Advertisement

Tag: ಜಯಂತ ಕಾಯ್ಕಿಣಿ

ಅಪರೂಪದ ಗ್ರೂಪ್ ಫೋಟೋ: ಜಯಂತ ಕಾಯ್ಕಿಣಿ ಬರಹ

ವ್ಯಕ್ತಿಗತವಾಗಿ ವಿಭಿನ್ನ ಹುಡುಕಾಟ, ನೋಟ, ನಿಲುವುಗಳಿದ್ದರೂ, ಒಟ್ಟಾರೆ ಸೇರಿ ಏನೋ ಒಂದು ಒಳ್ಳೆಯದರಲ್ಲಿ ತೊಡಗಿರುವ ಭಾವವೊಂದು ಇಲ್ಲಿ ನಿಚ್ಚಳವಾಗಿದೆ. ‘ಬೇಂದ್ರೆ-ತರಾಸು ತೊಡೆನಾಟʼ ಇದಕ್ಕೆ ಸೊಗಸಾದ ಸಾಕ್ಷಿ. ಬೇಂದ್ರೆ ಮತ್ತು ಅಡಿಗರ ನಡುವೆ ಕಾಯ್ಕಿಣಿ, ಎಕ್ಕುಂಡಿ, ಶರ್ಮ ಇರುವುದೇ ಒಂದು ರೂಪಕ. ಬಹುಶಃ ಇದು ಆಗ ನಡೆದಿದ್ದ ಕುಮಟಾ ಸಾಹಿತ್ಯ ಸಮ್ಮೇಳನಕ್ಕೆ ಬಂದ ಕೆಲವು ಅತಿಥಿಗಳು ಗೋಕರ್ಣವನ್ನೂ ನೋಡಿಕೊಂಡು ಹೋಗಲು ಬಂದಾಗ ನಡೆದ ಕೂಟ ಕಲಾಪ….
ಕವಿ, ಕತೆಗಾರ, ಸಿನಿಮಾ ಹಾಡುಗಳ ಸರದಾರ, ಜಯಂತ ಕಾಯ್ಕಿಣಿ ತಮ್ಮ ತಂದೆ; ವಿದ್ವಾಂಸ, ವಿಮರ್ಶಕ, ಸಂಶೋಧಕ ಗೌರೀಶ ಕಾಯ್ಕಿಣಿ ಮತ್ತು ಅವರ ಸಮಕಾಲೀನ ಬರಹಗಾರರರನ್ನು ಅಪರೂಪದ ಫೋಟೋವೊಂದರ ಮೂಲಕ ನೆನಪಿಸಿಕೊಂಡಿದ್ದಾರೆ.

Read More

ಮುಕ್ತ ಹಾಜರಿ: ಮುಕುಂದ ಜೋಷಿ: ಜಯಂತ ಕಾಯ್ಕಿಣಿ ಕೃತಿಯ ಬರಹ

ಅವರ ಆ ಪುಸ್ತಕಕ್ಕೆ ಅವರ ಹಕ್ಕೊತ್ತಾಯದ ಮೇಲೆ ನಾನು ಬ್ಲರ್ಬ್ ಬರೆದಿದ್ದೆ. ಈ ಬಗ್ಗೆ ನಮ್ಮ ನಡುವೆ ಒಂದು ಜೋಕ್ ಇತ್ತು. ಏನೆಂದರೆ ಆ ಪುಸ್ತಕ ಮುದ್ರಣ ಶುರುವಾಗುವ ಹಂತದಲ್ಲಿದೆ ಎಂದು ತಿಳಿದು ಅಜಿತ್ ಪಂಜಾಬ್‌ನಲ್ಲಿ ಸೇರಿ ನಾವು ಬೀರೋಚಿತವಾಗಿ ಸಿಲೆಬ್ರೇಟ್ ಮಾಡುವಾಗ, ಅವರು ಚೂರು ತೊದಲುತ್ತ, “ಈ ಪುಸ್ತಕ ಯಾವಾಗರೆ ಬರ್ಲಿ, ಅದಕ್ಕೆ ಬಲ್ಬ್ ಮಾತ್ರ ನೀವೇ ಬರೀಬೇಕ್ರಿ’’ – ಎಂದರು. ಅಂದಿನಿಂದ ಬ್ಲರ್ಬ್ ಪದಕ್ಕೆ ಪರ್ಯಾಯವೆಂಬಂತೆ ನಾವು ಬಲ್ಬ್ ಎಂದೇ ಬಳಸುತ್ತಿದ್ದೆವು. ಎಷ್ಟು ಕ್ಯಾಂಡಲಿಂದು ಇತ್ಯಾದಿ ವಿವರಗಳೊಂದಿಗೆ. ಯಾವುದಾದರೂ ಹೊಸ ಪುಸ್ತಕದ ಹಿನ್ನುಡಿಯಲ್ಲಿ ಹುರುಳಿಲ್ಲದಿದ್ದರೆ, ‘‘ಝೀರೋ ಕ್ಯಾಂಡಲ್ ಬಲ್ಬ್ರೀ” ಅಂತಿದ್ರು.
ಜಯಂತ ಕಾಯ್ಕಿಣಿ ಕೃತಿ “ತಾರಿ ದಂಡೆ”ಯ ಮತ್ತೊಂದು ಬರಹ ನಿಮ್ಮ ಓದಿಗೆ

Read More

‘ಮಾವಿನ ತುಮಕಿʼ: ಮಾಮಾ ಶಾಂತಾ: ಜಯಂತ ಕಾಯ್ಕಿಣಿ ಕೃತಿಯ ಬರಹ

ಯಾವುದೇ ಬಸ್ಸು ಹಿಡಿಯಲು ಸರಿಯಾದ ಸಮಯಕ್ಕೆ ಅಥವಾ ಚೂರು ಮುಂಚಿತವಾಗಿ ಆಕೆ ಹೋಗಿದ್ದೇ ಇಲ್ಲ. ಬಸ್ಸು ಹೊರಡುವ ಟೈಮಿಗೆ ಆಕೆ ಮಹಾರಾಣಿಯಂತೆ ನಿಧಾನಕ್ಕೆ ಮನೆಯಿಂದ ಹೊರಡುತ್ತಿದ್ದಳು. ಮತ್ತು ಮನೆಯಲ್ಲಿದ್ದ ನನ್ನನ್ನೋ ರಾಜೇಂದ್ರನನ್ನೋ ರಮಾನಂದನನ್ನೋ “ಹೋಗು ಬಸ್ ನಿಲ್ಲಿಸು” ಎಂದು ಬಸ್ ಸ್ಟ್ಯಾಂಡಿಗೆ ಅಟ್ಟುತ್ತಿದ್ದಳು. ನಾವ್ಯಾರೂ ಇರದಿದ್ದರೆ ಹಾದಿಯಲ್ಲಿ ಸಿಗುವ ಯಾವುದಾದರೂ ಸೈಕಲ್ ಸವಾರರನ್ನು ಓಡಿಸುತ್ತಿದ್ದಳು. ಸಣ್ಣ ಊರಿನ ಬಸ್‌ಸ್ಟ್ಯಾಂಡ್ ಕಂಟ್ರೋಲರ್ ಎಲ್ಲರಿಗೂ ಪರಿಚಿತರಾಗಿದ್ದರಿಂದ ಒಮ್ಮೊಮ್ಮೆ ನಿಲ್ಲಿಸುತ್ತಿದ್ದರು. ಕೆಲವೊಮ್ಮೆ ಬಸ್ಸು ಹೋಗಿಬಿಟ್ಟಿರುತ್ತಿದ್ದವು. ಆಗ ಎಲ್ಲರೂ ಬೈಸಿಕೊಳ್ಳುತ್ತಿದ್ದೆವು.
ಜಯಂತ ಕಾಯ್ಕಿಣಿ ಕೃತಿ “ತಾರಿ ದಂಡೆ”ಯ ಬರಹ ನಿಮ್ಮ ಓದಿಗೆ

Read More

ತಾರಿದಂಡೆ – ಕಳೆದು ಹೋದ ಬದುಕಿನ ಸುಂದರ ಯಾನ: ಶ್ವೇತಾ ಹೊಸಬಾಳೆ ಬರಹ

ಈ ಮುತ್ತಿನಂಥಾ ಮಾತುಗಳ ಸರಣಿ ಮುಂದಿನ ಬರಹದಲ್ಲೂ ಮಾಲೆಯಾಗಿ ನಾಲ್ಕು ಸಾಲು ಗೀಚಿಯೋ, ಫೇಸ್ಬುಕ್, ವಾಟ್ಸ್ ಅಪ್‌ಗಳ ಸ್ಟೇಟಸ್‌ಗಳಲ್ಲಿ ಬರುವ ಕವನಗಳನ್ನೋದಿಕೊಂಡು ಬೀಗುವವರ ಕಿವಿಹಿಂಡಿದೆ. “ಕವಿತೆ ಒಂದು ಜೀವನ ದೃಷ್ಟಿ, ಎಷ್ಟೆಲ್ಲಾ ಸಂವೇದನಾಶೀಲರ ಪ್ರಜ್ಞಾ ಪ್ರವಾಹದ ಮನೋಸಂಗಮದಿಂದ ಅರಳುವ ಜೀವನ ಕಲೆ” ಎನ್ನುತ್ತಾ ಪರಂಪರೆಯನ್ನು ಅರಿತಿರುವುದರ ಜೊತೆಗೆ ಕವಿತಾರಚನೆಗೆ ಆಳವಾದ ಧ್ಯಾನ ಅಧ್ಯಯನದ ಅಗತ್ಯವಿದೆ ಎನ್ನುವದನ್ನು ಹೇಳುತ್ತದೆ. ಅವರ ಪುಟ್ಟ ಪುಟ್ಟ ವಾಕ್ಯಗಳನ್ನು ಓದುವುದೇ ಖುಷಿ.
ಜಯಂತ ಕಾಯ್ಕಿಣಿಯವರ “ತಾರಿದಂಡೆ” ಕೃತಿಯ ಕುರಿತು ಶ್ವೇತಾ ಹೊಸಬಾಳೆ ಬರಹ

Read More

ಜೊತೆಗಿರುವನು ಚಂದಿರ….: ಮೀನಾ ಮೈಸೂರು ಬರಹ

ಹೊಟ್ಟೆ ತುಂಬುವಷ್ಟು ಅನ್ನ ಸಿಕ್ಕರದೆ ಐಭೋಗವೆಂದು ನಂಬಿದ್ದ ತಾಯಿ, ತನ್ನ ಮಗಳಿಗೆ ತನ್ನ ಗಂಡನಿಗಿಂತಲೂ ವಯಸ್ಸಾದ ಆ ಗ್ರಾಮದಲ್ಲೇ ಸಿರಿವಂತನೆನಿಸಿದ್ದ ಕಲಾಯಿ ವೃತ್ತಿ ಮಾಡುವ ಮುದುಕನಿಗೆ ಮಗಳನ್ನು ಮದುವೆ ಮಾಡಲು ಒಪ್ಪಿಕೊಳ್ಳುವಂತಹ ದೈನೇಸಿ ಸ್ಥಿತಿ. ಆದರೆ ಆ ಮಗಳು ನೆರೆಮನೆಯ ಅದೇ ಜನಾಂಗದ ಹುಡುಗನನ್ನು ಪ್ರೀತಿಸುವುದು ತಂದೆಗೆ ಗೊತ್ತಾಗುತ್ತದೆ.
“ಜೊತೆಗಿರುವನು ಚಂದಿರ” ನಾಟಕದ ಕುರಿತು ಮೀನಾ ಮೈಸೂರು ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ