ಎದೆ ಹಿಂಡುವ ನೆನಪು…: ಎಸ್. ನಾಗಶ್ರೀ ಅಜಯ್ ಅಂಕಣ
ಮಧ್ಯಾಹ್ನದ ಊಟಕ್ಕೆ ಆರಾಮಾಗಿ ಮನೆಗೆ ಹೋಗಿ ಬರಬಹುದಿತ್ತು. ಕೆಲವು ಮಕ್ಕಳ ತಾಯಂದಿರು ಮಾತ್ರ ಪ್ರತಿದಿನ ತಮ್ಮ ಮಕ್ಕಳ ಡಬ್ಬಿ ಹಿಡಿದು ಮಧ್ಯಾಹ್ನ ಶಾಲೆಗೆ ಬಂದು ತಿನ್ನಿಸಿ ಹೋಗುತ್ತಿದ್ದರು. ಒಂದು ಮಳೆಮಧ್ಯಾಹ್ನ ನನ್ನ ಅಮ್ಮನೂ ಡಬ್ಬಿ ತಂದು, ತಿನ್ನುವವರೆಗೂ ಜೊತೆಯಿದ್ದು ಹೋದಾಗ ಒಂದು ಬಗೆಯ ಜಂಬ. ಸಂತೋಷ. ನನ್ನ ಗೆಳತಿಯೊಬ್ಬಳನ್ನು ಕೇಳಿದ್ದೆ, “ಇವತ್ತು ನಮ್ಮಮ್ಮ ಬಂದಿದ್ರು. ನೋಡಿದ್ಯೇನೇ?” ಅವಳು ಅಷ್ಟೇ ಸಹಜವಾಗಿ, “ಎಷ್ಟು ಜೋರು ಮಳೆ ಬಂದರೂ ನಮ್ಮಮ್ಮ ಬರಲ್ಲ ಕಣೆ. ನಾನು ಹುಟ್ಟಿದಾಗಲೇ ಅವರು ಸತ್ತೋದ್ರು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ