Advertisement

Tag: ಕತೆ

ಎಂ. ಎಸ್.‌ ಶ್ರೀರಾಮ್‌ ಬರೆದ ಈ ಭಾನುವಾರದ ಕತೆ

ರಂಗಾರೆಡ್ಡಿ ಛಲಬಿಡದ ತ್ರಿವಿಕ್ರಮನಂತೆ, ಕಡೆಗೂ ಹಳೆಯ ಕಾಗದಗಳನ್ನ ತೆಗೆಯಲು ಹೇಳಿ, ಹಾಗೂ ಹೀಗೂ ಸ್ಕೂಲಿನ ಕಡತಗಳಿಂದ ಶಾರದಾಳ ಎಪ್ಲಿಕೇಶನ್ ಫಾರಮ್ಮನ್ನ ಹುಡುಕಿಸಿ ತೆಗೆಸಿದ. ಅದರಲ್ಲಿ ಅದೃಷ್ಟವಶಾತ್ತು ಆಕೆ ಹಿಂದೆ ಮಾಡುತ್ತಿದ್ದ ಕೆಲಸದ ವಿವರಗಳು ಇದ್ದದ್ದರಿಂದ ಅಹಮದಾಬಾದಿನಲ್ಲಿ ಈ ಬಗ್ಗೆ ವಿಚಾರಣೆ ನಡೆಸಬಹುದಿತ್ತು. ಇದು ಒಳ್ಳೆಯ ಪಾಯಿಂಟೆನ್ನಿಸಿ, ರಂಗಾರೆಡ್ಡಿ ಅಹಮದಾಬದಿನ ಪೋಲೀಸು ಇಲಾಖೆಗೆ ಈ ಬಗ್ಗೆ ಮಾಹಿತಿ ಕಳಿಸಬೇಕೆಂದು, ಹಿನ್ನೆಲೆಯನ್ನೆಲ್ಲ ವಿವರಿಸಿ ಒಂದು ಪತ್ರ ಬರೆದು ಹಾಕಿದ. ಎಲ್ಲಿಯಾದರೂ ಈ ಕೇಸಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಇದಕ್ಕೊಂದು ಪರಿಷ್ಕಾರ ಹುಡುಕಬಹುದಿತ್ತು. ಬರಬರುತ್ತಾ ಗಹನವಾಗುತ್ತಿದ್ದ ಈ ಕೇಸು ಅವನ ಮನಸ್ಸಿಗೆ ಕಸರತ್ತನ್ನು ನೀಡಿತ್ತು.
ಎಂ. ಎಸ್. ಶ್ರೀರಾಮ್‌ ಬರೆದ ಕತೆ `ಶಾರದಾ ಮೇಡಂ ಆಬ್ಸೆಂಟು’ ನಿಮ್ಮ ಈ ಭಾನುವಾರದ ಓದಿಗೆ

Read More

ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ

ರೋಗಿಯ ಜೊತೆ ಇರಲು ಕೇವಲ ಒಬ್ಬರಿಗೆ ಮಾತ್ರ ಅವಕಾಶವೆಂದು ಸೆಕ್ಯೂರಿಟಿ ನನ್ನನ್ನು ಹೊರಹಾಕಿದ. ಅಣ್ಣ ನೀನು ಹೊರಗಡೆ ಇರು ಎಂದು ನನಗೆ ಕಣ್ಣಲ್ಲೇ ಸನ್ನೆ ಮಾಡಿದ. ಹೊರಗಡೆ ಅಪ್ಪನನ್ನು ಗಾಜಿನ ಬಾಗಿಲಿನಿಂದ ಇಣುಕುತ್ತಾ ನೋಡುತ್ತ ನಿಂತೆ. ಸೆಕ್ಯೂರಿಟಿ ಮತ್ತೆ ಹಿಂದೆ ನಿಂತುಕೊಳಯ್ಯ ಎಲ್ಲರೂ ಇಲ್ಲಿ ನಿಂತ್ರೆ ಗಲಾಟೆಯಾಗುತ್ತೆ ಎಂದು ಗದರಿಸಿದ. ಬೇರೆ ದಾರಿಯಿಲ್ಲದೆ ಸ್ವಲ್ಪ ದೂರದಲ್ಲೇ ಇದ್ದ ಗ್ರಿಲ್ಗೆ ಆಣಿಕೊಂಡು ನಿಂತೆ. ಪಾಳೆಯ ಪ್ರಕಾರ ಒಂದರನಂತರ ಒಂದು ಬರುವ ಆಂಬುಲೆನ್ಸ್ ಗಳನ್ನು ನೋಡುತ್ತಿದ್ದೆ. ಗಾಡಿಯಿಂದ ಇಳಿದು ಆಸ್ಪತ್ರೆಗೆ ಸೇರುವ ರೋಗಿಗಳ ದೃಶ್ಯ ಎಂತ ಕಟುಕನಿಗೂ ಸಹ ಹೃದಯ ವಿದ್ರಾಯಕವೆನಿಸುವಂತಿದ್ದವು.
ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ

Read More

ಎಂ. ನಾಗರಾಜ ಶೆಟ್ಟಿ ಬರೆದ ಈ ಭಾನುವಾರದ ಕತೆ

ತನಗೆ ಮಂಗಳೂರಿನಲ್ಲಿ ಅಂಗಡಿ ಇದೆ. ನಾಲ್ಕು ಕಾಸೂ ಓಡಾಡುತ್ತಿದೆ. ಸಂಜೀವ ಚೆನ್ನಾಗಿರಲಿ ಎಂದುಕೊಂಡರು. ಆದರೆ ಪೂವಮ್ಮನನ್ನು ಒಪ್ಪಿಸುವುದು ಕಷ್ಟವಾಯಿತು. ಅವಳ ಸಮಾಧಾನಕ್ಕಾಗಿ ಸಂಜೀವನನ್ನು ಜಪ್ಪುವಿಗೆ ಕರೆಸಿ, ಸೀತಾರಾಮನನ್ನು ಕೂಡಿಸಿ ಸಂಧಾನ ಮಾಡಿ ಒಂದೆಕರೆ ತೋಟ ಮತ್ತು ಮನೆ ಉಳಿಸಿಕೊಂಡು ಉಳಿದ ಜಾಗವನ್ನು ಸಂಜೀವನಿಗೆ ಬಿಟ್ಟುಕೊಟ್ಟರು. ತಮ್ಮ ತಂದೆಯ ನೆನಪಿಗಾಗಿ ಅಷ್ಟಾದರೂ ಇರಲಿ ಎಂದು ಸಮಾಧಾನ ಪಟ್ಟುಕೊಂಡರು. ಎಂದಾದರೂ ಜಾತ್ರೆಗೋ, ಕೋಲಕ್ಕೋ ಹೋದಾಗ ತುಂಬೆಹಿತ್ಲಿನ ತಮ್ಮ ಮನೆಯಲ್ಲಿ ಇದ್ದು ಬಿಡುತ್ತಿದ್ದರು.
ಎಂ. ನಾಗರಾಜ ಶೆಟ್ಟಿ ಕಥಾಸಂಕಲನದ “ಬಣ್ಣದ ಹೊಂಡ”ದ ಕತೆ “ಆ ದೇವ ಈ ದೇವ ಎನಬೇಡ” ನಿಮ್ಮ ಈ ಭಾನುವಾರದ ಓದಿಗೆ

Read More

ಎಸ್‌. ರಾಮಮೂರ್ತಿ ಬರೆದ ಈ ಭಾನುವಾರದ ಕತೆ

ಶಾಮಲಾಳ ಪ್ರತಿ ಮಾತೂ ಹೂವಿನಂತೆ ಮೃದುವಾಗಿ, ಜೇನಿನಂತೆ ಸಿಹಿಯಾಗಿತ್ತು. ಕೂತರೆ ಹೂತುಹೋಗುವಂತಿದ್ದ ಮೆತ್ತೆಯಲ್ಲಿ ಕೂರಿಸಿದಳು. ಮಾನವಳಾಗಿ ಮಹಾನ್‌ ಕಾರ್ಯವನ್ನೆಸಗುತ್ತಿದ್ದೇನೆಂಬ ಭಾವನೆಯಲ್ಲಿ, ತಲೆ ಒರೆಸಿಕೊಳ್ಳಲು ಟವೆಲ್‌ ಕೊಟ್ಟಳು. ಅವಳಿಗಂತೂ ಅದೆಲ್ಲ ಕನಸಿನಂತಿದ್ದು ಗೊಂದಲದ ಗೂಡಿನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಳು. ಶಾಮಲಾ ಚೂಡಿದಾರೊಂದನ್ನು ಕೊಡುತ್ತಾ ಇದನ್ನ ಹಾಕ್ಕೋ ಎಂದಳು. ತಲೆ ಬಾಚಿಕೊಳ್ಳು ಬಾಚಣಿಗೆ ಕೊಟ್ಟಳು, ಪೂಸಿಕೊಳ್ಳಲು ಪೌಡರ್‌ ಕೊಟ್ಟಳು. ಅವಳು ಪೌಡರ್‌ ಹಾಕಿಕೊಳ್ಳದೇ ‘ನನಗೆ ತುಂಬ ಹೊಟ್ಟೆ ಹಸೀತಾ ಇದೆʼ ಅಂದಳು. ‘ಅಯ್ಯೋ, ಎಂಥ ಕೆಲಸ ಮಾಡಿದೇ, ಇರುʼ ಅಂತ ಹೇಳಿ ಅಡುಗೆ ಮನೆಗೆ ಓಡಿ ತಟ್ಟೆ ತುಂಬ ತಿಂಡಿಗಳನ್ನು ತುಂಬಿಕೊಂಡು ಬಂದು ಅವಳ ಮುಂದಿಟ್ಟಳು.
ಎಸ್‌. ರಾಮಮೂರ್ತಿ ಬರೆದ ಕತೆ “ಚೆಲುವೆ”

Read More

ಸುಧಾ ಆಡುಕಳ ಬರೆದ ಈ ಭಾನುವಾರದ ಕತೆ

ಹೇಳಿಕೇಳಿ ದೊಡ್ಡವರ ಮನೆಯ ಮೂರೆಳೆಯ ಸರ ನಾನು. ಎಲ್ಲರ ಮದುವೆಯಲ್ಲೂ ಊರಿಗೆ ಮೊದಲು ಮದುವಣಗಿತ್ತಿಯನ್ನು ನೋಡುವ ಯೋಗ ನನ್ನದಾಗಿತ್ತು. ಚಿನ್ನದ ಬಟ್ಟಲಿನಲ್ಲಿ ಪಟ್ಟೆ ಸೀರೆಯೊಂದಿಗೆ ನನ್ನನ್ನೂ ಇಟ್ಟು ಮದುವಣಗಿತ್ತಿಗೆ ಕೊಡುತ್ತಿದ್ದುದು ವಾಡಿಕೆ. ಹೊಸ ಮದುವಣಗಿತ್ತಿಯ ಕತ್ತಿನಲ್ಲಿ ಕುಳಿತು ಎಷ್ಟೆಲ್ಲ ಪುಳಕಗಳನ್ನು ಅನುಭವಿಸಿರುವೆ ನಾನು. ಮದುಮಗ ಹಾರ ಹಾಕಲು, ತಾಳಿಕಟ್ಟಲು ಹುಡುಗಿಯ ಕತ್ತನ್ನು ಬಳಸಿದಾಗ ಅವಳೆದೆಯಲ್ಲಿ ಮಿಡಿಯುವ ಸಣ್ಣ ಕಂಪನ ನನ್ನವರೆಗೂ ಹರಡುತ್ತಿತ್ತು. ಪಾಲು, ಪಟ್ಟಿಯ ಗೊಂದಲದಲ್ಲಿ ನನ್ನನ್ನು ಪಡೆಯಲು ಮಾರಾಮಾರಿಯೇ ನಡೆದು ಕೊನೆಗೊಮ್ಮೆ ಈ ಮನೆಯ ಪಾಲೆಂದು ಘೋಷಣೆಯಾಯಿತು.
ಸುಧಾ ಆಡುಕಳ ಬರೆದ ಈ ಭಾನುವಾರದ ಕತೆ “ಪಾಲು”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ