Advertisement

Tag: ಕೆಂಡಸಂಪಿಗೆ

ಮರೆಯಾದ ಮತ್ತಷ್ಟು ಕೆರೆಗಳ ಕತೆಗಳು: ಎಚ್. ಗೋಪಾಲಕೃಷ್ಣ ಸರಣಿ

ಈ ಹಳ್ಳದಲ್ಲಿ ಅಥವಾ ಕೆರೆಯಲ್ಲಿ ನೀರು ಇದ್ದದ್ದು ಈಗ ಬದುಕಿರುವವರಲ್ಲಿ ಯಾರೂ ನೋಡಿದ ಹಾಗೇ ಇಲ್ಲ. ಒಂದು ಮಾಹಿತಿ ಪ್ರಕಾರ ೧೯೩೦ ರಲ್ಲಿ ಇಲ್ಲಿಗೆ ನೀರು ಬರುವುದು ನಿಂತು ಹೋಯಿತು. ಯಾತಕ್ಕೆ ನಿಂತು ಹೋಯಿತು, ಯಾರು ನಿಲ್ಲಿಸಿದರು ಎನ್ನುವುದನ್ನು ಪತ್ತೆ ಮಾಡಬೇಕು. ಅರವತ್ತರ ದಶಕದಲ್ಲಿ ಇಲ್ಲಿ ಈಗಿನ ಬೆಂಗಳೂರು ಬಸ್ ಸ್ಟಾಂಡಿನ ಜಾಗದಲ್ಲಿ ಕಾಂಗ್ರೆಸ್ ಎಕ್ಸಿಬಿಷನ್ ಅಂತ ಒಂದು ಎಕ್ಸಿಬಿಷನ್ ಆಗ್ತಾ ಇತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ತೆಂಟನೆಯ ಕಂತು ನಿಮ್ಮ ಓದಿಗೆ

Read More

ಒಂದು “ಆಕ್ಸಿಡೆಂಟ್” ಕತೆ : ರಾಮ್ ಪ್ರಕಾಶ್ ರೈ ಕೆ. ಸರಣಿ

ಮೆದುಳು ಮತ್ತು ದೇಹದ ನಡುವಿನ ಸಂಪರ್ಕ ಕಡಿಮೆಯಾಗುತ್ತಿದ್ದಂತೆಯೇ, ವಾಹನದ ಹೆಜ್ಜೆ ಗಡಿ ರೇಖೆಗಳ ಎಲ್ಲೆ ಮೀರಿ ಸಾಗುತ್ತದೆ. ಕೊನೆಗೆ ಪಾದಚಾರಿ ಮಾರ್ಗದತ್ತ ಯಮನ ಅಮೂರ್ತರೂಪವಾಗಿ ನುಗ್ಗುತ್ತದೆ. ಅಲ್ಲಿ ಮಲಗಿದ್ದ, ಬೆವರಿನ ಮಳೆಯಲ್ಲೇ ಬದುಕು ಕಟ್ಟಿಕೊಳ್ಳುವ, ಅಂಗಿಗೆ ಕಿಸೆ ಸದಾ ಅಂಟಿಕೊಂಡೇ ಇರುವ ಜೀವಗಳ ಉಸಿರು ಅರೆಕ್ಷಣದಲ್ಲಿ ನಿಂತು ಹೋಗುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಕೆಂಪಾದವೋ ಎಲ್ಲ ಕೆಂಪಾದವೋ: ಸುಧಾ ಆಡುಕಳ ಅಂಕಣ

ಆ ದಿನವೂ ಮಳೆಗೆ ಇನಿತೂ ಬಿಡುವಿಲ್ಲ. ಸಂಜೆಯಾಗುತ್ತಲೇ ರಾತ್ರಿಯಿಳಿದಂತ ಕತ್ತಲು. ನೀಲಿಯ ಅಮ್ಮ ಅಂಗಳಕ್ಕೆ ಇಣುಕಿ ಕ್ಷಣಕ್ಷಣವೂ ನೀಲಿ ಬಂದಳೆ? ಎಂದು ನಿರುಕಿಸುತ್ತಾಳೆ. ಈ ಹುಡುಗಿಗೆ ಯಾಕಿಷ್ಟು ಶಾಲೆಯ ಹುಚ್ಚೋ ಎಂದು ಮನದಲ್ಲಿಯೇ ಶಪಿಸುತ್ತಾಳೆ. ಹೊಳೆಯಂತೂ ಹುಚ್ಚುಹಿಡಿದು ಹರಿಯುತ್ತಿದೆ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ನಾಲ್ಕನೆಯ ಕಂತಿನಲ್ಲಿ ನೀಲಿಯ ಓದುವ ಹುಚ್ಚಿನ ಕತೆ

Read More

ಪುಷ್ಪನಗರಿ ಮಡಿಕೇರಿ: ಸುಮಾವೀಣಾ ಸರಣಿ

ದೇಸೀ ಹೂವಿನ ಬೆಳೆ ಈಗ ಸಾಕಷ್ಟು ಕಡಿಮೆಯಾಗಿದೆ. ಆದರೆ ಬೇಡಿಕೆ ಹೆಚ್ಚಾಗಿದೆ. ಹೀಗೆ ಮುಂದುವರೆದರೆ ಕೆಲವು ಪ್ರಾಣಿಗಳನ್ನು ಚಿತ್ರಗಳಲ್ಲಿ ನೋಡಬೇಕಾದ ಪರಿಸ್ಥಿತಿ ಬಂದಿರುವಂತೆ ಹೂಗಳಿಗೂ ಬರುತ್ತದೆ. ಹೂ ತೋಟದ ಕಲ್ಪನೆ ಗೌಣವಾಗಿದೆ. ಈಗ ಹೂ ಬಿಡದ ಗಿಡಗಳ ಅಲಂಕಾರ ಸೌಸವವಿಲ್ಲದ ಗಿಡಗಳ ಬಗ್ಗೆ ಒಲವು ಹೆಚ್ಚಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಬಾರೆಹಣ್ಣು ಮತ್ತು ಪಟ್ಲುಗೋವಿ ಕಿಟ್ಟಪ್ಪ: ಮಾರುತಿ ಗೋಪಿಕುಂಟೆ ಸರಣಿ

ಕಿಟ್ಟಪ್ಪ ಪಟ್ಲು ಗೋವಿಯನ್ನು ಯಾರಿಗೂ ಕಾಣದೆ ಹಿಡಿದುಕೊಂಡಿದ್ದಾನೆ. ನಾವು ಈತ ಈಗೇನು ಮಾಡಬಹುದೆಂದು ನೋಡುತ್ತಿದ್ದೆವು, ನಿಧಾನವಾಗಿ ಅವನು ಅದನ್ನು ಪ್ರಯೋಗಿಸಿದ್ದ. ಗುಂಪಿನ ಮಧ್ಯೆ ಅದು ಯಾರಿಗೋ ಬಡಿಯಿತು, ಯಾರೋ ಏನೋ ಮಾಡಿದರು ಎಂದು ಎಲ್ಲರೂ ಗಾಬರಿಯಾಗಿ ನೋಡುತ್ತಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಜನಮತ

ಹೊಸ ವರ್ಷದ ನನ್ನ ಆಸೆ

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಒಂದು ಆಕಾಶ, ಹಲವು ಏಣಿಗಳು: ಯೋಗೀಂದ್ರ ಮರವಂತೆ ಬರಹ

ವಿಮಾನಗಳ ಚರಿತ್ರೆಯನ್ನು ಬರೆದವರು ಬೇರೆಬೇರೆ ಕಾಲಘಟ್ಟದಿಂದ ಸ್ಥಳದಿಂದ ಘಟನೆಗಳಿಂದ ತಮ್ಮ ಅಧ್ಯಯನ, ಪುರಾವೆ ಹಾಗು ಅಂದಾಜುಗಳನ್ನು ವಿಶದೀಕರಿಸುವುದಿದೆ. ಆಕಾಶಕ್ಕೆ ನೆಗೆಯಬೇಕು ಎನ್ನುವ ಉತ್ಕಟ ಆಸೆ ಮನುಷ್ಯರಿಗೆ ಎಂದು…

Read More

ಬರಹ ಭಂಡಾರ