ವೇಷ ಕಳಚಿ ನಡೆಯಬೇಕು…: ಆಶಾ ಜಗದೀಶ್ ಬರಹ
ನಿಜ ಏನೆಂದರೆ, ನಾವು ಸತ್ಯವನ್ನು ಎದುರಿಸುವ ಶಕ್ತಿಯನ್ನು ಪಡೆಯಬೇಕಿದೆ. ನಾವು ಒಳಗೆ ಹೇಗಿದ್ದೇವೋ ಹೊರಗೂ ಅದೇ ಆಗಿ ತೋರಿಸಿಕೊಳ್ಳುವ ಧಾರ್ಷ್ಟ್ಯವನ್ನು ಬೆಳೆಸಿಕೊಳ್ಳಬೇಕಿದೆ. ಇಲ್ಲವಾದರೆ ವೇಷ ಕಳಚುವುದು ಎಷ್ಟು ಹೊತ್ತಿನ ಕೆಲಸ! ನಾವು ಯಾವುದು ಅಲ್ಲವೋ ಅದಾಗಿ ನಮ್ಮನ್ನು ನಾವು ತೋರಿಸಿಕೊಳ್ಳಲಿಕ್ಕೆ ನಮಗೆ ಹೆಚ್ಚು ಪ್ರಯತ್ನ ಬೇಕಾಗಬಹುದು. ಆದರೆ ನಾವು ನಾವಾಗಿರುವುದಕ್ಕೆ ಅಷ್ಟೊಂದು ಪ್ರಯತ್ನ ಬೇಕಿರುವುದಿಲ್ಲ. ನಾವು ನಾವಾಗಲ್ಲದೆ ನಾವು ಬಯಸಿದ ನಾವಲ್ಲದ ಪಾತ್ರವಾಗಿ ಜಗತ್ತನ್ನು ನಂಬಿಸಲು ಸದಾ ಎಚ್ಚರದಿಂದ ಇರಬೇಕಾಗಿರುತ್ತದೆ.
ಆಶಾ ಜಗದೀಶ್ ಬರಹ ನಿಮ್ಮ ಓದಿಗೆ