ಸಂಧ್ಯಾರಾಣಿ ಸಿನಿ ಪುಸ್ತಕಕ್ಕೆ ಅಬ್ದುಲ್ ರಶೀದ್ ಬರೆದ ಮುನ್ನುಡಿ
ಕಣ್ಣು ಮುಚ್ಚಿಕೊಂಡು ಓದುವ ಹಾಗಿದ್ದರೆ ಸಿನೆಮಾ ನೋಡಬೇಕಾಗಿಲ್ಲ ಅನ್ನುವಷ್ಟು ಕಣ್ಣಿಗೆ ಕಟ್ಟುವ ಬರವಣಿಗೆಗಳು ಅವು. ಬರೀ ಕಣ್ಣಿಗೆ ಮಾತ್ರವಲ್ಲ. ಸಿನೆಮಾದ ಸದ್ದುಗಳನ್ನು ಕಿವಿಗೆ, ಭಾವಗಳನ್ನು ಮನಸ್ಸಿಗೆ, ಕ್ಯಾಮರಾದ ಕೋನಗಳನ್ನು ಮಿದುಳಿಗೆ ಮತ್ತು ಸಿನೆಮಾ ಕೊನೆಗೆ ಉಂಟುಮಾಡುವ ತರ್ಕಗಳನ್ನು ವೈಚಾರಿಕತೆಗೆ ಅಕ್ಷರಗಳಲ್ಲೇ ದಾಟಿಸಿಬಿಡುತ್ತಿದ್ದರು. ಎಲ್ಲೂ ತರ್ಕಗಳಿಲ್ಲ, ತಪ್ಪುವ ಎಳೆಗಳಿಲ್ಲ. ಸಿನೆಮಾ ಹೇಳುವುದನ್ನು ಪರದೆ ಎಳೆದ ಹಾಗೆ ಕ್ವಚಿತ್ತಾಗಿ ಹೇಳಿ ಮುಗಿಸಿ ಮುಂದಿನ ಹದಿನೈದು ದಿನಗಳಿಗಾಗಿ ಕಾಯುವಂತೆ ಮಾಡುತ್ತಿದ್ದರು. ಸಂಪಾದಕನೂ, ಓದುಗರೂ ಏಕಪ್ರಕಾರವಾಗಿ ಕಾಯುತ್ತಿದ್ದ ಕೆಲವೇ ಬರವಣಿಗೆಗಳಲ್ಲಿ ಸಂಧ್ಯಾರಾಣಿ ಅವರದ್ದೂ ಒಂದಾಗಿತ್ತು.
ಎನ್. ಸಂಧ್ಯಾರಾಣಿ ಬರೆದ ‘ಸಿನಿ ಮಾಯಾಲೋಕ’ ಪುಸ್ತಕಕ್ಕೆ ಅಬ್ದುಲ್ ರಶೀದ್ ಬರೆದ ಮುನ್ನುಡಿ