ನೀಲಾಕಾಶದ ನಿಹಾರಿಕೆಗಳ ನೋವು ತಿಳಿದಿರಲಿ…
ಚಾಂದ್ ಪಾಷಾರಿಗೆ ಇರುವ ಸವಾಲೆಂದರೆ ಒಂದು mood ಅಥವಾ ಒಂದು ಹೊಳಹನ್ನು ಎಷ್ಟು ಸಶಕ್ತವಾಗಿ ಹೇಳಬಲ್ಲರೋ ಅದೇ ಸಾಮರ್ಥ್ಯವನ್ನು ಸಂಕೀರ್ಣ ವಸ್ತುವಿನ ನಿರ್ವಹಣೆಯಲ್ಲಿಯೂ ಸಾಧಿಸಬೇಕಾಗುತ್ತದೆ. ಹೇಳಿದ್ದನ್ನು ಚುರುಕಾಗಿ, ಪ್ರಭಾವಿಯಾಗಿ ಹೇಳುವುದು ಎಷ್ಟು ಮುಖ್ಯವೋ ಕಾವ್ಯದಲ್ಲಿ ಒಂದು ಅನುಭವವನ್ನು ಸಾಂದ್ರವಾಗಿ ಗಂಭೀರ ಚಿಂತನೆಯೊಂದಿಗೆ ಅಭಿವ್ಯಕ್ತಿಸುವುದು ಅಷ್ಟೇ ಮುಖ್ಯ. ಈ ಹಿಂದಿನ ಸಂಕಲನಗಳಲ್ಲಿ ಮತ್ತು ಪ್ರಸ್ತುತ ಕೃತಿಯಲ್ಲಿ ಈ ಸಾಮರ್ಥ್ಯದ ಝಲಕುಗಳನ್ನು ಚಾಂದ್ ಪಾಷಾ ತೋರಿದ್ದಾರೆ.
ಚಾಂದ್ ಪಾಷ ಎನ್.ಎಸ್. ಕವನ ಸಂಕಲನ “ಒದ್ದೆಗಣ್ಣಿನ ದೀಪ”ಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ