ಹೊಸ ಚಿಂತನೆ..ಹೊಸ ತಿರುವು..: ಎಸ್. ಜಯಶ್ರೀನಿವಾಸ ರಾವ್ ಸರಣಿ
ಅವರ ಕೆಲವು ಕವಿತೆಗಳು ಕೇವಲ ಆರು ಪದಗಳಷ್ಟೇ ಉದ್ದವಿರುತ್ತವೆ – ಇದು ಅವಶ್ಯಕತೆ ಮತ್ತು ಸಾಧ್ಯತೆಯತ್ತ ಗಮನ ಸೆಳೆಯುವ ದಿಟ್ಟವಾದ ನಡೆ. ಅತಿ ತೆಳ್ಳನೆಯ ವಸ್ತುಗಳಿಂದ ಇಂತಹ ವಿಸ್ತೃತವಾದ ಕವಿತೆಗಳನ್ನು ರಚಿಸುವ ಅವರ ಸಾಮರ್ಥ್ಯವು ಭಾಗಶಃ, ಐಸ್ಲ್ಯಾಂಡಿಕ್ ಇತಿಹಾಸದ ಅವರ ಜ್ಞಾನದಿಂದ ಮತ್ತು ಪದಸೃಷ್ಟಿ ಬಗ್ಗೆ ಅವರಿಗಿರುವ ಒಲವಿನಿಂದ ಬರುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಐಸ್ಲ್ಯಾಂಡ್ ದೇಶದ ಖ್ಯಾತ ಕವಿ ಮಾಗ್ನುಸ್ ಸಿಗುರ್ದ್ಸನ್-ರವರ
(Magnus Sigurðsson) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ