ಅನುಭವ ಬುತ್ತಿಯನ್ನು ಅಕ್ಷರವಾಗಿಸಿದ ಲೇಖಕಿ ಅರ್ನಾಕ್ಸ್
ಅರ್ನಾಕ್ಸ್ ಬೆಳೆದಿದ್ದು ಫ್ರಾನ್ಸಿನ ನಾರ್ಮಂಡಿ ಪ್ರಾಂತ್ಯದ ಯ್ವೆಟೊಟ್ ಎಂಬ ಪುಟ್ಟ ನಗರದಲ್ಲಿ. ಅವರ ತಂದೆ ಅಲ್ಲಿ ಒಂದು ಕಿರಾಣಿ ಅಂಗಡಿ ಮತ್ತು ಕೆಫೆಯನ್ನು ನಡೆಸುತ್ತಿದ್ದರು. ಅಲ್ಲಿಯ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಅವರಿಗೆ ಬಡತನವು ತಂದಿಡಬಹುದಾದ ಸಾಮಾಜಿಕ ತಾರತಮ್ಯದ ಅರಿವಾಯಿತು. ತಮ್ಮ ಬರವಣಿಗೆಯ ಐವತ್ತು ವರ್ಷಗಳಲ್ಲಿ ಅವರು ಬರೆದ ಕೃತಿಗಳ ಸಂಖ್ಯೆ ಇಪ್ಪತ್ತಕ್ಕಿಂತಲೂ ಹೆಚ್ಚು. ಹೆಚ್ಚಿನವು ಕಾದಂಬರಿಗಳಾದರೆ ಇನ್ನು ಕೆಲವು ನಾಟಕಗಳು, ಚಿತ್ರಕಥೆಗಳು. 2022ರ ನೊಬೆಲ್ ಪಾರಿತೋಷಕ ಫ್ರಾನ್ಸಿನ ಲೇಖಕಿ ಆನ್ ಅರ್ನಾಕ್ಸ್ ಕುರಿತು ಸುಧಾ ಆಡುಕಳ ಬರಹ
Read More