ಹಂಪ್ ಮೇಲೆ ಚೆಲ್ಲಿದ ರಕ್ತದ ಕಲೆಗಳ ಭಯ
ನನಗೆ ಆ ದಿನಗಳಲ್ಲಿ ಮಧ್ಯರಾತ್ರಿ ಹನ್ನೆರೆಡಕ್ಕೆ ಸರಿಯಾಗಿ ಎಚ್ಚರಾಗುತ್ತಿತ್ತು. ತಲೆ ತುಂಬ ರಗ್ಗು ಹೊದ್ದು ಕಣ್ಣು ಮುಚ್ಚಿಕೊಂಡರೂ ನಿದ್ರೆ ಬರುತ್ತಿರಲಿಲ್ಲ. ಸದಾ ಎಚ್ಚರವಾಗೆ ಇರುತ್ತಿದ್ದೆ. ಎದೆ ಕಂಪಿಸುತ್ತಿತ್ತು. ಅಲುಗಾಡದೆ ಮುದುರಿಕೊಂಡಿರುತ್ತಿದ್ದೆ. ವಿಶಲ್ ಊದುತ್ತಾ ಲಾಟಿ ಬಡಿಯುತ್ತ ಬರುವ ಗೂರ್ಖನ ಬೂಟುಗಾಲಿನ ಸದ್ದು ಕೇಳಿಸುತ್ತಿತ್ತು. ಸರಿಯಾಗಿ ಹನ್ನೆರೆಡು ಗಂಟೆಗೆ ರೈಲಿನ ಬೆಲ್ಲು ಢಣಗುಡುತ್ತಿತ್ತು. ರೈಲು ಬರುವ ಸದ್ದು ಕೇಳಿದ ತಕ್ಷಣ ನನ್ನ ಕಲ್ಪನೆಗಳು ಗರಿಗೆದರುತ್ತಿದ್ದವು.”
Read More
