Advertisement

Category: ದಿನದ ಅಗ್ರ ಬರಹ

ನೇಪಥ್ಯದಲ್ಲಿ ಹಾದು ಹೋಗುವ ಆಲೋಚನೆಗಳು

ಆಕೆ ಈ ಹಿಂದೆ ನಮ್ಮ ತಂಡದಲ್ಲಿ ನಟಿಸಿದ್ದ ನಟಿ. ಆಕೆಗೆ ಮೊದಲು ತುಂಬ ನೀಳ ಮತ್ತು ದೃಢವಾದ ಕಾಯ ಇತ್ತು. ನಡುಮಧ್ಯೆ ಕೆಲವು ಷೋಗಳಿಗೆ ಆಕೆ ಗೈರು. ಯಾಕೆ ಎಂದು ವಿಚಾರಿಸಿದಾಗ ಆಕೆ ತಣ್ಣನೆಯ ದನಿಯಲ್ಲಿ ‘ ಸರ್ ನನಗೆ ಕ್ಯಾನ್ಸರ್ ಆಗಿದೆ..ಟ್ರೀಟ್ಮೆಂಟ್ ತಗೋತಿದ್ದೀನಿ.. ಸೊ ಬರಲಿಕ್ಕೆ ಆಗ್ತಿಲ್ಲ..’. ಅಂದರು. ಆ ಹೊತ್ತು ಅದು ನನ್ನಲ್ಲಿ ಗಾಬರಿ ಹುಟ್ಟಿಸಿದ ಉತ್ತರವಾಗಿತ್ತು. ನನ್ನ ದನಿಯಲ್ಲಿದ್ದ ಗಾಬರಿ ಗುರುತಿಸಿ ಆಕೆ ಮತ್ತೆ ‘ ಸರ್ ಅಷ್ಟು ಸೀರಿಯಸ್ ಏನಿಲ್ಲ’ ಎಂದರು. ರಂಗವಠಾರ ಅಂಕಣದಲ್ಲಿ ಎನ್. ಸಿ. ಮಹೇಶ್‍ ಬರಹ  ಇಂದಿನ  ಓದಿಗಾಗಿ.

Read More

ಭಾರತ್ ಬ್ಲೇಡಿನ ಲಕ್ಷೆ ಮತ್ತು ಮನೆಕನ್ನದ ಕತೆಗಳು

ಮಹಿಳೆಯರು ಗಂಟಿಚೋರ್ ಸಮುದಾಯದ ಎಲ್ಲಾ ಸಂಗತಿಗಳಲ್ಲಿಯೂ ಪಾಲುದಾರರಾಗಿದ್ದರು. ತುಡುಗುತನದಲ್ಲಿಯೂ ಮಹಿಳೆಯರ ಪಾಲ್ಗೊಳ್ಳುವಿಕೆ ಕುತೂಹಲಕಾರಿಯಾಗಿದೆ. ಗುಂಪಾಗಿ ತುಡುಗು ಮಾಡುವುದಕ್ಕಿಂತ ಒಂಟಿಯಾಗಿ ತುಡುಗು ಮಾಡುವ ಪ್ರಮಾಣ ಹೆಚ್ಚಾಗಿತ್ತು. ಹಾಗಾಗಿ ಗಂಟಿಚೋರರ ತುಡುಗುತನದ ಪ್ರವೃತ್ತಿಯಲ್ಲಿ ಮಹಿಳೆಯರ ಪಾಲುದಾರಿಕೆ ವಿಶೇಷವಾಗಿದೆ. ಇವರಲ್ಲಿಯೂ ಪ್ರಾದೇಶಿಕವಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದ ಮಹಿಳೆಯರೂ ಇದ್ದಾರೆ. ‘ಗಂಟಿಚೋರರ ಕಥನಗಳು’ ಸರಣಿಯಲ್ಲಿ ಅರುಣ್ ಜೋಳದ ಕೂಡ್ಲಿಗಿ ಬರೆದ ಬರಹ ಇಲ್ಲಿದೆ. 

Read More

ಓದುವ ಖುಷಿಗೆ ಪ್ರೇರಣೆ ನೀಡುವ ಹೊಸ ಪರಿಮಳ

ಓದುವುದನ್ನು ಇಷ್ಟಪಡುವವರಿಗೆ ಲೇಖ ಮಲ್ಲಿಕಾ ಪುಸ್ತಕ ಇಷ್ಟವಾಗಬಹುದು. ತಮ್ಮ ದೀರ್ಘವಾದ ಓದಿನ ಅನುಭವ ಸಾರವನ್ನು ಭಟ್ಟಿಇಳಿಸಿ, ಲೇಖಕಿ ಸುಮಾ ವೀಣಾ ಅವರು ಈ ಕೃತಿಯನ್ನು ರಚಿಸಿದ್ದಾರೆ. ಸಾಹಿತ್ಯ ಲೋಕದ ಕೈಪಿಡಿಯಂತಿರುವ ಪುಸ್ತಕದಲ್ಲಿ, ಉಲ್ಲೇಖವಾಗಿರುವ ಪುಸ್ತಕಗಳೂ ಮಹತ್ವದ್ದಾಗಿವೆ. ತಮ್ಮ ಅಧ್ಯಯನಶೀಲತೆ, ಸಂಶೋಧನೆ, ಸಾಹಿತ್ಯಾಸಕ್ತಿ, ತೌಲನಿಕ ಮೀಮಾಂಸೆಯನ್ನೊಳಗೊಂಡಂತೆ ಅವರು ರೂಪಿಸಿದ ಈ ಪುಸ್ತಕವು ಸಂಗ್ರಾಹ್ಯವಾದುದು. ಲೇಖ ಮಲ್ಲಿಕಾ ಸಾಹಿತ್ಯ ಕೃತಿಯ ಕುರಿತ ವಿಶ್ಲೇಷಣಾ ಬರಹವೊಂದನ್ನು ಬರೆದಿದ್ದಾರೆ ಡಿ.ಯಶೋದಾ. 

Read More

ಭುಪೇನ್ ಹಝಾರಿಕಾ ಮಗನ ಕನಸಿನ ನಕಾಶೆಯಿದು

2011ರ ನವೆಂಬರ್ ತಿಂಗಳ 5 ನೆಯ ತಾರೀಕಿನಂದು ತಮ್ಮ 85ನೆಯ ವಯಸ್ಸಿನಲ್ಲಿ ಮುಂಬೈನಲ್ಲಿ ತೀರಿಕೊಂಡ ಭುಪೇನ್ ಅವರ ಕಳೇಬರವನ್ನು ಗೌಹಾಟಿಯ ವಿಶ್ವವಿದ್ಯಾಲಯದ ಬಳಿಯ ಸ್ಥಳದಲ್ಲಿ ಸಮಾಧಿ ಮಾಡಲಾಗಿದೆ. 200 ಎಕರೆಗಳ ಜಾಗದಲ್ಲಿ ಸ್ಮಾರಕವೊಂದು ನಿರ್ಮಾಣವಾಗುತ್ತಿದೆ. ಅಲ್ಲಿ ಸಂಗ್ರಹಾಲಯದ ಜೊತೆಗೆ ಅಧ್ಯಯನ ಪೀಠ ಸ್ಥಾಪಿಸುವುದರ ಮೂಲಕ ಅಸ್ಸಾಮಿ ಶೈಲಿಯ ಸಂಗೀತ ಕಲಿಕೆಗೆ, ಪ್ರಸ್ತುತಿಗೆ ಒತ್ತು ಕೊಡುವ ಉದ್ದೇಶವಿದೆ. ಕಂಡಷ್ಟು ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ  ಅವರು ಭುಪೇನ್ ಹಝಾರಿಕ ಅವರ ಕುರಿತು  ಬರೆದ ಬರಹ. 

Read More

ಮರದ ನೆರಳಿನಲ್ಲಿ…

ಮನೆಯ ಎದುರಿಗೆ ರಸ್ತೆಯ ಪಕ್ಕದಲ್ಲಿ ಜೀರಕನ ಮರ ಹಣ್ಣು ಬಿಟ್ಟಾಗ ನಮಗೆ ಆ ಮರದ ಆಕರ್ಷಣೆ.. ಹೊಂಬಣ್ಣದ ಜೀರ್ಕ ಹಣ್ಣುಗಳನ್ನು ದೋಟಿಗೆ ಎಟುಕಿಸಿ ಉದುರಿಸಿ ಹಿರಿಯರ ಕಣ್ಣು ತಪ್ಪಿಸಿ ಅಡಿಕೆ ಚಪ್ಪರದ ಮೇಲೆ ತೆಗೆದುಕೊಂಡು ಹೋಗಿ ಇಟ್ಟು.. ಅಡಿಗೆ ಮನೆಯಿಂದ ಉಪ್ಪು ಬಾಳೆಲೆ, ಬೆಲ್ಲ ಇನ್ನೊಬ್ಬರು ತರುವುದು. ಜೀರಿಗೆ ಮೆಣಸು ಮತ್ತೊಬ್ಬರು.. ಹಣ್ಣಿನ ತೊಳೆ ಬಿಡಿಸಿ ಬಾಳೆ ಎಲೆ ಮೇಲೆ ಉಪ್ಪು, ಮೆಣಸು ಬೆಲ್ಲ ಹಾಕಿ ಕಲೆಸಿ ಮತ್ತೆ ಚಿಕ್ಕ ಬಾಳೆ ಎಲೆ ತುಂಡಿನ ಮೇಲೆ ಎಲ್ಲರಿಗೂ ಹಂಚಿ ಆ ಕಟುವಾದ ಹುಳಿ, ಸಿಹಿ, ಖಾರದ ರುಚಿಯನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದೆವು..
ಡಾ. ಎಲ್.ಸಿ. ಸುಮಿತ್ರಾ ಬರೆದ ಪ್ರಬಂಧ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ