Advertisement

Tag: ಕೆ. ಪ್ರಭಾಕರನ್

ಪೂರ್ವಕ್ಕೆ ಒಂದು ಅಪೂರ್ವ ಪಯಣ

ನಿಡಿತವಾದ ಕತೆಯ ಹಂದರವಿರುವ ಈ ಕೃತಿಯು ಒಂದು ತಾತ್ವಿಕ ಪ್ರಬಂಧದ ಹಾಗೆಯೆ ಇದೆ. ಅದು ಎತ್ತುವ ಬಹುಮುಖ್ಯ ಪ್ರಶ್ನೆಗಳು ಚರಿತ್ರೆ, ಬರಹ, ಆತ್ಮ ಜಿಜ್ಞಾಸೆ ಇವುಗಳಿಗೆ ಸಂಬಂಧಪಟ್ಟಿವೆ. ಸಂಘ, ಪಯಣ ಇವೆಲ್ಲವು ನಾವು ಕಟ್ಟಿಕೊಳ್ಳುವ ರಚನೆಗಳಲ್ಲವೆ? ಎಲ್ಲರಿಗೂ ಸ್ವಂತದ ಉದ್ದೇಶವಿರುವುದಾದರೆ ಪಯಣಕ್ಕೆ ಇರುವ ಉದ್ದೇಶವೇನು? ಸಂಘವೆಂದರೆ ಏನು? ಕಟ್ಟಳೆಗಳು ಹೇಗೆ ರಚನೆಯಾಗುತ್ತವೆ? ನಿರೂಪಕನು ಸಂಘದ ನಿಯಮಗಳನ್ನು ಮುರಿದರೂ ಅವನಿಗೆ ಶಿಕ್ಷೆ ಇಲ್ಲ. ಅವನು ಹೇಳಲು ಹೊರಟಿರುವ ಕತೆಗೆ ಎಷ್ಟೊಂದು ಎಳೆಗಳಿವೆಯಲ್ಲ?
ಕೆ. ಪ್ರಭಾಕರನ್‌ ಅನುವಾದಿಸಿದ ಜರ್ಮನಿಯ ಹರ್ಮನ್‌ ಹೇಸ್‌ ಬರೆದ ಕಾದಂಬರಿ ‘ಪೂರ್ವದೆಡೆಗಿನ ಪಯಣ’ ಕೃತಿಗೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ

Read More

ಕೆ. ಪ್ರಭಾಕರನ್‌ ಅನುವಾದಿಸಿದ ಎಂ ಮುಕುಂದನ್‌ ಕಥೆ

ಕಾನ್‍ಫೆರೆನ್ಸ್ ರೂಮಿನ ಪಳ ಪಳಾ ಹೊಳೆಯುತ್ತಿದ್ದ ಮೇಜಿನಮೇಲೆ ಫ್ಲವರ್ ಪಾಟೂ ಮಿನರಲ್ ವಾಟರ್ ಬಾಟಲುಗಳೂ ಬಂದು ನಿಂತವು. ಗಾಜಿನ ಬಾಗಿಲುಗಳ ಮೂಲಕ ನೋಡಿದರೆ, ಮಂಜು ಮುಸುಕಿದ ಪರ್ವತ ಶ್ರೇಣಿಗಳಲ್ಲಿ ಎಳೆಬಿಸಿಲು ಸ್ಪಷ್ಟಗೊಳ್ಳುತ್ತಿರುವುದು, ಮಸುಕಾಗುತ್ತಿರುವುದು ಕಾಣಬಹುದು. ಆಕಾಶದಲ್ಲಿ ಮಳೆಯ ಸೂಚನೆಗಳು ಗೋಚರಿಸುತ್ತಿದ್ದವು. ಅವರು ಕಂಪನಿಯ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾ ವಾದವಿವಾದಗಳನ್ನು ಮುಂದಿಡುತ್ತಿದ್ದರು.

Read More

ಕಳ್ಳಿಗಾಡಿನ ಇತಿಹಾಸ: ಕರಾಳ ವಾಸ್ತವದ ಜೀವಂತ ಚಿತ್ರಣ

‘ಕಳ್ಳಿಗಾಡಿನ ಇತಿಹಾಸ’ ಎಂಬ ಶೀರ್ಷಿಕೆಯಿದ್ದರೂ, ಇದು ಪ್ರಪಂಚದ ಯಾವುದೇ ಅಭಿವೃದ್ಧಿ ಹೊಂದದ ಅಥವಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ನಡೆಯುವ ಶೋಷಿತ ಸಮುದಾಯದ ಇತಿಹಾಸವೇ ಆಗಿದೆ. ಯಾವುದೇ ರಾಜಕೀಯ ವ್ಯವಸ್ಥೆಯಾದರೂ ಶೋಷಿತವರ್ಗದ ನೋವು ನಲಿವುಗಳನ್ನು ಅರ್ಥ ಮಾಡಿಕೊಳ್ಳದೇ ಹೋದಾಗ, ಆ ಜನರು ಅನುಭವಿಸುವ ಕಷ್ಟಕಾರ್ಪಣ್ಯಗಳನ್ನು ಹೇಳತೀರದು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆದಂಥ ಇಂಥ ಅನೇಕ ಕಥೆಗಳು ಕರ್ನಾಟಕದ ಮಣ್ಣಿನಲ್ಲೂ ದಾಖಲಾಗಿರುತ್ತವೆ. 
ತಮಿಳಿನ ವೈರಮುತ್ತು ಬರೆದಿರುವ “ಕಳ್ಳಿಕಾಟ್ಟು ಇತಿಹಾಸಂ” ಕಾದಂಬರಿಯನ್ನು ಡಾ. ಮಲರ್‌ವಿಳಿ ‘ಕಳ್ಳಿಗಾಡಿನ ಇತಿಹಾಸ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದು, ಈ ಕೃತಿಯ ಕುರಿತು ಕೆ. ಪ್ರಭಾಕರನ್ ಬರಹ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ವಿನಿಮಯವೇ ನಿಸರ್ಗದ ನಿಯಮ: ನಾಗೇಶ ಹೆಗಡೆ ಮಾತುಗಳು

ಯಾವುದೋ ದೇಶದಿಂದ ಬರುವ ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿಯೇ ರೈತರು ಬದುಕು ನಡೆಸುತ್ತ, ಮಾರುಕಟ್ಟೆಗೆ ತಮ್ಮದೆಲ್ಲವನ್ನೂ ಮಾರಿಕೊಳ್ಳುವ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಬೇಕೆಂಬ ಸಣ್ಣ ಹಂಬಲವೊಂದು ಇಲ್ಲಿ ಮೊಳಕೆಯೊಡೆಯುತ್ತಿರುವುದು…

Read More

ಬರಹ ಭಂಡಾರ