‘ದೇವ್ರು’ ಪದ್ಮನಾಭ ಭಟ್‌ ಹೊಸ ಕಾದಂಬರಿಯ ಕೆಲವು ಪುಟಗಳು

ಸುಬ್ಬಿ ಈಗ ಇದ್ದಿದ್ದರೆ ಏನು ಹೇಳುತ್ತಿದ್ದಳು? ಈ ಪುಟ್ಟ ಲಲಿತೆಯನ್ನು ಆ ದೇವ್ರುವಿನ ಎದುರಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದರೆ ಏನನ್ನಬಹುದು? ಹುಟ್ಟಾ ನೋಡೇ ಇರದ ಮನುಷ್ಯನನ್ನು ಅಣ್ಣ ಎಂದು ಹೇಳಿದರೆ ಒಪ್ಪಿಕೊಳ್ಳಬಹುದೇ? ದೇವ್ರು ಇವಳನ್ನು ನೋಡಿ ಹೇಗೆ ಪ್ರತಿಕ್ರಿಯಿಸಬಹುದು? ಹೀಗೆ ಹತ್ತು ಹಲವು ಆಲೋಚನೆಗಳು ಮನಸಲ್ಲಿ ಸುಳಿಯುತ್ತಲೇ ಇದ್ದವು. “ಅವ್ನ ಮತ್ತೆ ನನ್ನ ಋಣ ತೀರಿದೆ. ಇನ್ಮೇಲೆ ಅವ್ನಾಗೇ ಎದ್ರಿಗೆ ಬಂದ್ರೂ ನಾನು ಮಾತಾಡಿಸ್ಬಾರ್ದು’ ಎಂದುಕೊಂಡಳು. ಪದ್ಮನಾಭ ಭಟ್‌ ಶೇವ್ಕಾರ ಹೊಸ ಕಾದಂಬರಿ ‘ದೇವ್ರು’ ಅ.24ರಂದು ಬಿಡುಗಡೆ ಆಗಲಿದೆ. ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More