Advertisement

Tag: ಕತೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಕತೆ: ನಕ್ಕ ನಗು

ಅವಳು ಹೀಗೆ ನಗಲು ಪ್ರಾರಂಬಿಸಿದಳೆಂದರೆ ಉಳಿದವರಿಗೆ ಗಾಬರಿಯಾಗುತ್ತಿತ್ತು. ನಕ್ಕು ಸುಸ್ತಾಗಿ ಕಣ್ಣ ತುದಿಯಿಂದ ಹರಿವ ನೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ, ಮುಖ ಕೆಂಪಗೆ ಮಾಡಿಕೊಂಡು, ನೂರರ ವೇಗದಲ್ಲಿ ಓಡುತ್ತಿರುವ ಗಾಡಿ ಸಡನ್ ಬ್ರೇಕ್ ಹಾಕಿದಂತೆ ಸುಮ್ಮನಾಗುತ್ತಿದ್ದಳು. ನಲವತ್ತೈದು ವರುಷದ ಅವಳ ದಾಂಪತ್ಯಕ್ಕೆ ವ್ಯಾಖ್ಯೆ ಬರೆದಂತೆ ಬಂಡೆಕಲ್ಲಿನಂತೆ ಕುಳಿತು ಬಿಡುತ್ತಿದ್ದಳು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಬರೆದ ಕತೆ ‘ನಕ್ಕ ನಗು!

Read More

ಡಾ. ಜ್ಯೋತಿ ಬರೆದ ಈ ಭಾನುವಾರದ ಕತೆ

ನಾನು, ಮಕ್ಕಳೊಂದಿಗೆ ಕಾಡು ಮೇಡು ಸುತ್ತುತ್ತಾ ಕಷ್ಟನಷ್ಟ ಅನುಭವಿಸುವಾಗ ಜೊತೆಗಿದ್ದು, ಅಂತೂ ಈಗ ಗದ್ದುಗೆ ಸಿಕ್ಕ ಮೇಲೆ ವೈರಾಗ್ಯ ಮೂಡಿ, ಅಕ್ಕ ಭಾವನ ಹಿಂದೆ ಹೆಜ್ಜೆಯಿಡುವ ನಿರ್ಧಾರ ಮಾಡಿ, ಕಾಡಿನತ್ತ ಮುಖ ಮಾಡಿದೆ. ನನ್ನ ಮಕ್ಕಳಿಗೆ ತಕ್ಷಣ ನಂಬಲಾಗಲಿಲ್ಲ. ಮೊದಲು ನಾನೂ ಹಾಗೆಯೇ ಅಂದುಕೊಂಡಿದ್ದೆ. ಆದರೆ ಕುರುಕ್ಷೇತ್ರ ಯುದ್ಧರಂಗ ನೋಡಿದ ಮೇಲೆ ನನಗೆ ವೈರಾಗ್ಯ ಮೂಡಿತು. ಈ ವೈಭೋಗ, ಒಣ ಪ್ರತಿಷ್ಠೆ ಯಾವುದೂ ನನಗೆ ಬೇಕಿಲ್ಲವೆನಿಸಿತು. -ಡಾ.ಜ್ಯೋತಿ ಬರೆದ ಕತೆ ‘ಕುಂತಿಯ ಮುಸ್ಸಂಜೆ ಮಾತು’ ಇಂದಿನ ಓದಿಗಾಗಿ. 

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಟ್‌ ಕತೆ

ಮದುವೆಯಾಗಿ ಬಂದಮೇಲೆ ಮಾಕುಚಿಕ್ಕಿಯ ಮಾತು ಸೊಟ್ಟಗಾಗಲು ಬಹಳ ದಿನ ಹಿಡಿಸಲಿಲ್ಲ, ಕರಿಮಣಿ ಕಟ್ಟಿಕೊಂಡವರೆಲ್ಲ ಉರಿದು ಬೀಳುವುದು ಸಂಪ್ರದಾಯವಿರಬೇಕು ಅಂತ ಆಶ್ಚರ್ಯ ಪರಮುಗೆ. ತನ್ನ ಹಡೆದಬ್ಬೆಯ ಪ್ರೀತಿಯಲ್ಲಿಯೂ ಹೆಚ್ಚೇನೂ ಓಲಾಡಿದವನಲ್ಲ ಪರಮು. ಅಬ್ಬೆ ವರ್ಷಕ್ಕೊಮ್ಮೆ ಹೊಟ್ಟೆ ಡುಬ್ಬ ಮಾಡಿಕೊಂಡು ಹೆರಿಗೆ ನೋವು ಬಂದೊಡನೆ ಕೊಂಕಣಿ ಅಜ್ಜಿಗೆ ಬರ ಹೇಳುವುದು, ಒಂದಲ್ಲ ಒಂದು ಕಾರಣಕ್ಕೆ ಮಗು ಹುಟ್ಟುತ್ತಲೇ ಕೈಲಾಸ ವಾಸಿಯಾಗುವುದು ಇದ್ದಿದ್ದೇ. ಮಗುವಿಲ್ಲದ ಬಾಳಂತನದಲ್ಲಿ ಅಳುವ ಅಬ್ಬೆ, ಕಂಡವರ ಶಿಶುಗಳಿಗೆಲ್ಲ ಹಾಲೂಡಿಸಿ ಎದೆ ಭಾರ ಕಳೆದ ಮೇಲೆ ಮತ್ತೆ ಮೊದಲಿನಂತೆ…

Read More

ಎ.ಎನ್. ಪ್ರಸನ್ನ ಬರೆದ ಈ ಭಾನುವಾರದ ಕತೆ

“ರಂಗಸ್ವಾಮಿ ಅಭ್ಯಾಸಬಲದಂತೆ ಬೆಳಿಗ್ಗೆ ಆರಕ್ಕೆ ಕಣ್ಣು ಬಿಟ್ಟ ನಂತರ ಎಲ್ಲ ಕೆಲಸಗಳನ್ನು ವಿಶ್ವನಾಥ-ರಾಗಿಣಿ ಹಂಚಿಕೊಂಡಿದ್ದರು. ಅವರ ಚಲನೆಗೆ ವೀಲ್ ಚೇರ್ ನ ಅನಿವಾರ್ಯತೆಯಿತ್ತು. ಹಾಸಿಗೆಯಿಂದ ಏಳಿಸುವುದು, ಹಲ್ಲುಜ್ಜಿಸುವುದು, ಟಾಯ್ಲೆಟ್ ಇತ್ಯಾದಿ. ಅವರು ಮಾಡುವ ಪ್ರಯತ್ನಕ್ಕೆ ರಂಗಸ್ವಾಮಿಯವರ ಸಹಕಾರವಷ್ಟೇ.. “

Read More

ಉಳಿದ ಪಾಲು: ಸುನೈಫ್ ವಿಟ್ಲ ಬರೆದ ಕತೆ

“ಕನಸಿನ ವ್ಯಾಖ್ಯಾನ ಹೇಳಬಲ್ಲ ಪಂಡಿತರೆಲ್ಲ ಆಳಿಗೊಂದು ಕತೆ ಕಟ್ಟತೊಡಗಿದರು. ವರ್ಷಗಳು ಉರುಳಿದಂತೆ ಕನಸುಗಳು ನೆನಪಿನ ಯಾವುದೊ ಮೂಲೆಗೆ ಸೇರಿಬಿಡಬೇಕು. ಆದರೆ ನನ್ನ ಕತೆ ಹಾಗಾಗಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನೆನಪಿನ ಮನೆಯ ಆ ಮೂಲೆಗೆ ಯಾರಾದರೂ ಬೆಳಕು ಹರಿಸುತ್ತಾರೆ. ಆಗ ಮತ್ತೆ ಕೆಲವು ದಿನಗಳು ಕೈ ಜಾರುತ್ತವೆ. ಕೈ ಜಾರುತ್ತವೆ ಎಂದರೆ ಮೋಸದ ಮಾತಾಗಬಹುದು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ