ಹೊನ್ನೆಯ ಹಾಡಿನಂಥಾ ಆತ್ಮಕಥನ: ಕೆ.ಎನ್.ಲಾವಣ್ಯ ಪ್ರಭಾ ಬರಹ
ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತು ಆಕಾಶವಾಣಿ ಗಾಯಕಿಯಾಗಿ ಭಾವಗೀತೆಯನ್ನು ಪಿ. ಕಾಳಿಂಗರಾವ್ ಅವರ ಜೊತೆಯಲ್ಲಿ ಹಾಡಿ ಪ್ರಚಾರ ನೀಡಿದ್ದು ಮೊದಲಿಗೆ ಲೀಲಾವತಿಯವರೇ. ಭಾವಗೀತೆ ಭಕ್ತಿಗೀತೆ ಕೀರ್ತನೆಗಳು ವಚನಗಳು ಗಜಲ್ಗಳು ಜನಪದಗೀತೆಗಳು, ರವೀಂದ್ರ ಸಂಗೀತ ಹೀಗೆ ಬೇರೆ ಭಾಷೆಯ ಇತರ ಪ್ರಾಕಾರಗಳನ್ನೂ ಕಲಿತು ಹಾಡಿರುವುದಲ್ಲದೇ ಮಕ್ಕಳ ಕತೆಗಳು ರಂಗರೂಪಕಗಳು ಎಲ್ಲಾ ರೀತಿಯಲ್ಲಿ ಅವರು ಆಕಾಶವಾಣಿಯಲ್ಲಿ ಕೆಲಸ ನಿರ್ವಹಿಸುತ್ತಲೇ ಮುಂದೆ ಆಕಾಶವಾಯ ಸಂಗೀತ ಸಂಯೋಜಕಿಯೂ ಆಗುತ್ತಾರೆ.
ಎಚ್. ಆರ್. ಲೀಲಾವತಿ ಆತ್ಮಕಥನ “ಹಾಡಾಗಿ ಹರಿದಾಳೆ” ಕೃತಿಯ ಕುರಿತು ಕೆ.ಎನ್.ಲಾವಣ್ಯ ಪ್ರಭಾ ಬರಹ