ಸೋವಿಯತ್ ದೇಶದಲ್ಲಿ ಮಿಂಚಿದ ನಮ್ಮ ಧ್ವಜ
ತಾಷ್ಕೆಂಟ್ ವಿಮಾನ ನಿಲ್ದಾಣದಿಂದ ಹೊರಗೆ ಬಂದ ಕೂಡಲೇ ನನಗೆ ಆಶ್ಚರ್ಯ ಕಾದಿತ್ತು. ಎಲ್ಲೆಂದರಲ್ಲಿ ಭಾರತದ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು. ಬೀದಿಗಳು ನಮ್ಮ ಧ್ವಜದಿಂದ ಕೂಡಿದ ಪರಪರಿಗಳಿಂದ ಅಲಂಕೃತವಾಗಿದ್ದವು. ಎಲ್ಲೆಂದರಲ್ಲಿ ನಮ್ಮ ರವಿಶಂಕರ್ ಸಿತಾರ್ ಮತ್ತು ಬಿಸ್ಮಿಲ್ಲಾ ಖಾನ್ ಶಹನಾಯಿ ನಾದಮಾಧುರ್ಯಕ್ಕೆ ಕಿವಿಗಳು ತೆರೆದುಕೊಳ್ಳತೊಡಗಿದವು. ನಮ್ಮ ಗೈಡ್ ನಮ್ಮನ್ನು ಪಂಚತಾರಾ “ಹೋಟೆಲ್ ತಾಷ್ಕೆಂಟ್”ಗೆ ಒಯ್ದರು. ಅಲ್ಲಿಯೆ ರಿಷಪ್ಷನಿಸ್ಟ್ “ಇಂಜಿಷ್ಕಿ ದ್ರುಜಿಯೆ” (ಇಂಡಿಯನ್ ಫ್ರೆಂಡ್ಸ್) ಎಂದು ಖುಷಿಯಿಂದ ಬರಮಾಡಿಕೊಂಡರು. ಭಾರತದ ಬಗ್ಗೆ ಸೋವಿಯತ್ ದೇಶದವರಿಗೆ ಇದ್ದ ಅಭಿಮಾನ, ಪ್ರೀತಿ, ಗೌರವ ಕಂಡು ಆಶ್ಚರ್ಯಚಕಿತನಾದೆ.
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 43ನೇ ಕಂತು ಇಲ್ಲಿದೆ.
