ಗೋಧಿ ತೆನೆ ತೊಟ್ಟಿಲು…: ಚೈತ್ರಾ ಶಿವಯೋಗಿಮಠ ಸರಣಿ
ಪ್ರಕೃತಿ ಜೊತೆಗಿನ ಅವಳ ಪಿಸುಮಾತು ನಮ್ಮನ್ನೆಲ್ಲಾ ಒಂದು ನಳನಳಿಸುವ ಹೂದೋಟದಲ್ಲಿ ನಿಲ್ಲಿಸುತ್ತದೆ. ಮಕ್ಕಳಿಗಾಗಿ ಬರೆದ ಉಪ್ಪು, ರೊಟ್ಟಿ, ನೀರಿನ ಕವಿತೆಗಳು ಬಾಯಾರಿದವರ ದಾಹವನ್ನು ಹಿಂಗಿಸುವಂಥವು. ಅವಳ ತಾಯಿಗರುಳಿನಿಂದ ಉಣಿಸುವ ನೆಲದ ಸೊಗಡಿನ ಅಮೃತದಂತಹ ಕವಿತೆಗಳು ಮನುಕುಲದ ಎದೆ ತುಂಬಿಸುವಂಥವು.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿಯಲ್ಲಿ ಗೇಬ್ರಿಯಲ್ಲ ಮಿಸ್ತ್ರಾಲ್ ಅವರ ಬದುಕು ಮತ್ತು ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ