ಮುಳ್ಳಿನ ಮೇಲಿನ ಹೂವು: ವೇದಾ ಮನೋಹರ ಜೀವನ ಪಯಣದ ಕತೆ
ಈ ಹೋರಾಟಗಳಲ್ಲೆಲ್ಲಿಯೂ ನನಗೆ ಪಶ್ಚಾತ್ತಾಪವಿರಲಿಲ್ಲ. ಹಾಗೆ ನೋಡಿದರೆ ಇದು ನಾನೇ ಆಯ್ದುಕೊಂಡ ಬದುಕು. ನನ್ನ ಬದುಕನ್ನು ಅಪ್ಪ ಅಮ್ಮನ ಮಡಿಲಿಗೆ ಹಾಕಲಿಲ್ಲ. ಪ್ರೇಮಿಸಿ ಮದುವೆಯಾಗಿ ನನ್ನ ಹಾದಿಯನ್ನು ನಾನೇ ಕಂಡುಕೊಂಡೆ. ಮನೋಹರ್ ಅವರನ್ನು ಮದುವೆಯಾದ ಮೇಲೂ ಸಂಪೂರ್ಣವಾಗಿ ಅವರನ್ನು ಅವಲಂಬಿಸಕೂಡದು ಎಂಬ ತತ್ವ ನನ್ನದಿತ್ತು. ಅದಕ್ಕೆ ನೀರೆರೆದವರು ಮನೋಹರ್. ಅದೀಗ ಫಲ ಕೊಟ್ಟಿದೆ. ಯಾಕೆಂದರೆ ನಮ್ಮನ್ನು ನಾವು ನಂಬಿ ಮುನ್ನಡೆದಾಗ ಮಾತ್ರ ನಮಗೆ ಯಶಸ್ಸು ಸಿದ್ಧ ಎಂಬ ತತ್ವದಡಿ ಬದುಕಿದವಳು ನಾನು.
ಭಾರತಿ ಹೆಗಡೆ ನಿರೂಪಣೆಯ ವೇದಾ ಮನೋಹರ ಜೀವನ ಪಯಣದ ಕೃತಿ “ಪಂಚಮವೇದ”ದ ಒಂದು ಅಧ್ಯಾಯ ನಿಮ್ಮ ಓದಿಗೆ