Advertisement

Category: ವಾರದ ಕಥೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆಶಾ ಜಗದೀಶ್ ಬರೆದ ಕಥೆ

ಅದು ವಯಸ್ಸಾದ ತಂದೆ, ತಾಯಿ, ಮಡದಿ, ಮಕ್ಕಳಿದ್ದ ತುಂಬು ಕುಟುಂಬ, ಈ ಜೇನಿನ ಗೂಡಿಗೆ ಕಲ್ಲು ಹೊಡೆದುಬಿಟ್ಟೆನಾ! ನಡುಗಿ ಹೋಗಿದ್ದೆ. ಲಕ್ಷ್ಮಿ ಗುದ್ದಾಡಿದಳು, ಹಾದಿಬೀದಿ ರಂಪ ಮಾಡಿದಳು, ಯಾವಾಗ ನನ್ನ ಸೀರೆ, ಪೋಲ್ಕ ಜಗ್ಗಾಡಿ ನನ್ನ ಮೇಲೆ ಕೈ ಎತ್ತಿದಳೋ, ಮಾದೇವ ಕಡ್ಡಿ ತುಂಡು ಮಾಡಿಬಿಟ್ಟ.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಆಶಾ ಜಗದೀಶ್‌ ಬರೆದ ಕತೆ ‘ಎಲೆ ಉದುರುವ ಕಾಲಕ್ಕೆʼ

Read More

ಅಕ್ಷತಾ ಕೃಷ್ಣಮೂರ್ತಿ ಬರೆದ ಭಾನುವಾರದ ಕತೆ ‘ಅಬ್ಬೋಲಿ’

”ಕಾಳಿ ನದಿ ಆಣೆಕಟ್ಟಿನ ಕೆಲಸ ನೋಡಿಕೊಳ್ಳುವ ಅಧಿಕಾರಿಗಳು ರಾತ್ರಿ ಊಟಕ್ಕೆ ಬರುತ್ತಿದ್ದರು. ಅವರಿಗೆ, ‘ಒರಿಜನಲ್ಲೂ ಮತ್ತೆಲ್ಲೂ ಸಿಗದು.ತಾಜಾ ಮಾಲು’ ಎಂದು ಕಳ್ಳು ಮಾರಿ ಹಣ ವಸೂಲಿ ಮಾಡುತ್ತಿದ್ದ. ಅದರ ಅರ್ಧ ಪಾಲು ಸಡಗೋನಿಗೂ ಹೋಗುತ್ತಿತ್ತು.ಇಂತಹುದೆಲ್ಲ ವ್ಯವಹಾರ ಮಾಡುತ್ತಾ ಸಡಗೋ ಕಳ್ಳಿನ ದಾಸನಾದ. ಡಿಸೆಂಬರನಿಂದ ಫೆಬ್ರುವರಿಯವರೆಗು ಸಿಗುವ ಕಳ್ಳು ಕುಡಿಯುತ್ತ ಕಾಡಿನ ಯಾವುದೊ ಮರದ ಅಂಚಲ್ಲಿ…”

Read More

ಉಮೇಶ ದೇಸಾಯಿ ಬರೆದ ಈ ಭಾನುವಾರದ ಕಥೆ

“ಉಪಕಾರಸ್ಮರಣೆ ಈ ರೀತಿಯದ್ದಾಗಿರುತ್ತದೆ ಅಂತ ನಾ ತಿಳಿದಿರಲಿಲ್ಲ. ಒಂದೆರಡು ಸಲ ಮನೆಗೆ ಬಂದ ಪಾಟೀಲರ ಕಣ್ಣುಗಳೇ ಎಲ್ಲ ಹೇಳುತ್ತಿದ್ದವು. ಅಳುಕು ಮೊದಲು ಕಾಡಿತು ನಿಜ.. ಮುಖ್ಯವಾಗಿ ಸಂಬಂಧಕ್ಕೆ ಏನು ಹೆಸರಿಡುವುದು ಅಂತ.. ಅವರಿಗೆ ಮದುವೆಯಾಗಿತ್ತು ಮಕ್ಕಳಿದ್ದರು. ಆ ಸೆಳೆತ ಬಲವಾಗಿತ್ತು. ಕರಗಲು ಬಹಳ ಸಮಯ ಹಿಡಿಯಲಿಲ್ಲ. ಆದರೆ ಹಾಗೆ ಬೆರೆತಾಗ ಹೊಸ ಅನುಭೂತಿ ದೊರೆತದ್ದು ಸುಳ್ಳಲ್ಲ. ಹಳೆಯ ಗಂಡ ಸಿಗರೇಟಿನಿಂದ ಸುಟ್ಟ ಗಾಯಗಳ ಮೇಲೆ ಪಾಟೀಲರ ತುಟಿಗಳು ಆಡುವಾಗ ಹೊಸ ಅನುಭವ.”
ಉಮೇಶ ದೇಸಾಯಿ ಬರೆದ ಕಥೆ ‘ಕ್ಷಮೆಯೊಂದಿರಲಿ…’ ನಿಮ್ಮ ಈ ಭಾನುವಾರದ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅನುಪಮಾ ಪ್ರಸಾದ್ ಬರೆದ ಕಥೆ

“ಗೆಯ್ಮೆ ಮಾಡುತ್ತಲೇ ಬದುಕು ಕಟ್ಟಿಕೊಂಡವನು ಜಯಂತ ಪೂಜಾರಿ. ಶಾಲಾ ದಿನಗಳಿಂದಲೇ ಕಬಡ್ಡೀ ಜಯಂತ ಎಂದೇ ಹೆಸರು ಪಡೆದವನು. ಅವನಿದ್ದಲ್ಲಿ ಎಂತಹ ಜಡಬರತನೂ ಪುಟಿದೇಳಲೇಬೇಕು ಅಂತಹ ಪಾದರಸ. ದೇವ ನಗರಿಯಿಂದ ಹತ್ತು ಮೈಲು ದೂರದ ಏಯ್ಡೆಡ್ ಹೈಸ್ಕೂಲ್‌ನಲ್ಲಿ ದಿನ ಗುತ್ತಿಗೆಗೆ ಪಿ.ಟಿ. ಮೇಷ್ಟ್ರಾಗಿ ಸೇರಿದಂದಿನಿಂದ ವಿದ್ಯಾರ್ಥಿಗಳನ್ನು ಕಂಬಳದ ಕೋಣಗಳಂತೆ ಹುರಿಗೊಳಿಸುತ್ತಾನೆಂದುಪ್ರಸಿದ್ದಿ ಪಡೆದಿದ್ದ.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಅನುಪಮಾ ಪ್ರಸಾದ್ ಬರೆದ ಕಥೆ ‘ಕಾಳಿಂದಿ ಮಡು’

Read More

ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕಥೆ “ಕಲಗಚ್ಚು”

“ಆಗಲೂ ಹೀಗೇ ಇದ್ದಳು. ಸಂಜೆಗತ್ತಲ ಹೊತ್ತಲ್ಲಿ ನೂರು ಆಶೆಗಳನ್ನು ಹುಟ್ಟಿಸುವವಳು ಒಂದು ಸಂಜೆ ಇರುಳು ತಲೆಯ ಮೇಲಿದ್ದ ಕಲಗಚ್ಚಿನ ಬಕೆಟ್ಟನ್ನು ನನ್ನ ಮೇಲೆ ಬಗ್ಗಿಸಿದ್ದಳು. ಆಮೇಲೆ ಎಂದೂ ಬಂದಿರಲಿಲ್ಲ. ಮಾತೂ ಬಿಟ್ಟಿದ್ದಳು. ಗುರುತೇ ಇಲ್ಲದವಳಂತೆ ದೂರವಾದಳು. ನಾನೂ ಊರು ಬಿಟ್ಟು ದೂರ ಎಲ್ಲೆಲ್ಲೋ ಹೋದೆ. ಏನೆಲ್ಲಾ ಆದೆ. ಅವಳ ಮೇಲೇ ಮೊದಲ ಕತೆ ಬರೆದು ಹರಿದು ಹಾಕಿದೆ. ಆಮೇಲೆಯೂ ಕಥೆಗಳನ್ನು ಬರೆದೆ. ಕವಿಯೂ ಆದೆ.”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ