ಕಾಣುತ್ತಿಲ್ಲವೇ ಅಲ್ಲಿ ಗೋದಿನಾಗರ…: ಡಾ. ಕೆ.ಬಿ. ಶ್ರೀಧರ್ ಕಾದಂಬರಿಯ ಪುಟಗಳು
ಪಲ್ಲವಿಯು ಮುಟ್ಟಿದಲ್ಲೆಲ್ಲಾ ರೋಹಿಣಿಯು ಸಡಿಲಗೊಂಡಳು. ಗಟ್ಟಿಯಾದ ಮೇಣವು ಬೆಂಕಿಯ ಕಾವಿಗೆ ಮೆತ್ತಗಾಗುವಂತೆ… ಗೌತಮನಿಗೆ ನಂಬಲಾಗಲಿಲ್ಲ, ಅರ್ಥವೂ ಆಗಲಿಲ್ಲ. ತನಗರಿಯದ ಯಾವುದೋ ಭಾಷೆಯಲ್ಲಿ ಇವರಿಬ್ಬರು ಸಂವಹಿಸುತ್ತಿದ್ದಾರೆ ಎಂದೆನಿಸಿತು. ಬಗೆಹರಿದಂತೆ ಕಂಡಿದ್ದ ಅನುಮಾನವು ಬುಗ್ಗೆಂದು ಹೊತ್ತಿಕೊಂಡಿತು. ಮೂತ್ರಕ್ಕೆ ಅವಸರವಾದಂತಾಗಿ ಬಚ್ಚಲ ಮನೆಗೆ ಓಡಿದ. ಪಲ್ಲವಿಯು ಮೆಲ್ಲಮೆಲ್ಲನೆ ರೋಹಿಣಿಯನ್ನು ನಡೆಸುತ್ತಾ ಮನೆಯೊಳಗೆ ಕರೆದುಕೊಂಡು ಬಂದು, ಸೋಫಾ ಮೇಲೆ ಕೂರಿಸಿದಳು.
ಡಾ. ಕೆ.ಬಿ. ಶ್ರೀಧರ್ ಹೊಸ ಕಾದಂಬರಿ “ಅನೂಹ್ಯ”ದ ಕೆಲವು ಪುಟಗಳು ನಿಮ್ಮ ಓದಿಗೆ
