Advertisement

Tag: ಕತೆ

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಕೆಂಪು ಬಣ್ಣದ ರೇಷ್ಮೆ ಸೀರೆಯನ್ನು ಹಿಂದಿನೆರಡು ಬಟ್ಟೆ ತುಂಡುಗಳ ಜೊತೆಗೆ ಜೋಡಿಸುತ್ತಿದ್ದ ಶಂಕ್ರಜ್ಜಿಗೆ ಮದುವೆಯ ನೆನಪು ಬಂದರೂ ಅದು ಮನಸ್ಸಿಗೆ ಖುಷಿ ಕೊಡಲಿಲ್ಲ. ಹಸಿರು, ಹಳದಿ, ಕೆಂಪು ಬಣ್ಣಗಳಿಂದ ತಯಾರಾಗುತ್ತಿದ್ದ ಕೌದಿಗೆ ಸೇರಿಸಲು ಇನ್ನೊಂದೆರಡು ಬಟ್ಟೆಗಳಷ್ಟೇ ಬೇಕಿದ್ದದ್ದು. ಅವಳ ಮಡಿಲ ಬುಡದಲ್ಲಿಯೇ ಇತ್ತು ನೀಲಿ ಬಣ್ಣದ ಫ್ಯಾನ್ಸಿ ಸೀರೆ. ಅದನ್ನು ಎತ್ತಿಕೊಂಡು ಉಳಿದವುಗಳ ಜೊತೆಗೆ ಸೇರಿಸಿ ಹೊಲಿಯಲಾರಂಭಿಸಿದಳು.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಕೌದಿ” ನಿಮ್ಮ ಓದಿಗೆ

Read More

ಲತಾ ಶ್ರೀನಿವಾಸ್‌ ಬರೆದ ಈ ಭಾನುವಾರದ ಕತೆ

ಆ ದಿನ ರಾತ್ರಿ ಎಂಟಕ್ಕೆ ಮನೆಗೆ ಬಂದ ಇವರ ಕೆನ್ನೆಯ ಮೇಲೆ ಸ್ಪಷ್ಟವಾಗಿ ಮೂಡಿದ ಲಿಪ್ಸ್ಟಿಕ್‌ನ ಗುರುತು ನನಗೆ ನೋಡಿ ಇಡೀ ಮೈಯೆಲ್ಲಾ ಕರೆಂಟು ಹೊಡೆದ ಅನುಭವ. ಹೃದಯ ಸ್ಥಂಭನವಾಗುವುದೊಂದು ಬಾಕಿ… ಕೆನ್ನೆಯ ಮೇಲೆ ಯಾರೋ ಕಿಸ್ ಮಾಡಿದ್ದಾರೆ. ನನ್ನ ಕಣ್ಣಿನಲ್ಲಿ ತಕ್ಷಣ ಧಾರಾಕಾರವಾಗಿ ಸುರಿಯುವ ಕಣ್ಣೀರಿನಲ್ಲಿ ನಮ್ಮ ದಾಂಪತ್ಯ ಕೊಚ್ಚಿ ಹೋಗುವ ಸೂಚನೆ. ಕೈಯಲ್ಲಿದ್ದ ಮೊಬೈಲ್‌ನಲ್ಲಿ ಅವರಿಗೆ ಅರಿವಾಗುವ ಮೊದಲೇ ಅವರ ಕೆನ್ನೆಯ ಮೇಲಿನ ಕಿಸ್‌ನ ಫೋಟೋ ತೆಗೆದುಕೊಂಡೆ.
ಲತಾ ಶ್ರೀನಿವಾಸ್‌ ಬರೆದ ಈ ಭಾನುವಾರದ ಕತೆ “ಒಂದು ಮುತ್ತಿನ ಕಥೆ”

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ನಾವೂ ನಮ್ಮ ಮಕ್ಕಳೂ, ಕೆಲಸಕ್ಕೂ, ಶಾಲೆಗೂ ಸೈಕಲ್ನಲ್ಲೋ ನಡೆದುಕೊಂಡೋ ಹೋಗಬೇಕು. ನೀವು ಹಾಕಿದ ಊಟ ತಿಂದು ಕೊಬ್ಬಿದ ನಾಯಿಗಳು ನಮ್ಮ ಮೇಲೆ ಹಾರಿ ಬೀಳ್ತವೆ. ಮೊನ್ನೆ ಮೊನ್ನೆ ಒಂದು ಸಣ್ಣ ಹುಡುಗನಿಗೆ ಸಿಕ್ಕಾಪಟ್ಟೆ ಕಚ್ಚಿ ನಾವು ಅವನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಇನ್ನು ಮೇಲೆ ನೀವು ಇಲ್ಲಿ ತಂದು ಹಾಕಬೇಡಿ ಎಂದರಂತೆ….
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ನಾಯಿ ನೆರಳು” ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪ್ರೇಮಶೇಖರ ಬರೆದ ಕತೆ

ಅವರು ಕಣ್ಣುಗಳನ್ನು ಅರೆಮುಚ್ಚಿಕೊಂಡಿದ್ದರು. ನಾನು ತಲೆತಗ್ಗಿಸಿದೆ. ಅವರು ನನ್ನ ಭುಜ ತಟ್ಟಿದರು. “ಮೊದಲು ನಿಮ್ಮಮ್ಮನ ಲೈಫ್ ಸೆಕ್ಯೂರ್ ಆಗಲಿ” ಅಂದರು. ಸ್ವಲ್ಪ ತಡೆದು “ನಿನ್ನನ್ನ ಮನೇಲೇ ಇರಿಸಿಕೊಳ್ಳೋದಿಕ್ಕೆ ನಿನ್ನ ಹೊಸಾ ತಂದೆಯ ಅಬ್ಜೆಕ್ಷನ್ ಏನೂ ಇಲ್ಲ ಅಂತ ತಿಳಕೋಬೇಕು ನಾವು. ಹಾಗಂತ ನಿಮ್ಮಮ್ಮನ್ನ ಕೇಳು” ಅಂದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಪ್ರೇಮಶೇಖರ ಬರೆದ ಕತೆ “ಭೂಮಿ-ಹೆಣ್ಣು” ನಿಮ್ಮ ಓದಿಗೆ

Read More

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ಹೀಗೆ ಸತ್ತವರನ್ನು ಮಣ್ಣು ಮಾಡಲೆಂದೇ ಇಷ್ಟು ವಿಶಾಲವಾದ ಭೂಮಿಯನ್ನು ಪಾಳು ಬಿಡುವುದು, ಪೋಲು ಮಾಡುವುದು ತಪ್ಪಲ್ಲವೇ? ಇವರೆಲ್ಲ ದಾಯಾದಿಗಳು. ನಮ್ಮ ಹತ್ತಿರ ಮಾತು ಕೂಡ ಆಡುತ್ತಿರಲಿಲ್ಲ, ಈಗಲೂ ಆಡುವುದಿಲ್ಲ. ಕೆಲವು ಮನೆಗಳ ಜೊತೆ ರಾಜಕೀಯ ವೈರ ಕೂಡ ಇದೆ. ಇಂಥವರ ಹಿರೀಕರ ಸ್ಮಾರಕಗಳನ್ನೆಲ್ಲ ನಮ್ಮ ಜಮೀನನಲ್ಲಿ ಯಾಕೆ ಇಟ್ಟುಕೊಳ್ಳಬೇಕು.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ