ಮ.ಸು. ಕೃಷ್ಣಮೂರ್ತಿ ಅನುವಾದಿಸಿದ “ಅನಾಮದಾಸನ ಕಡತ” ಕಾದಂಬರಿಯ ಒಂದು ಅಧ್ಯಾಯ
ಅನಾಮದಾಸ ತುಂಬ ಹಿಂದಿನಿಂದ ಬರೆಯುತ್ತಾ ಬಂದಿದ್ದಾನೆ. ಆತನ ಕಡತದ ಒಂದು ಮನೋರಂಜಕ ಅಂಶ ರೈಕ್ವ ಆಖ್ಯಾನ. ಸುಮಾರು ನಲವತ್ತು ವರ್ಷಗಳ ಹಿಂದೆ ಆತ ಛಾಂದೋಗ್ಯ ಉಪನಿಷತ್ತಿನ ರೈಕ್ವ ಆಖ್ಯಾನದ ಮೇಲೆ ಒಂದು ಕಥೆ ಬರೆದಿದ್ದ. ಅದರ ಶೀರ್ಷಿಕೆ – ‘ಎಲ್ಲವೂ ಗಾಳಿ’ ಎಂದು. ಅದು ಎಲ್ಲೂ ಬೆಳಕು ಕಾಣಲಿಲ್ಲ. ಆತ ಕಥೆಯನ್ನು ತುಂಬ ಲಘು ಮನೋಭಾವದಿಂದ ಬರೆದಿದ್ದ. ಈಗ ಅದರ ಮತ್ತೊಂದು ರೂಪ ಅವನಿಗೆ ದೊರೆತಿದೆ. ತಾನು ಲಘುವಾದೆನಲ್ಲ ಎಂದು ಆತನಿಗೆ ಖೇದ. ಅದರ ಕೊನೆಗೆ ಆತ ಕೆಲವು ಹೊಸ ಪಂಕ್ತಿಗಳನ್ನು ಸೇರಿಸಿದನೆಂದು ಕಾಣುತ್ತದೆ.
ಡಾ. ಹಜಾರೀಪ್ರಸಾದ ದ್ವಿವೇದಿ ರಚಿಸಿರುವ “ಅನಾಮದಾಸನ ಕಡತ” ಕಾದಂಬರಿಯಯನ್ನು ಮ.ಸು. ಕೃಷ್ಣಮೂರ್ತಿ ಕನ್ನಡಕ್ಕೆ ಅನುವಾದಿಸಿದ್ದು ಅದರ ಒಂದು ಅಧ್ಯಾಯ ನಿಮ್ಮ ಓದಿಗೆ