Advertisement

Category: ಅಂಕಣ

ಮಹಿಳಾ ದೌರ್ಜನ್ಯದ ಸುತ್ತ…: ವಿನತೆ ಶರ್ಮ ಅಂಕಣ

ಒಬ್ಬ ಮಹಿಳೆ ತನ್ನ ಗಂಡನಿಂದಲೊ, ಜೀವನ ಸಂಗಾತಿಯಿಂದಲೊ ಅಥವಾ ಆ ರೀತಿಯ ಸಂಬಂಧವು ಕೊನೆಯಾಗಿ ಬೇರ್ಪಟ್ಟ ಮೇಲೂ ಅವರಿಂದ ಹಿಂಸೆಗೊಳಗಾಗಿ ಸಾಯುವುದು ಬಹಳ ದುಃಖಕರ ವಿಷಯ. ಒಂದು ಮುಂದುವರೆದ ಸಮಾಜವೆಂದು ಕರೆಸಿಕೊಳ್ಳುವ ಪಾಶ್ಚಾತ್ಯ ದೇಶವಾದ, ಕೇವಲ ೨೬ ಮಿಲಿಯನ್ ಜನರಿರುವ ಈ ದೇಶದಲ್ಲಿ ಕೌಟುಂಬಿಕ ಹಿಂಸೆ ಹಿನ್ನೆಲೆಯಲ್ಲಿ ಹೆಂಗಸೊಬ್ಬಳನ್ನು ಸಾಯಿಸುವುದು ಅವಮಾನವನ್ನುಂಟು ಮಾಡುವ ವಿಷಯ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಹೊಳೆಸಾಲಿನ ಶಾಲೆಗೆ ಇನ್ನೀಸಬೆಟ್ಟರ್ ಬಂದರು: ಸುಧಾ ಆಡುಕಳ ಅಂಕಣ

ಎಲ್ಲರೂ ತಮ್ಮ ಕೆಲಸವನ್ನು ಬಿಟ್ಟು ದಾರಿಯೆಡೆಗೆ ನೋಡಿದರೆ ಆರಡಿ ಎತ್ತರದ ಚಂದದ ವ್ಯಕ್ತಿಯೊಬ್ಬರು ನಗುತ್ತಾ ಇವರೆಡೆಗೆ ಬರುತ್ತಿದ್ದರು. ಚೌಕಳಿ ಶರ್ಟು ಮತ್ತು ಬಿಳಿಯ ಪ್ಯಾಂಟಿನಲ್ಲಿ ಬಂದ ಅವರನ್ನು ಮಕ್ಕಳು ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡುತ್ತಾ ನಿಂತುಬಿಟ್ಟರು. ಸೈಕಲ್ ಬೆಲ್ ಮಾಡುತ್ತಾ, ಸಮತಟ್ಟುಗೊಳಿಸಿದ ಮೈದಾನದ ತುಂಬಾ ಸೈಕಲ್ ಹೊಡೆಯುತ್ತ ಮಕ್ಕಳೆಡೆಗೆ ಕೈ ಬೀಸಿದರು. ಅವರ ಮುಗುಳ್ನಗೆಗೆ ಮನಸೋತ ಮಕ್ಕಳು ಹೋ ಎಂದು ಕೂಗುತ್ತಾ ಅವರ ಸೈಕಲ್ಲಿನ ಹಿಂದೆಯೇ ಹುಚ್ಚೆದ್ದು ಓಡತೊಡಗಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಒಂಭತ್ತನೆಯ ಕಂತು ನಿಮ್ಮ ಓದಿಗೆ

Read More

ವಿದೇಶಿ ನೆಲದಲ್ಲಿ ಸ್ವದೇಶಿಗರ ಬದುಕಿನ ಪಾಡು: ಎಂ.ವಿ. ಶಶಿಭೂಷಣರಾಜು ಅಂಕಣ

ಕೆಲವರು, ಭಾರತಕ್ಕೆ ಬಂದಾಗ ತಾವು ಯಾವುದೇ ಕೆಲಸವೇ ಮಾಡದವರ ಹಾಗೇ ಕಾಣಿಸಿಕೊಂಡು ಮನೆಗಳಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ. ಇನ್ನು ಹೊರಗಡೆ ಬಂದಾಗ ತಾವು ಅಮೇರಿಕಾದಿಂದ ಬಂದವರು ಎಂದು ಹೇಗೆ ಎದುರಿನವರಿಗೆ ತಿಳಿಸುವುದು ಎಂದು ಹೆಣಗಾಡುತ್ತಾರೆ. ಇನ್ನು ಬಸ್ಸು ಅಥವಾ ರೈಲುಗಳಲ್ಲಿ ಪ್ರಯಾಣಮಾಡುವಾಗ ಸಹಪ್ರಯಾಣಿಕರ ಜೊತೆ ಸಂಭಾಷಣೆ ಶುರುವಾದರೆ, ತಮ್ಮ ಅಮೇರಿಕಾ ಜ್ಞಾನ ಹೊರಹಾಕುತ್ತಾರೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

Read More

ಒಂದಿಷ್ಟು ಜವಾಬ್ದಾರಿಯನೂ ಕಲಿಸೋಣ: ಎಸ್. ನಾಗಶ್ರೀ ಅಜಯ್ ಅಂಕಣ

ಬೆಳೆಯುವ ಕಾಲದಲ್ಲಿ ಮಕ್ಕಳಿಗೆ ಕಷ್ಟ ಗೊತ್ತಾಗಬಾರದು. ನಾವು ಪಟ್ಟ ಕಷ್ಟ ಅವರಿಗೆ ಸೋಕಬಾರದು ಎಂದು ಶ್ರಮಿಸಿದ ತಂದೆತಾಯಿಯರಿಗೆ ಈ ಬಗೆಯ ಸವಾಲುಗಳು ಹೆಚ್ಚು. ಚೆನ್ನಾಗಿ ಓದಿಸಬೇಕು. ಒಳ್ಳೆಯ ಊಟ, ಬಟ್ಟೆ, ಗಾಡಿ ಕೊಡಿಸಬೇಕು. ಅನುರೂಪ ಜೋಡಿಯನ್ನು ಹುಡುಕಬೇಕು. ಅವರ ಬಾಳು ಬಂಗಾರವಾಗಬೇಕು. ಎಂಬ ವಿಷಯಗಳೇ ಪ್ರಾಧಾನ್ಯತೆ ಪಡೆದು, ಮಕ್ಕಳಿಗೆ ತಮ್ಮ ಹೆತ್ತವರ ಹಿನ್ನೆಲೆ, ಕಷ್ಟ, ಅವಮಾನ, ಅಸಹಾಯಕತೆಗಳ ಪರಿಚಯವೇ ಇರುವುದಿಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ

Read More

ಪ್ರೀತಿಯ ಅರ್ಥವಾದರೂ ಏನು ಹೇಳು?: ಆಶಾ ಜಗದೀಶ್ ಅಂಕಣ

ಏನೆಲ್ಲಾ ನಮ್ಮ ಆಕಾಂಕ್ಷೆಗಳನ್ನು ನಮ್ಮ ಮಕ್ಕಳ ತಲೆ ಮೇಲೆ ಹೇರಿ ಬೆಳೆಸುತ್ತಾ ಹೋಗುತ್ತೇವೆ. ಆದರೆ ಮುಖ್ಯವಾಗಿ ಏನನ್ನು ಕಲಿಸಬೇಕಿತ್ತೋ ಅದನ್ನೇ ಕಲಿಸದೆ ಹೋಗುತ್ತೇವೆ. ನಾವು ಕಲಿಸಲೇ ಬೇಕಾದದ್ದು ಎನ್ನುವ ಎಷ್ಟೋ ಇದೆ. ನಮ್ಮನ್ನು ಜೋಪಾನ ಮಾಡುವ ಅದಷ್ಟೋ ಗುಣಗಳಿವೆ. ಒಬ್ಬರನ್ನು ನಿಷ್ಕಲ್ಮಷವಾಗಿ ಇಷ್ಟಪಡುವುದನ್ನು, ಪ್ರೀತಿಸುವುದನ್ನು ಕಲಿಸುವುದೇ ಇಲ್ಲ ಯಾಕೆ… ಹುಟ್ಟಂದಿನಿಂದ ಬಂದ ಮುಗ್ಧತೆಯನ್ನ ಕೊಂದು ಅಲ್ಲಿ ಸ್ವಾರ್ಥ ಮತ್ತು ಲೋಭವನ್ನ ಮಾತ್ರ ತುಂಬಿ ನೀರೆರೆದು ಬೆಳೆಸುತ್ತಾ ಹೋಗುತ್ತೇವೆ ಯಾಕೆ…
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ