ಕನ್ನಡಿಗೆ ಗೊತ್ತಿಲ್ಲ. ಕಡಲಿಗೆ ಗೊತ್ತು: ಎಸ್. ಜಯಶ್ರೀನಿವಾಸ ರಾವ್ ಸರಣಿ

ಅವರು ರಮಣೀಯ ದೃಶ್ಯಗಳನ್ನು ಕಲ್ಪಿಸಿಕೊಳ್ಳುವುದಿಲ್ಲ; ಬದಲಿಗೆ ದಿನನಿತ್ಯದ ವಿದ್ಯಮಾನಗಳ ಜತೆಗೆ ನಗರ ಮತ್ತು ಅದರ ನಿವಾಸಿಗಳ ಜತೆ ಜರಗಿದ ಮಾತುಕತೆಗಳಲ್ಲಿ ಅವರು ಪಡೆದ ಸಂತೋಷಕ್ಕೆ ಒತ್ತು ನೀಡುತ್ತಾರೆ. ಈ ಕವಿತೆಗಳ ವಿಶಿಷ್ಟ ಛಾಪು ಕವಿಯ ಮೌಖಿಕ ವಾಕ್ಚಾತುರ್ಯವೂ ಆಗಿದೆ; ಲಯ ಮತ್ತು ಮನವಿ ಜತೆಯಾಗಿರುವ ಕವಿತೆಗಳಿವು, ಮತ್ತು ಈ ಕವನಗಳು ವೋಲ್ಡ್‌ ಅವರಿಗೆ ವಿಶಾಲವಾದ ಮತ್ತು ನಿಷ್ಠಾವಂತ ಓದುಗರ ಸಮೂಹವನ್ನು ತಂದುಕೊಟ್ಟಿತ್ತು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ನೋರ್ವೇ (Norway) ದೇಶದ ಕವಿ ಯಾನ್ ಎರಿಕ್ ವೊಲ್ಡ್-ರ (Jan Erik Vold) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More