‘ಕೊನೆಗೆ ಉಳಿಯುವುದು ಕಾವ್ಯವೇ’: ಸಂಗೀತ ರವಿರಾಜ್ ಬರಹ
ಕಾವ್ಯ ಸೃಷ್ಠಿಯಲ್ಲಿ ಮಾಗುತ್ತ ಸಾಗುವುದೇ ಕವಿತೆ ಉತ್ತಮವಾಗುತ್ತ ಹೋಗುವುದರ ಲಕ್ಷಣ. ಅದು ಸಿದ್ಧಿಸಿದ್ದು ಇಲ್ಲಿಯೇ ನಮಗೆ ಸಂಕಲನದುದ್ದಕ್ಕೂ ತೋಚಿದಂತಾಗುತ್ತದೆ. ಬರೆದ ಕಾವ್ಯವೆಂಬ ಹೊರೆಯನ್ನು ಮೆಲ್ಲನೆ ಇಳಿಬಿಟ್ಟು ಹಗುರಾಗಿ, ಮತ್ತೆ ಹೊಚ್ಚ ಹೊಸ ಬಹುದೊಡ್ಡ ಹೊರೆ ಹೊತ್ತು ಮತ್ತೆ ಹಗುರಾಗುತ್ತಾರೆ ಎಂಬಂತೆ ನಮಗಿಲ್ಲಿ ಭಾಸವಾಗುತ್ತದೆ. ಪ್ರೇಮವೆನುದರ ಕುರಿತು ಹಲವು ರೀತಿಯ ಭಿನ್ನ ಭಿನ್ನ ವ್ಯಾಖ್ಯಾನಗಳು ನಮ್ಮನ್ನು ದಂಗುಬಡಿಸುತ್ತವೆ.
ನಂದಿನಿ ಹೆದ್ದುರ್ಗ ಕವನ ಸಂಕಲನ “ಒಂದು ಆದಿಮ ಪ್ರೇಮ” ಕುರಿತು ಸಂಗೀತ ರವಿರಾಜ್ ಚೆಂಬು ಬರಹ