Advertisement

Category: ದಿನದ ಪುಸ್ತಕ

ಗಿಣಿಬಿಸ್ಕತ್ತು ಕಾದಂಬರಿಯ ಒಂದೆಸಳು

ನಾವು ಮಕ್ಕಳು ಒಂದು ಕಡೆ ಆಡುತ್ತಿದ್ದೆವು. ಮೋಡ ಕಪ್ಪಾಯಿತು. ಮೀನು ಸಾರಿನ ಸಂಭ್ರಮದ ಮಧ್ಯ ಮಳೆ ಬರುವುದು ಚಿಂತೆಗೀಡು ಮಾಡಿತ್ತು. ಸಂದಿಗೊಂದಿಗಳಲ್ಲಿ, ಮೂಲೆಮುಡುಕುಗಳಲ್ಲಿ ಇದ್ದ ಪುಳ್ಳೆ ಸೌದೆಗಳನ್ನು ಅಜ್ಜಿ ಅದೇನೇನೋ ಗೊಣಗುತ್ತಾ ಎತ್ತಿ ತಂದು ಒಳಗೆ ಹಾಕುತ್ತಿದ್ದಳು. ಅಜ್ಜ ರಾತ್ರಿ ಕತ್ತಲಾದಾಗ ಬೆಳಕು ಮಾಡಲು ಸೀಮೆ ಎಣ್ಣೆ ದೀಪದ ಬತ್ತಿಗಳನ್ನು ಹಿಚುಕಿ ಸರಿಪಡಿಸುತ್ತಿದ್ದ. ಚಿಕ್ಕಪ್ಪ, ಅಪ್ಪ ಎಲ್ಲಿ ಮನೆ ಸೋರುತ್ತದೆಯೋ ಅಲ್ಲಿಗೆ ಕಾತಾಳೆ ಪಟ್ಟೆ, ಅಡಿಕೆ ಪಟ್ಟೆಗಳನ್ನು ತೂರಿಸುತ್ತ ಸೂರನ್ನು ಸರಿಪಡಿಸುತ್ತಿದ್ದರು. ಅಜ್ಜ ಮಾತ್ರ ‘ಈ ಹಾಳಾದ್ದು ಎಲ್ಲೋಯ್ತೋ ಕಾಣೆ… ಹೊತ್ನಂತೆ ಮನೆಗೆ ಬರಬ್ಯಾಡ್ವ’ ಅಂತ ಕೆಂಪಿಯನ್ನು ನೆನಪು ಮಾಡಿಕೊಳ್ಳುತ್ತಿದ್ದನು.
ಆಲೂರು ದೊಡ್ಡನಿಂಗಪ್ಪ ಬರೆದ ‘ಗಿಣಿ ಬಿಸ್ಕತ್ತು’ ಹೊಸ ಕಾದಂಬರಿಯ ಕೆಲ ಪುಟಗಳು ನಿಮ್ಮ ಓದಿಗೆ

Read More

ಅಣ್ಣ ನೆಟ್ಟ ದೇವರ ಮರ

ಅಪ್ಪನ ಕೆಮ್ಮುಗಳಲ್ಲಿ ಎರಡು ವಿಧಗಳಿದ್ದವು. ಒಂದು ಬೀಡಿ ದಮ್ಮಿನ ಕೆಮ್ಮು, ಇನ್ನೊಂದು ಎಚ್ಚರಿಕೆಯ ಕರಗಂಟೆಯ ಒಣಕೆಮ್ಮು. ಎರಡನೆಯ ಕೆಮ್ಮು ಒಂಥರ ನಮ್ಮಪ್ಪನ ಸಿಗ್ನಲ್ಲು ಕೂಡ ಆಗಿತ್ತು. ನಮಗೆಲ್ಲಾ ಆ ಕೆಮ್ಮಿನ ಧ್ವನಿಯ ಹಿಂದಿರುವ ಭಾಷೆ, ಭಾವಗಳು ತಕ್ಷಣಕ್ಕೆ ಗೊತ್ತಾಗಿ ಬಿಡುತ್ತಿದ್ದವು. ಅಪ್ಪ ಸಿಟ್ಟಿನಲ್ಲಿ ಇದ್ದಾರಾ? ಇಲ್ಲ ಒಳ್ಳೇ ಮೂಡ್ನಲ್ಲಿ ಬರ್ತಿದ್ದಾರಾ? ಎನ್ನುವುದು ತಿಳಿಯುತ್ತಿತ್ತು. ಜೊತೆಗೆ `ನಾನು ಬರುತ್ತಿದ್ದೇನೆ ಹೋಶಿಯಾರ್’ ಎಂಬ ಬೋಪರಾಕ್ ಕೂಡ ಆ ಕೆಮ್ಮಿನ ದನಿಯಲ್ಲಿ ಅಡಕವಾಗಿರುತ್ತಿತ್ತು. -ಕಲೀಮ್‌ಉಲ್ಲಾ ಬರೆದ “ಬಾಡೂಟದ ಮಹಿಮೆ” ಪ್ರಬಂಧ ಸಂಕಲನದ ಒಂದು ಪ್ರಬಂಧ ನಿಮ್ಮ ಓದಿಗೆ

Read More

ರಾಗಿಕಾಳು ಕವನ ಸಂಕಲನ ಕುರಿತು ತಾರಿಣಿ ಶುಭದಾಯಿನಿ ಮಾತುಗಳು

ರಮೇಶಬಾಬು  ಕವನಗಳಲ್ಲಿ ಬರುವ ಪಾದದ ಬಳಕೆಯನ್ನು ಗಮನಿಸಬೇಕು. ಪಯಣಕ್ಕೆ ಪಾದಗಳು ಬೇಕು ಎನ್ನುವ ಹಾಗೆ ಅವು connect ಆಗುತ್ತವೆ. ನಾನು ಗಮನಿಸಿದಂತೆ ರಮೇಶಬಾಬು ಒಂದು ವಿಲೋಮ ಕ್ರಮ ಬಳಸಿ ಸಂಗತಿಗಳನ್ನು ನೋಡುತ್ತಾರೆ; ಅದಲು ಬದಲು ಜಾಗಗಳಲ್ಲಿ ದೃಷ್ಟಿಕೋನಗಳು ಬದಲಾಗುತ್ತವೆ ಅಲ್ಲವೆ? ಅದರಂತೆ ಪಾದಗಳು ತಲೆಯ ಇನ್ನೊಂದು ತುದಿಗಳು. ಶಿರವು ಉತ್ತರವಾದರೆ ಪಾದ ದಕ್ಷಿಣದಂತೆ. ಶಿರದಿಂದ ಇಳಿಯುವುದು, ಪಾದದಿಂದ ಹತ್ತಬೇಕಾಗುತ್ತದೆ. ಈ ಅರಿವಿನೊಂದಿಗೆ ರಮೇಶಬಾಬು ಆಟವಾಡುತ್ತಾರೆ. ಪಾದಗಳೆಂದರೆ ದಾರಿ ಅಳೆಯುವ ಮಾಪಕಗಳಲ್ಲ ಅಥವಾ ದೇಹ ಹೊತ್ತ ಭಾರಧಾರಕಗಳಲ್ಲ. ಪಾದದರಿವನ್ನು ಕವಿ ಇಲ್ಲಿ ವಿವರಿಸುವ ರೀತಿಯನ್ನು ಗಮನಿಸಬೇಕು.
ಚೀಮನಹಳ್ಳಿ ರಮೇಶಬಾಬು ಬರೆದ ‘ರಾಗಿಕಾಳು’ ಹೊಸ ಕವನ ಸಂಕಲನಕ್ಕೆ ಆರ್.ತಾರಿಣಿ ಶುಭದಾಯಿನಿ ಬರೆದ ಮಾತುಗಳು

Read More

ಚಿ.ಸು. ಚೆಲ್ಲಪ್ಪ ಬರೆದ ‘ವಾಡಿವಾಸಲ್‌’ಗೆ ಪೆರುಮಾಳ್ ಮುರುಗನ್ ಬರೆದ ಮುನ್ನುಡಿ

ಜಲ್ಲಿಕಟ್ಟು ಬೇರೆ ಕ್ರೀಡೆಗಳಿಗಿಂತ ಹೇಗೆ ವಿಭಿನ್ನವಾದದ್ದು ಎಂದು ಕೇಳಿದರೆ ಅದಕ್ಕೊಂದು ಉತ್ತರವಿದೆ. ಬೇರೆ ಆಟಗಳಲ್ಲಿ ಆಡುವ ಇಬ್ಬರೂ ಆಟಗಾರರಿಗೂ ಇದು ಆಟವೆಂದು ತಿಳಿದಿರುತ್ತದೆ. ಆದರೆ ಜಲ್ಲಿಕಟ್ಟುವಿನಲ್ಲಿ ಹಾಗಲ್ಲ. ಮನುಷ್ಯನಿಗೆ ಮಾತ್ರ ಇದು ಆಟ. ಮೃಗಕ್ಕೆ ಅದು ಗೊತ್ತಿಲ್ಲ. ಆಟವೆಂದು ತಿಳಿಯದ ಮೃಗವನ್ನು ಅಡಗಿಸಲು ಮನುಷ್ಯನಿಗೆ ಸಾಕಷ್ಟು ಯುಕ್ತಿಗಳಿವೆ. ಮೃಗವು ಅದನ್ನೆಲ್ಲಾ ಮೀರಿ ಆತನಿಂದ ತಪ್ಪಿಸಿಕೊಳ್ಳಬೇಕು. ಅದರ ಕೆಲವು ಅಂಶಗಳು ವಾಡಿವಾಸಲ್ ನಲ್ಲಿ ವಿವರವಾಗಿಯೇ ಬರೆಯಲಾಗಿದೆ. ಮನುಷ್ಯನೊಳಗೂ ಬಚ್ಚಿಟ್ಟುಕೊಂಡಿರುವ ಮೃಗತ್ವವನ್ನು ತೋರುವ ಕೃತಿಯಾಗಿದೆ ಈ ವಾಡಿವಾಸಲ್.
ಚಿ.ಸು. ಚೆಲ್ಲಪ್ಪ ಬರೆದ ‘ವಾಡಿವಾಸಲ್‌’ಗೆ ಪೆರುಮಾಳ್ ಮುರುಗನ್ ಬರೆದ ಮುನ್ನುಡಿ

Read More

ಎಸ್.‌ ದಿವಾಕರ್‌ ಕವನ ಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

ಇಪ್ಪತ್ತನೆಯ ಶತಮಾನದಿಂದ ಹಿಂಸೆಯೇ ಸ್ಥಾಯಿಯಾಗಿ ಬದುಕೇ ಅಸಂಗತ, ಅಸಾಧ್ಯ ಸತ್ಯವಾಗಿ ಬಿಟ್ಟಿದೆ. ಇಂತಹದರಲ್ಲಿ ಕಾವ್ಯ ಏನು ಮಾಡಬೇಕು? ಉತ್ತರ ಕಾವ್ಯಕ್ಕೆ ಗೊತ್ತಿಲ್ಲ. ಕವಿ ಪ್ರಯತ್ನ, ಪ್ರಯೋಗ ಮಾಡುತ್ತಲೇ ಇರಬೇಕು. ನೋವಿನ, ಹಿಂಸೆಯ ಕ್ಷೋಭೆ, ಅಸ್ಥಿರತೆ ಅನಿಶ್ಚಿತತೆಗೆ ವಿರುದ್ಧವಾದ ಭಾಷೆಯ ಪಾರದರ್ಶಕತೆ, ಧ್ವನಿಗಳ ಲಯಗಾರಿಕೆ ಮತ್ತು ಬಿಂಬಗಳ ಖಚಿತತೆಯ ಮೂಲಕ ಹೇಳುವುದನ್ನು ಹೇಳಬೇಕು. ಅಸಹಜವಾದ ಅನುಭವವನ್ನು ಅಪಾರ ಸಹಜತೆಯ ಕಾವ್ಯಭಾಷೆಯನ್ನು ಶೋಧಿಸಿಕೊಂಡು ಬರೆಯಬೇಕು. ಇದನ್ನು ದಿವಾಕರರ ಕಾವ್ಯವು ಸಾಧಿಸಿದೆ. ಅವರ ಈ ಸಂಕಲನದ ಒಂದು ಕವಿತೆಯು ಪ್ರಾಸದ ಬಗ್ಗೆ ಇದೆ.
ಎಸ್.‌ ದಿವಾಕರ್‌ ಬರೆದ ವಿಧಾನಸಭೆಯಲ್ಲೊಂದು ಹಕ್ಕಿ ಕವನ ಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ