Advertisement

Category: ಅಂಕಣ

ಆ ಹುಡುಗಿ ಹಾಗೆಯೇ ಮರಳಿ ಹೋಗಿದ್ದಳು

ಭಿಕ್ಷುಕರೆಂದರೆ ಯಾಕೆ ನಮ್ಮ ಮನಸ್ಸಿಗೆ ತಂಗಳನ್ನವೇ ಬರಬೇಕು ಅಂತ ಪ್ರಶ್ನಿಸಿಕೊಂಡಿದ್ದೇನೆ. ಯಾವುದೋ ಕಾರಣ, ಅಸಹಾಯಕತೆ, ಮತ್ಯಾವುದೋ ಅನಿವಾರ್ಯತೆಯ ಪರಿಸ್ಥಿತಿಗಳು ಅವರನ್ನು ಭಿಕ್ಷೆಗೆ ಹಚ್ಚಿರಬಹುದು. ಆದರೆ ಅವರಿಗೂ ನಮ್ಮಂತೆಯೇ ಎಲ್ಲ ಸವಿಯನ್ನೂ ಸವಿಯಬೇಕೆನ್ನುವ ಆಸೆಗಳೂ ಇರುತ್ತವೆ. ಆ ಆಸೆಗಳನ್ನು, ಅಭಿಲಾಷೆಗಳನ್ನು ನಾವು ಅರ್ಥ ಮಾಡಿಕೊಂಡರೆ ಆ ಮುಗ್ಧ ಮುಖಗಳಲ್ಲಿ ಒಂದಿಷ್ಟಾದರೂ ಮಂದಹಾಸ ಮೂಡಿಸಬಹುದಲ್ಲವೇ? ದೈಹಿಕ ಸಾಮರ್ಥ್ಯವಿದ್ದೂ, ಶಕ್ತರಾಗಿದ್ದೂ ಭಿಕ್ಷೆ ಬೇಡುತ್ತಿದ್ದರೆ ಅದನ್ನು ವಿರೋಧಿಸೋಣ.
ಇಸ್ಮಾಯಿಲ್‌ ತಳಕಲ್‌ ಬರಹ

Read More

ಬೆಂಕಿಯ ಮಳೆ

ಉಮಾ ಅವರಿದ್ದ ಓಣಿಯ ಬಳಿ ಹೋಗಿ ಒಬ್ಬ ಹೆಂಗಸನ್ನು ‘ಇಲ್ಲಿ ಉಮಾ ಅನ್ನೋರ ಮನೆ ಎಲ್ಲಿ ಬರತ್ತೆ?’ ಅಂತ ಕೇಳಿದೆ. ಅದಕ್ಕವರು ‘ಓಹ್, ಶಾಹೀನಾ ಬೇಗಂ ಮನೆನಾ? ಬನ್ನಿ ಬನ್ನಿ. ನಮ್ಮ ಮನೆ ಪಕ್ಕದ ಮನೆನೇ ಶಾಹೀನಕ್ಕನದು. ನನ್ನ ಹೆಸರು ನಾಗವೇಣಿ. ಅಕಿ ನನ್ನ ಗೆಣತಿ ಅದಾಳೆ.’ ಎನ್ನುತ್ತಾ ನನ್ನನ್ನ ಹಿಂಬಾಲಿಸಿ ಎಂಬುವಂತೆ ಮುಂದೆ ಮುಂದೆ ನಡೆದಳು. ಸ್ವಲ್ಪ ಹೊತ್ತು ನಡೆದ ಮೇಲೆ ಒಂದು ಪುಟ್ಟ ಜನತಾ ಮನೆಯಂತಿದ್ದ ಮನೆಯ ಮುಂದೆ ನಿಂತು ‘ಶಾಹೀನಕ್ಕ, ನಿನ್ನ ನೋಡೋಕೆ ಯಾರೋ ಬಂದಾರೆ…’ ಎಂದು ಕೂಗಿದಳು. ದಾದಾಪೀರ್‌ ಜೈಮನ್‌ ಬರೆಯುವ ಅಂಕಣ

Read More

ಭಾಗವತಿಕೆಯ ಪರಂಪರೆಯಲ್ಲಿ ವಿದ್ವಾನ್ ಗಣಪತಿ ಭಟ್ ಅವರ ವೈಶಿಷ್ಟ್ಯತೆ

ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದವರಿಗೆ ಜನಪ್ರಿಯ ಮಾದರಿಗಳಿಂದ ತಪ್ಪಿಸಿಕೊಳ್ಳುವುದು ಕಷ್ಟದ ಕೆಲಸ. ಅವರಿಗೆ ಹಲವು ಒತ್ತಡಗಳಿರುತ್ತವೆ. ಒತ್ತಡಗಳ ವಿರುದ್ಧ ನಿಲ್ಲುವುದಕ್ಕೆ ಒಂದು ರೀತಿಯ ನಿಷ್ಠುರತೆ, ಛಲ, ವಿಶ್ವಾಸವೂ ಬೇಕು. ಅಂತಹುದಕ್ಕೆ ಮಾದರಿ ವಿದ್ವಾನರು. ನಮಗೆ ಈಗ ಸಿಗುವ ಅವರ ತಾರುಣ್ಯ ಕಾಲದ ವೃತ್ತಿ ಮೇಳದ ಹೊಸಪ್ರಸಂಗದ ಪದ್ಯಗಳು, ಹಳೆಯ ದೇವಿ ಮಹಾತ್ಮೆಯ ಧ್ವನಿ ಮುದ್ರಿಕೆಯನ್ನು ಕೇಳಿದರೆ ಇದು ಸ್ಪಷ್ಟವಾಗುತ್ತದೆ.
ಯಕ್ಷಾರ್ಥ ಚಿಂತಾಮಣಿ ಅಂಕಣದಲ್ಲಿ ಕೃತಿ ಪುರಪ್ಪೇಮನೆ ಲೇಖನ ಇಲ್ಲಿದೆ.

Read More

ಟಿ20 ವಿಶ್ವ ಕಪ್ 2022 ಮತ್ತು ಅದರ ಚರಿತ್ರೆ

ಆಟದಲ್ಲಿ ಸೋಲು, ಗೆಲುವು ಇದ್ದೇ ಇರುತ್ತೆ. ಭಾರತದಲ್ಲಿ ಹಾಗೂ ಏಷ್ಯಾದಲ್ಲಿ ಪ್ರೇಕ್ಷಕರು ಇದನ್ನು ಎಷ್ಟರ ಮಟ್ಟಿಗೆ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆಂದರೆ, ನಮ್ಮ ಆಟಗಾರರು ಗೆದ್ದರೆ, ಅವರನ್ನು ಅಟ್ಟಕ್ಕೆ ಏರಿಸುತ್ತೇವೆ; ಹಾಗೆಯೇ ಸೋತರೆ ಅವರನ್ನು ಪಾತಾಳಕ್ಕೆ ಇಳಿಸಿ ಬಿಡುತ್ತೇವೆ! ಇದೊಂದು ದೌರ್ಭಾಗ್ಯವೇ ಸರಿ. ನಾವು ನಮ್ಮ ಮನಸ್ಸನ್ನು ಸಮತೋಲನದಲ್ಲಿ ಇಡಬೇಕು. ಯಾರಿಗೂ ಸೋಲುವುದಕ್ಕೆ ಇಷ್ಟವಿರುವುದಿಲ್ಲ. ಪಂದ್ಯದಲ್ಲಿ ಯಾರಾದರೂ ಒಬ್ಬರು ಸೋಲಬೇಕು, ಒಬ್ಬರು ಗೆಲ್ಲಬೇಕು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಟಿ20 ವಿಶ್ವ ಕಪ್ ಕುರಿತ ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ

Read More

ಹೃದಯ ವೈಶಾಲ್ಯತೆಗೆ ಬೇಲಿ ಹಾಕಿಕೊಳ್ಳುವ ಅನಿವಾರ್ಯ!

ನಾವು ಮಾನವೀಯತೆಯಿಂದ ಯೋಚಿಸುವುದನ್ನು ಹಳ್ಳಿಯಲ್ಲಿ ಬೇರೆಯ ತರಹವೆ ನೋಡುತ್ತಾರೆ! ನಾವು ಕೇಳದೆ ಅವರಿಗೆ ಹೀಗೆ ಬೋನಸ್‌ಗಳನ್ನು ಕೊಟ್ಟರೆ ನಾವು ಅವರಿಗೆ ತುಂಬಾ ಹಣವಂತರ ಹಾಗೆ ಕಾಣುತ್ತೇವೆ. ಅದು ನಮಗೆ ಆಮೇಲಾಮೇಲೆ ನಿಧಾನವಾಗಿ ಅರ್ಥವಾಗತೊಡಗಿತು! ಅಲ್ಲಿ ಹೇಗಿರಬೇಕು ಅಂದರೆ, ತುಂಬಾ ಚೌಕಾಶಿ ಮಾಡಬೇಕು, ಒಂದು ರೂಪಾಯಿನೂ ಕಾಡಿಸಿ ಕಾಡಿಸಿ ಕೊಡಬೇಕು, ಸಾಲವನ್ನಂತೂ ಮರಳಿ ಕೂಡಲೇ ಕೂಡದು ಇತ್ಯಾದಿಗಳು… ನನಗೆ ಇದನ್ನೆಲ್ಲ ಮಾಡಲು ಮನಸ್ಸು ಒಪ್ಪುತ್ತಿರಲಿಲ್ಲ.
ಗುರುಪ್ರಸಾದ್‌ ಕುರ್ತಕೋಟಿ ಅಂಕಣ

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ