Advertisement

Tag: ಶೇಷಾದ್ರಿ ಗಂಜೂರು

ಒಲಿವಿಯಾ ನ್ಯೂಟನ್ ಜಾನ್ ಮತ್ತು ಬೆಂಗಳೂರು ಒಳ ಚರಂಡಿ ಆಫೀಸು

ಮ್ಯಾಕ್ಸ್ ಬೋರ್ನ್ ಬೆಂಗಳೂರಿನಲ್ಲಿದ್ದ ಕೆಲವೇ ತಿಂಗಳುಗಳಲ್ಲಿ, ರಾಮನ್‌ರ ಮೂಲಕ ಅವರಿಗೆ ಮೈಸೂರು ಸಂಸ್ಥಾನದ ಅಂದಿನ ಹಲವಾರು ಗಣ್ಯರ ಪರಿಚಯವಾಯಿತು. ಹೀಗೆ ಪರಿಚಯವಾದವರಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಸಾಹೇಬರೂ ಒಬ್ಬರು. ಆ ಕಾಲದಲ್ಲಿ, ಇಸ್ಮಾಯಿಲ್ ಸಾಹೇಬರು ಬೆಂಗಳೂರಿನಲ್ಲಿ ಹಲವಾರು ಸಾರ್ವಜನಿಕ ಮೂಲ ಸೌಕರ್ಯ ಮತ್ತು ಕಟ್ಟಡಗಳನ್ನು ನಿರ್ಮಿಸುವ ಆಲೋಚನೆಯಲ್ಲಿದ್ದರು. ಈ ಕಟ್ಟಡಗಳನ್ನು ವಿನ್ಯಾಸ ಮಾಡಲು ಅವರು ಒಬ್ಬ ನುರಿತ ಆರ್ಕಿಟೆಕ್ಟ್‌ಗಾಗಿ ಹುಡುಕಾಟದಲ್ಲಿದ್ದರು.
ಶೇಷಾದ್ರಿ ಗಂಜೂರು ಬರಹ

Read More

ಬಹುಮಾನವಾಗಿ ಸಿಕ್ಕ ಆನೆಮರಿಯೊಂದರ ಜೀವನಗಾಥೆ

ಕೊರೆಯುವ ನೆಲದ ಮೇಲೆ ಕಾಲಿಡುತ್ತಿದ್ದ ಆನಾಬೆಲ್‌ಳ ಪಾದಗಳಲ್ಲಿ ಗಾಯವಾಗತೊಡಗಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಆನೆಗಳಲ್ಲಿ, ಪಾದಗಳೂ ನಮ್ಮ ಕಿವಿಯೊಳಗಿನ ಇಯರ್-ಡ್ರಂಗಳಂತೆ ಕೆಲಸಮಾಡುತ್ತವೆ. ವಿಜ್ಞಾನಿಗಳು ಹೇಳುವಂತೆ, ಆನೆಯ ಗುಂಪೊಂದು ನಡೆಯುತ್ತಿದ್ದರೆ, ಆ ಗುಂಪಿನಿಂದ ಇಪ್ಪತ್ತು ಮೈಲಿ ದೂರದಲ್ಲಿರುವ ಆನೆಯೊಂದು, ಆ ಆನೆಗಳ ನಡೆತದಿಂದಾಗುವ ಕಂಪನಗಳನ್ನು ತನ್ನ ಪಾದದ ಮೂಲಕವೇ ಗುರುತಿಸಬಲ್ಲದಂತೆ.
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿಯಲ್ಲಿ ಆನೆಮರಿಯ ಬದುಕಿನ ಕತೆಯೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ

Read More

ಇನ್ಸುಲಿನ್ ಎಂಬ ‘ಜೀವಕಾರಕ’ದ ವಿಕಾಸ

ಎರಡು ವರ್ಷ ಮೆಡಿಕಲ್ ಓದಿದ. ಆ ಶಿಕ್ಷಣ ಮುಗಿಸುವ ಮುನ್ನವೇ ಮಿಲಿಟರಿ ಸೇರಲು ಅರ್ಜಿ ಹಾಕಿದ. ಅವರು ಸೇರಿಸಿಕೊಳ್ಳಲಿಲ್ಲ. ಕೆಲವು ತಿಂಗಳು ಬಿಟ್ಟು ಮತ್ತೆ ಪ್ರಯತ್ನಿಸಿದ. ಮತ್ತೆ ನಕಾರ. ಒಂದು ವರ್ಷದ ನಂತರ ಮಗದೊಮ್ಮೆ ಪ್ರಯತ್ನಿಸಿದ. ಅಷ್ಟರಲ್ಲಾಗಲೇ, ಮೊದಲ ಮಹಾಯುದ್ಧ ಪೂರ್ಣ ಭರಾಟೆಯಲ್ಲಿ ಸಾಗಿತ್ತು. “ಸೇನೆಗೆ ಸೇರ್ತೀನಿ” ಅನ್ನುವವರನ್ನು “ಬೇಡ” ಅನ್ನುವ ಪರಿಸ್ಥಿತಿಯಲ್ಲಿ ಅಂತೂ ಕೆನಡಾ ಇರಲಿಲ್ಲ. ಅದರಲ್ಲೂ, ರಣರಂಗದಲ್ಲಿ ವೈದ್ಯರ ಕೊರತೆ ಕಾಡುತ್ತಿತ್ತು. ಈ ಬಾರಿ ಅವನ ಅರ್ಜಿ ಫಲಿಸಿತು.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ

Read More

ನಮ್ಮ ಭೂಮಿಯ ವಯಸ್ಸೆಷ್ಟು?

ಪ್ರಾಚೀನ ಗ್ರೀಕ್ ತತ್ವಶಾಸ್ತ್ರಜ್ಞರಿಂದ ಹಿಡಿದು, ಧಾರ್ಮಿಕ ಗುರುಗಳೂ, ಮೇಧಾವಿಗಳೂ ಈ ಪ್ರಶ್ನೆಗೆ ತಮ್ಮದೇ ವಿಧಾನಗಳಲ್ಲಿ ಉತ್ತರ ನೀಡಲು ಪ್ರಯತ್ನಿಸಿದ್ದಾರೆ.  ಉದಾಹರಣೆಗೆ, ಬೈಬಲ್ ಆಧಾರದ ಮೇಲೆ, “ಆದಿ ಮಾನವ” ಆಡಂ ನ ವರೆಗಿನ ತಲೆಮಾರುಗಳ ಲೆಕ್ಕದಲ್ಲಿ, ನಮ್ಮ ಭೂಮಿಗೆ, ಕೇವಲ ಆರರಿಂದ ಹತ್ತು ಸಾವಿರ ವರ್ಷದ ಹರೆಯ. ಆದರೆ, ಹತ್ತೊಂಬತ್ತನೆಯ ಶತಮಾನದ ಖ್ಯಾತ ಭೌತಶಾಸ್ತ್ರಜ್ಞ ಲಾರ್ಡ್ ಕೆಲ್ವಿನ್ನನ ಲೆಕ್ಕಾಚಾರದ ಪ್ರಕಾರ, ಭೂಮಿಗೆ ಸುಮಾರು ಹತ್ತು ಕೋಟಿ ವರ್ಷ ವಯಸ್ಸು. ಕೆಲ್ವಿನ್ನನ ಲೆಕ್ಕಾಚಾರ, ಅವನ ಸಮಕಾಲೀನನಾಗಿದ್ದ…

Read More

ಹಲವು ಬಣ್ಣಗಳ ಜನ್ಮ ಪುರಾಣ….

ಹಿಂದಿನ ಶತಮಾನಗಳ ಕಲಾವಿದರು, ತಮ್ಮ ಪೇಂಟಿಂಗ್‌ಗಳಿಗೆ ಬೇಕಿರುವ ಬಣ್ಣದ ಕಣಗಳನ್ನು ನಿರ್ಮಿಸಲು ಪಡಬಾರದ ಪಾಡು ಪಟ್ಟಿದ್ದಾರೆ. ಕೆಂಪು ಮಣ್ಣು, ಕಲ್ಲು, ಬೂದಿ, ನಾನಾ ಗಿಡಗಳು, ಹೂವು-ಕಾಯಿ-ಹಣ್ಣುಗಳು, ಪಶು-ಪ್ರಾಣಿಗಳ ಅಂಗಗಳು, ಕಡೆಗೆ ಕ್ರಿಮಿ-ಕೀಟಗಳನ್ನೂ ಅರೆದು ತಮಗೆ ಬೇಕಾದ ಬಣ್ಣದ ಛಾಯೆಯನ್ನು ಸೃಷ್ಟಿಸಲು ಯತ್ನಿಸಿದ್ದಾರೆ. ಉದಾಹರಣೆಗೆ, ಕಾಕಿನೀಲ್ ಎಂಬ ಸಣ್ಣ ಕೀಟ. ಇದು, ಬಹು ಮಟ್ಟಿಗೆ, ಪಾಪಾಸು ಕಳ್ಳಿಗಳನ್ನು ಕಾಡುವಂತಹ ಕೀಟ. ಈ ಕೀಟವನ್ನು ಸಂಗ್ರಹಿಸಿ, ಒಣಗಿಸಿ…

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಜರ್ಮನಿಯಿಂದ ಕನ್ನಡಕ್ಕೆ ಬಂದ ‘ಈಡಾ’

ಕ್ಷಣ ಮೌನ. ಉರ್ಸುಲಾಳ ಜೊತೆ ಮಾತನಾಡದೆಯೇ ಹಾಯಾಗಿ ಕುಳಿತಿರಬಹುದು. ಅವಳು ಪೆದ್ದುಪೆದ್ದಾಗಿ ಏನೇನೋ ಪ್ರಶ್ನೆಗಳನ್ನು ಕೇಳುವುದಿಲ್ಲ. ತನ್ನ ಮೇಲೆ ಹುಡುಗನೊಬ್ಬ ಬಂದೆರಗಿದ ಘನವಾದ ವಿಷಯವನ್ನು ಹಂಚಿಕೊಳ್ಳಲು ಮಾತ್ರ…

Read More

ಬರಹ ಭಂಡಾರ