊರಬಂತು. ನಾನು ನೋಡುತ್ತಲೇ ಇದ್ದೆ. ಶಾರ್ಪ್ ಶೂಟರ‍್ಗಳು ತಮ್ಮ ಬೀಬೀ ಗನ್ನುಗಳನ್ನು ತೆಗೆದಿಟ್ಟು ಸಣ್ಣ ಬಲೆಯಂತದ್ದನ್ನು ತೆಗೆದರು. ಅತ್ತಲಿಂದ ಇತ್ತಲಿಗೆ, ಇತ್ತಲಿಂದ ಅತ್ತಲಿಗೆ ಹಾರುತ್ತಾ, ಒಂದು ದೊಡ್ಡ ಕುಪ್ಪಳಿಕೆಯಿಂದ ಹಾರಿದ್ದೇ ಸುಜ್ಜಿಯ ತಲೆಯನ್ನು ಸವರಿಕೊಂಡಂತೆಯೇ ಎಲ್ಲರಿಗೂ ಮೋಸ ಮಾಡಿದಂತೆ ಯಾರಿಗೂ ಸಿಗದೇ ಹಾರಿಹೋಯಿತು.
ಗುರುಪ್ರಸಾದ ಕಾಗಿನೆಲೆ ಬರೆದ ಕತೆ “ವಿಲ್ಲಾ ವೈದ್ಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ನಾಗರಾಜ ವಸ್ತಾರೆ ಬರೆದ ಈ ಭಾನುವಾರದ ಕತೆ “ತಂತ್ರ”

ಇಂತಹ ಶ್ರೇಯಾ ಈಗ ಏಕಾಏಕಿ ಹೀಗೇಕಾಗಿದ್ದಾಳೆ? ಇದು ಅವಳು ನನ್ನನ್ನು ಹಚ್ಚಿಕೊಂಡು ಹಪಹಪಿಸುತ್ತಿರುವ ಕಾರಣಕ್ಕೇ ಹೌದು. ಅದು ಚೆನ್ನಾಗಿಯೇ ಗೊತ್ತಿದೆ. ಅಥವಾ ಇದು ಬರೇ ದೈಹಿಕದ್ದೇ ಇರಬಹುದು. ಬಹುಶಃ ಮಾನಸಿಕವಾಗಿಯೂ ಇರಬಹುದು. ಒಟ್ಟಾರೆ ನನ್ನನ್ನು ಬಯಸುತ್ತಿದ್ದಾಳೆ ಅನ್ನುವುದಂತೂ ಖಾತ್ರಿಯೇ. ಇಷ್ಟಿದ್ದೂ ನಾನೇನು ತಾನೆ ಮಾಡಬಲ್ಲೆ? ಹದಿನೆಂಟು ಗಂಟೆಗಳ ನನ್ನ ಎಚ್ಚರದಲ್ಲಿ ನನಗಾಗಿಯೆಂದು ಎಷ್ಟು ತಾನೇ ಪಾಲು ಮೀಸಲಿಟ್ಟಿದ್ದೇನೆ? ಕೆಲಸ ಮತ್ತು ಮನೆಗಳ ಆಚೆ ನನ್ನದು ಅಂತ ಬದುಕನ್ನು ನಾನೆಂದೂ ಕನವರಿಸಿದವನಲ್ಲ. ಈ ಸಲವಾದರೂ ಒಂದು ವಾರ ಕೆಲಸಕ್ಕೆ ಬಿಡುವು ಕೊಟ್ಟು ಎಲ್ಲಾದರೂ ಹೋಗಿಬರಬೇಕು.
ನಾಗರಾಜ ವಸ್ತಾರೆ ಬರೆದ ಕತೆ “ತಂತ್ರ”

Read More

ಆಶಾ ಜಗದೀಶ್‌ ಬರೆದ ಈ ಭಾನುವಾರದ ಕತೆ “ನೆನಪುಗಳು”

ಕಣ್ಣ ಹೊಸಿಲ ದಾಟಿ ಹನಿಯೊಂದು ಮತ್ತೆ ಉಪ್ಪು ಕಡಲನ್ನು ಸೇರಿತು. ಅವನ ಜೊತೆ ಹಾಕಿದ ಹೆಜ್ಜೆಗಳು, ಮಾತು, ನಗು, ಮುದ್ದು, ಎದೆಬಡಿತ, ಆಣೆ, ಪ್ರಮಾಣ, ಕಣ್ಣೀರು, ನೋವು… ಯಾವುದೂ ಸುಳ್ಳಲ್ಲ. ಅವನು ಅಷ್ಟೊಂದು ದ್ರೋಹಿಯಾಗಿರಲು ಸಾಧ್ಯವಿಲ್ಲ. ಅದರ ಸತ್ಯ ನನಗೆ ಗೊತ್ತು. ತೀವ್ರ ಭಾವಗಳು ಹೃದಯದಿಂದಲೇ ಹುಟ್ಟುತ್ತವೆ. ಆದರೆ ಮನುಷ್ಯನಾದವನಿಗೆ ಅವನ್ನು ತನ್ನ ಸಮಯಸಾಧಕತನಕ್ಕೆ ಬಳಸಿಕೊಳ್ಳುವುದು ಗೊತ್ತು, ಸತ್ಯವಾಗುಳಿವ ಅವಕಾಶವಿದ್ದಾಗಲೂ.
ಆಶಾ ಜಗದೀಶ್‌ ಬರೆದ ಈ ಭಾನುವಾರದ ಕತೆ “ನೆನಪುಗಳು”

Read More

ಹುತಾತ್ಮ ಜತೀಂದ್ರನಾಥರಿಂದಾಗಿ ಮೊಳಗಿದ ‘ಪಾಂಚಜನ್ಯ’: “ಹಳೆಯ ಪುಟಗಳಿಂದ” ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ

ಆಗ ಕುವೆಂಪು ತಾವು ಬರೆಯುತ್ತಿದ್ದ ದಿನಚರಿ, ಪತ್ರಗಳು, ಕವಿತೆಗಳು ಮೊದಲಾದುವುಗಳ ತುದಿಯಲ್ಲಿ ‘ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಬರೆಯುತ್ತಿದ್ದರು. ಪಾಂಚಜನ್ಯವನ್ನು ಮೊದಲು ಪ್ರಕಟಿಸಿದ ‘ವಿಶ್ವಕರ್ಣಾಟಕ’ ಪತ್ರಿಕೆಯ ಸಂಪಾದಕರಿಗೆ ಬರೆದಿದ್ದ ಪೋಸ್ಟ್ ಕಾರ್ಡಿನಲ್ಲೂ ಈ ಕ್ರಾಂತಿ ಬೀಜಾಕ್ಷರಗಳನ್ನು ಕಂಡು, ತಿ.ತಾ.ಶರ್ಮರು ‘ಅಷ್ಟು ಬಟ್ಟಬಯಲಾಗಿ ಬರೆಯಬಾರದು’ ಎಂದು ಕವಿಯ ಹಿತಕ್ಕಾಗಿ ಹೇಳಿದ್ದರಂತೆ. ಕುವೆಂಪು ಈ ಕ್ರಾಂತಿಗೀತೆಯನ್ನು ಬರೆದು ಸಭೆಗಳಲ್ಲಿ ವೀರಾವೇಶದಿಂದ ಅಭಿನಯಪೂರ್ವಕವಾಗಿ ವಾಚಿಸುತ್ತಿದ್ದರು.
“ಹಳೆಯ ಪುಟಗಳಿಂದ” ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ